
ಮೇರುನಟ ಡಾ. ರಾಜ್ ಕುಮಾರ್ ಅವರ ಪುಣ್ಯಸ್ಮರಣೆ (ಸಾವಿನ ವಾರ್ಷಿಕೋತ್ಸವ) ಪ್ರಯುಕ್ತ ಇಂದು (ಏಪ್ರಿಲ್ 12) ಕುಟುಂಬದವರು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಅಭಿಮಾನಿಗಳು ಕೂಡ ಅಪಾರ ಸಂಖ್ಯೆಯಲ್ಲಿ ಬಂದು ಅಣ್ಣಾವ್ರಿಗೆ ನಮಿಸಿದ್ದಾರೆ. ರಾಜ್ಕುಮಾರ್ (ಡಾ ರಾಜ್ಕುಮಾರ್) ನಿಧನರಾಗಿ 20 ವರ್ಷಗಳು ಕಳೆದಿವೆ. ಆ ಬಗ್ಗೆ ರಾಘವೇಂದ್ರ ರಾಜ್ ಕುಮಾರ್ ಅವರು ಮಾತನಾಡಿದ್ದಾರೆ. ’20 ವರ್ಷ ಆಯ್ತು ಅಂತ ನಂಬೋಕೆ ಆಗುತ್ತಿಲ್ಲ. ಅವರು ನಮ್ಮ ಜೊತೆ ಇದ್ದಾರೆ ಅಂತ ಅಂದುಕೊಂಡಿದ್ದೇವೆ. ಅವರು ಸಂಪಾದನೆ ಮಾಡಿದ್ದು ಅಭಿಮಾನಿಗಳನ್ನು ಮಾತ್ರ. ಇಷ್ಟು ವರ್ಷ ಆದರೂ ಜನರು ಬಂದು ನಮಸ್ಕಾರ ಮಾಡುತ್ತಿದ್ದಾರೆ. ಅವರ ಸಿನಿಮಾಗಳಿಗೆ ಸಾವಿಲ್ಲ. ಅವೆಲ್ಲ ಲೈಬ್ರರಿ ಇದ್ದಂತೆ. ಯಾವಾಗಲೂ ಜನರು ನೋಡುತ್ತಾ ಇರುತ್ತಾರೆ. ಎಷ್ಟು ವರ್ಷ ಕಳೆದರೂ ಜನರು ಹೀಗೆ ಬರುತ್ತಾ ಇರುತ್ತಾರೆ. ಇದು ಆ ರೀತಿಯ ಸ್ಥಳವಾಗಿದೆ’ ಎಂದು ರಾಘವೇಂದ್ರ ರಾಜ್ಕುಮಾರ್ (ರಾಘವೇಂದ್ರ ರಾಜ್ಕುಮಾರ್) ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.