Headlines

‘ಜನ ನಾಯಗನ್’ ಲೀಕ್: ಸೆನ್ಸಾರ್ ಮಂಡಳಿ ಸ್ಪಷ್ಟನೆ, ನಿರ್ಮಾಪಕರ ಅಂಗಳಕ್ಕೆ ಚೆಂಡು

‘ಜನ ನಾಯಗನ್’ ಲೀಕ್: ಸೆನ್ಸಾರ್ ಮಂಡಳಿ ಸ್ಪಷ್ಟನೆ, ನಿರ್ಮಾಪಕರ ಅಂಗಳಕ್ಕೆ ಚೆಂಡು


'ಜನ ನಾಯಕ್' ಲೀಕ್: ಸೆನ್ಸಾರ್ ಮಂಡಳಿ ಸ್ಪಷ್ಟನೆ, ನಿರ್ಮಾಪಕರ ಅಂಗಳಕ್ಕೆ ಚೆಂಡು

ತಮಿಳು ನಟ ವಿಜಯ್ (ತಲಪತಿ ವಿಜಯ್) ಅಭಿನಯದ ಬಹುನಿರೀಕ್ಷಿತ ಚಿತ್ರ ‘ಜನ ನಾಯಕನ್’ ಬಿಡುಗಡೆಗೆ ಸಾಕಷ್ಟು ಅಡ್ಡಿಗಳು ಎದುರಾಗಿದ್ದವು. ರಿಮೇಕ್ ಸಿನಿಮಾ ಆಗಿದ್ದರೂ ಸಹ ಸಿಬಿಎಫ್ ಸಿಯು ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಲಿಲ್ಲ. ನ್ಯಾಯಾಲಯದಲ್ಲಿ ಸಹ ನಿರ್ಮಾಪಕರಿಗೆ ನ್ಯಾಯ ಧಕ್ಕಿರಲಿಲ್ಲ. ಇದು ಹೀಗಿರುವಾಗ ಇತ್ತೀಚೆಗಷ್ಟೇ ‘ಜನ ನಾಯಕನ್’ ಸಿನಿಮಾ ಎಚ್‌ಡಿ ಪ್ರಿಂಟ್ ಸೊರಿಕೆ ಆಗಿದೆ. ಇದು ಚಿತ್ರತಂಡಕ್ಕೆ ಭಾರಿ ನಷ್ಟವನ್ನು ಉಂಟು ಮಾಡಿದೆ. ಆದರೆ ಈ ಸೊರಿಕೆ ಸಿಬಿಎಫ್ ಸಿ ಕಡೆಯಿಂದಲೇ ಎಂಬ ಆರೋಪಗಳು ಕಳೆದ ದಿನಗಳಿಂದ ಕೇಳಿ ಬರುತ್ತಿವೆ. ಆದರೆ ಇದೀಗ ಪಿಐಬಿ (ಕೇಂದ್ರ ವಾರ್ತಾ ಇಲಾಖೆ) ಈ ಬಗ್ಗೆ ಸ್ಪಷ್ಟನೆ ನೀಡಿದೆ. ಈ ಸಿನಿಮಾ ಲೀಕ್ ಹಿಂದೆ ಸಿಬಿಎಫ್ ಸಿ ಇದೆ ಎಂಬ ಆರೋಪವನ್ನು ತಳ್ಳಿ ಹಾಕಿದೆ.

ಈ ಕುರಿತು ಟ್ವೀಟ್ ಮಾಡಿರುವ ಪಿಐಬಿ, ‘ಜನ ನಾಯಕನ್’ ತಮಿಳು ಚಿತ್ರವು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಇಂದ ಸೊರಿಕೆಯಾಗಿದೆ ಎಂಬ ವರದಿಗಳು ಆಧಾರರಹಿತ ಮತ್ತು ದಾರಿ ತಪ್ಪಿಸುವಂತಿವೆ. ಪ್ರಮಾಣ ಪತ್ರಕ್ಕಾಗಿ ಸಲ್ಲಿಸಲಾಗುವ ಎಲ್ಲಾ ಚಲನಚಿತ್ರಗಳಿಗಾಗಿ CBFC (CBFC) ಸುರಕ್ಷಿತವಾದ KDM (ಕೀ ಡೆಲಿವರಿ ಸಂದೇಶ) ವ್ಯವಸ್ಥೆಯು ಅನುಸರಿಸುತ್ತದೆ. ಸಿನಿಮಾವನ್ನು ಪಾಸ್‌ವರ್ಡ್ ಮೂಲಕ ಸುರಕ್ಷಿತವಾಗಿರಿಸಲಾಗಿರುತ್ತದೆ ಮತ್ತು ಈ KDM ಕೇವಲ ನಿರ್ಮಾಪಕರು ಅಥವಾ ಚಲನಚಿತ್ರ ತಯಾರಕರ ಬಳಿ ಮಾತ್ರ ಇರುತ್ತದೆ. ಸೂಕ್ತವಾದ ಕೆಡಿಎಂ (KDM) ಇಲ್ಲದೆ, ಚಿತ್ರವನ್ನು ವೀಕ್ಷಿಸಲು ಸಾಧ್ಯವಿಲ್ಲ. ‘ಜನ ನಾಯಕನ್’ ಚಿತ್ರದ ‘ಡಿಸಿಪಿ’ (ಡಿಜಿಟಲ್ ಸಿನಿಮಾ ಪ್ಯಾಕೇಜ್) ಅಂದರೆ ಮಾರ್ಚ್ 17 ರಂದು ಮುಂಬೈನಲ್ಲಿ ಅರ್ಜಿದಾರರಿಗೆ ಅಧಿಕೃತವಾಗಿ ಹಸ್ತಾಂತರಿಸಲಾಗಿದೆ, ಅಂದಿನಿಂದ ಅದು ಅವರ ಬಳಿಯೇ ಇದೆ’ ಎಂದಿದೆ.

