ಮಂಗಳೂರು: ಗಿಫ್ಟ್ ಪಡೆದು ಕೈಕೊಟ್ಟ ಕಿಲಾಡಿ ಲವರ್: ಆಶಿಕ್ ಸಾವಿನ ಕೇಸ್‌ನಲ್ಲಿ ಪ್ರೇಯಸಿ ಸೇರಿ ಮೂವರ ವಿರುದ್ಧ FIR | Mangaluru Insulted By Girl He Loved Young Man Surrendered To Death

ಮಂಗಳೂರು: ಗಿಫ್ಟ್ ಪಡೆದು ಕೈಕೊಟ್ಟ ಕಿಲಾಡಿ ಲವರ್: ಆಶಿಕ್ ಸಾವಿನ ಕೇಸ್‌ನಲ್ಲಿ ಪ್ರೇಯಸಿ ಸೇರಿ ಮೂವರ ವಿರುದ್ಧ FIR | Mangaluru Insulted By Girl He Loved Young Man Surrendered To Death



ಮಂಗಳೂರು: ಗಿಫ್ಟ್ ಪಡೆದು ಕೈಕೊಟ್ಟ ಕಿಲಾಡಿ ಲವರ್: ಆಶಿಕ್ ಸಾವಿನ ಕೇಸ್‌ನಲ್ಲಿ ಪ್ರೇಯಸಿ ಸೇರಿ ಮೂವರ ವಿರುದ್ಧ FIR | Mangaluru Insulted By Girl He Loved Young Man Surrendered To Death

ಮಂಗಳೂರಿನಲ್ಲಿ ಯುವಕನೊಬ್ಬ ಆತ್ಮ*ಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಪ್ರೇಮ ಪ್ರಕರಣದ ತಿರುವು ಸಿಕ್ಕಿದೆ. ಮೃತ ಯುವಕನ ಮೊಬೈಲ್‌ನಲ್ಲಿದ್ದ ವಾಟ್ಸಾಪ್ ಚಾಟ್ ಆಧಾರದ ಮೇಲೆ, ಆತ ಪ್ರೀತಿಸುತ್ತಿದ್ದ ಯುವತಿ ಮತ್ತು ಆಕೆಯ ತಾಯಿಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಎಫ್‌ಐಆರ್ ದಾಖಲಾಗಿದೆ.

ಪ್ರಿಯಕರನ ಸಾವಿಗೆ ಪ್ರಚೋದನೆ ನೀಡಿದ್ರಾ ಪ್ರೇಯಸಿ ಮತ್ತು ತಾಯಿ?

ಮಂಗಳೂರು: ಈದ್ ಹಬ್ಬದ ದಿನವೇ ಮಂಗಳೂರಿನಲ್ಲಿ ಯುವಕ ಆತ್ಮ*ಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ರೋಚಕ ಟ್ವಿಸ್ಟ್ ಸಿಕ್ಕಿದ್ದು, ಯುವಕ ಪ್ರೀತಿಸುತ್ತಿದ್ದ ಹುಡುಗಿ ಹಾಗೂ ಆಕೆಯ ತಾಯಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಮಂಗಳೂರಿನ ಮೂಡುಶೆಡ್ಡೆಯ ಎದುರುಪದವು ನಿವಾಸಿ 22 ವರ್ಷದ ಮೊಹಮ್ಮದ್ ಆಶಿಕ್ ಮಾರ್ಚ್‌ 21ರಂದು ಸಾವಿಗೆ ಶರಣಾಗಿದ್ದರು. ಈ ಪ್ರಕರಣ ಸಂಬಂಧ ತನಿಖೆ ನಡೆಸಿದ ಪೊಲೀಸರು ಯುವಕನ ಕುಟುಂಬದವರ ದೂರಿನ ಮೇರೆಗೆ ಆತ ಪ್ರೀತಿಸುತ್ತಿದ್ದ ಹುಡುಗಿ ಹಾಗೂ ಆಕೆಯ ತಾಯಿ ಸೇರಿದಂತೆ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಆಶಿಕ್ ಸಾವಿನ ಕೇಸ್‌ನಲ್ಲಿ ಪ್ರೇಯಸಿ ಸೇರಿ ಮೂವರ ವಿರುದ್ಧ ಎಫ್‌ಐಆರ್

ಪ್ರೀತಿಸಿದ ಯುವತಿಯಿಂದ ಅವಮಾನವಾಗಿ ಯುವಕ ಸಾವಿಗೆ ಶರಣಾಗಿದ್ದಾನೆ ಎಂದು ವರದಿಯಾಗಿದೆ. ಈ ಹಿನ್ನೆಲೆ ಆತ್ಮ*ಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಯುವತಿ ಆಕೆಯ ತಾಯಿ ಸೇರಿದಂತೆ ಮೂವರ ವಿರುದ್ಧ ಮಂಗಳೂರಿನ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರಂಭದಲ್ಲಿ ಇದೊಂದು ಸಾಮಾನ್ಯ ಆತ್ಮ*ಹತ್ಯೆ ಪ್ರಕರಣ ಎಂದು‌‌ ಭಾವಿಸಲಾಗಿತ್ತು. ಆದ್ರೆ ಆಶಿಕ್ ಮೊಬೈಲ್ ಪರಿಶೀಲಿಸಿದಾಗ ಸಾವಿನ‌ ಹಿಂದಿನ ಪ್ರೇಮ‌ ಪ್ರಕರಣ ಬೆಳಕಿಗೆ ಬಂದಿದೆ. ಜೊತೆಗೆ ಸಾವಿಗೂ ಮೊದಲು ಯುವತಿ ಮಾನಸಿಕ ಕಿರುಕುಳ ನೀಡಿದ ವಿಚಾರ ಬೆಳಕಿಗೆ ಬಂದಿದೆ.

ಮಂಗಳೂರಿನ ಉಳ್ಳಾಲ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದ ಅಶಿಕ್:

ಮೊಹಮ್ಮದ್ ಆಶಿಕ್ ಕಾಲೇಜು ಓದುತ್ತಿರುವಾಗಲೇ ಸಹಪಾಠಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಮಂಗಳೂರಿನ ಉಳ್ಳಾಲ ಮೂಲದ ಆ ಯುವತಿ ಹಾಗೂ ಅಶಿಕ್ ಪ್ರೀತಿಸುತ್ತಿರುವ ವಿಚಾರದ ಬಗ್ಗೆ ಎರಡು ಕುಟುಂಬಕ್ಕೂ ಮಾಹಿತಿ ಇತ್ತು. ಆದರೆ ಕೆಲ ಸಮಯದಿಂದ ಆ ಯುವತಿ ಅಶಿಕ್‌ನಿಂದ ದೂರವಾಗಿದ್ದಳು ಎಂದು ಅಶಿಕ್ ಕುಟುಂಬದವರು ಆರೋಪಿಸಿದ್ದಾರೆ.

ಅಶಿಕ್‌ಗೆ ಎಲ್ಲಾದರೂ ಹೋಗಿ ಸಾಯಿ ಎಂದಿದ್ದ ಯುವತಿ

ಸಾವಿಗೂ ಮುನ್ನ ಅಶಿಕ್ ನೀನು ನನಗೆ ಮೋಸ ಮಾಡುತ್ತಿದ್ದೀಯಾ ಎಂದು ಪ್ರಶ್ನಿಸಿದ್ದಾನೆ. ಈ ವೇಳೆ ಯುವತಿ ನೀನು ಎಲ್ಲಿಯಾದರೂ ಸತ್ತು ಹೋಗು ನಾನು ಮತ್ತು ನನ್ನ ಗೆಳೆಯರು ನಿನ್ನ ಮೃತದೇಹದ ಕೂದಲನ್ನು ತೆಗೆಯಲು ಬರುತ್ತೇವೆ ಎಂದು ಅವಾಚ್ಯವಾಗಿ ನಿಂದಿಸಿದ್ದಾಳೆ ಈ ಬಗ್ಗೆ ಸಾವಿಗೂ ಮುನ್ನ ಇಬ್ಬರ ನಡುವೆ ನಡೆದಿರುವ ವಾಟ್ಸಪ್ ಚಾಟ್‌ನಲ್ಲಿ ಬಹಿರಂಗವಾಗಿದೆ. ಯುವತಿ ಅಶಿಕ್‌ಗೆ ಅವಾಚ್ಯ ಶಬ್ದಗಳು, ಅಸಹ್ಯ ಮತ್ತು ಹೊಲಸು ಪದಗಳಿಂದ ಬೈದಿರುವ ವಾಟ್ಸಾಪ್ ಚಾಟ್ ಮೊಬೈಲ್ ನಲ್ಲಿ ಪತ್ತೆಯಾಗಿದೆ.

ಇದನ್ನೂ ಓದಿ: ಅಮೆರಿಕಾ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ವಿಮಾನಕ್ಕೆ ಪಾಕಿಸ್ತಾನದ ಎಫ್16 ವಿಮಾನದ ಬೆಂಗಾವಲು

ಇದರಿಂದ ಆಶಿಕ್ ಮಾನಸಿಕವಾಗಿ ಮನನೊಂದು ಯುವತಿಯ ಪ್ರಚೋದನೆಯಿಂದ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ ಎಂದು ಯುವಕನ ಕುಟುಂಬದವರು ಆರೋಪಿಸಿದ್ದಾರೆ. ವಾಟ್ಸಾಪ್‌ನಲ್ಲಿ ವಾಗ್ವಾದದ ನಂತರ ಅದೇ ದಿನ ರಾತ್ರಿ ಅಶಿಕ್ ಫ್ಯಾನಿಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.

ಗಿಫ್ಟ್ ಪಡೆದು ಕೈಕೊಟ್ಟ ಕಿಲಾಡಿ ಲವರ್

ಯುವತಿ ಪ್ರೀತಿಯ ನಾಟಕವಾಡಿ ಅಶಿಕ್‌ನಿಂದ ಹಲವಾರು ಉಡುಗೊರೆ ಪಡೆದು ಖರ್ಚು ವೆಚ್ಚ ಮಾಡಿಸಿ ಮಾನಸಿಕವಾಗಿ ಹಿಂಸೆ ನೀಡಿದ್ದಾಳೆ. ಹೀಗಾಗಿ ಯುವತಿ ಹಾಗೂ ಆತ್ಮ*ಹತ್ಯೆಗೆ ಪ್ರಚೋದನೆ ನೀಡಿದವರ ಮೇಲೆ ಕಾನೂನು ಕ್ರಮ ಕೈಗೊಳುವಂತೆ ಯುವಕನ ತಂದೆ ದೂರು ನೀಡಿದ್ದಾರೆ. ಅದರಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಯುವತಿ ಆಕೆಯ ತಾಯಿ ಸೇರಿದಂತೆ ಒಟ್ಟು ಮೂವರ ವಿರುದ್ಧ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 108, 352,351(3),3(5) ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಸೌದಿಗೆ ಪಾಕ್‌ನಿಂದ 13,000 ಸೈನಿಕರು, 18 ಜೆಟ್ ರವಾನೆ



Source link

Leave a Reply

Your email address will not be published. Required fields are marked *