ಇದನ್ನೂ ಓದಿ:’ಜನ ನಾಯಕನ್’ ಲೀಕ್‌ಗೆ ಅವರಿಬ್ಬರೇ ಕಾರಣ: ವಿಜಯ್ ಫ್ಯಾನ್ಸ್ ಆರೋಪ

ಆ ಮೂಲಕ ಸಿಬಿಎಫ್‌ಸಿ ಬಳಿ ಇರುವ ಸಿನಿಮಾ ಪಾಸ್‌ವರ್ಡ್ ಪ್ರೊಟೆಕ್ಡ್ ರೀತಿಯದ್ದಾಗಿದ್ದು, ಈ ಪಾಸ್‌ವರ್ಡ್ ಸಿನಿಮಾ ನಿರ್ಮಾಪಕ ಅಥವಾ ಸಿನಿಮಾಕ್ಕೆ ಸಂಬಂಧಿಸಿದ ತಂಡದ ಬಳಿಯೂ ಇದೆ. ಅಲ್ಲಿಗೆ ಸಿನಿಮಾ ಲೀಕ್ ಮಾಡುವ ಅವಕಾಶ ಸಿಬಿಎಫ್‌ಸಿ ಮಾತ್ರವೇ ಅಲ್ಲ ಸಿನಿಮಾ ತಂಡದವರು ನಿರ್ಮಾಪಕರು ಹಾಗೂ ನಿರ್ದೇಶಕರಿಗೂ ಇದ್ದಾರೆ, ಅವರಿಂದಲೂ ಲೀಕ್ ಆಗಿರುವ ಸಾಧ್ಯತೆ ಇದೆ ಎಂದು ಪರೋಕ್ಷವಾಗಿ ಪಿಐಬಿ ಟ್ವೀಟ್‌ಗಳನ್ನು ಸೂಚಿಸುತ್ತಿದೆ.

‘ಜನ ನಾಯಕನ್’ ಸಿನಿಮಾದ ಕೆಲವು ಪ್ರಮುಖ ದೃಶ್ಯಗಳು ಸಣ್ಣ ಕ್ಲಿಪ್‌ಗಳ ರೂಪದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಬೆನ್ನಲ್ಲೇ ಪೂರ್ಣ ಪ್ರಮಾಣದ ಹೈ-ಡೆಫಿನಿಷನ್ (HD) ಆವೃತ್ತಿಯು ಪೈರಸಿ ವೆಬ್‌ಸೈಟ್‌ಗಳಲ್ಲಿ ಕಾಣಿಸಿಕೊಂಡಿದ್ದು ಚಿತ್ರತಂಡಕ್ಕೆ ದೊಡ್ಡ ಸಂಸ್ಥೆ ನೀಡಿದೆ. ಇಂದು ಮೆಗಾಸ್ಟಾರ್ ಚಿರಂಜೀವಿ, ಕಮಲ್ ಹಾಸನ್, ರಜನೀಕಾಂತ್, ವಿಜಯ್ ದೇವರಕೊಂಡ, ಪೂಜಾ ಹೆಗ್ಡೆ ಸೇರಿದಂತೆ ಈ ಸಿನಿಮಾ ಕಟುವಾಗಿ ಖಂಡಿಸಿದ್ದಾರೆ. ಅದರಲ್ಲೇ ಸಿಬಿಎಫ್ ಸಿ ಪರವಾಗಿ ಕೇಂದ್ರ ವಾರ್ತಾ ಇಲಾಖೆ ಸ್ಪಷ್ಟನೆ ನೀಡಿದೆ.

‘ಜನ ನಾಗನ್’ ಸಿನಿಮಾವನ್ನು ಪೈರಸಿ ಲಿಂಕುಗಳ ಮೂಲಕ ಡೌನ್‌ಲೋಡ್ ಮಾಡಲಾಗಿದೆ. ಆದರೆ ಸೈಬರ್ ಈ ಡೌನ್ ಲೋಡ್ ಮಾಡುವವರ ಮೇಲೂ ಕಣ್ಣಿಡಲಿದೆ ಎನ್ನಲಾಗುತ್ತಿದೆ. ‘ಜನ ನಾಯಕ’ ಲಿಂಕ್ ಹೆಸರಿನಲ್ಲಿ ಕೆಲವು ನಕಲಿ ಲಿಂಕ್ ಸೃಷ್ಟಿಸಿ, ಮಾಲ್ ವೇರ್ ದಾಳಿಯ ಅಥವಾ ವೈರಸ್ ದಾಳಿಯ ಎಚ್ಚರಿಕೆಯನ್ನೂ ಸಹ ಸಂಸ್ಥೆ ಹೊಂದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *