
ಜನವರಿ, ಏಪ್ರಿಲ್ 12: ಕೆಲ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರ ರಫ್ತು ಸುಂಕವನ್ನು (ರಫ್ತು ಸುಂಕ) ಗಣನೀಯವಾಗಿ ಹೆಚ್ಚಿಸಿದೆ. ಆಂತರಿಕವಾಗಿ ಈ ಇಂಧನ ಲಭ್ಯತೆ ಕಡಿಮೆ ಆಗದಂತೆ ನೋಡಿಕೊಳ್ಳಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಡೀಸಲ್ ಮತ್ತು ಜೆಟ್ ಇಂಧನದ ಮೇಲಿನ ಸುಂಕ ಹೆಚ್ಚಿದೆ. ಅಚ್ಚರಿ ಎಂಬಂತೆ ಪೆಟ್ರೋಲ್ ಮೇಲೆ ಯಾವುದೇ ರಫ್ತು ಸುಂಕ ಹಾಕಲಾಗಲಿಲ್ಲ.
ಡೀಸಲ್ ಮೇಲಿನ ರಫ್ತು ಸುಂಕವನ್ನು ಲೀಟರ್ಗೆ 34 ರೂಗಳನ್ನು ಏರಿಸಲಾಗಿದೆ. 21.5 ರೂ ಇದ್ದ ಇದರ ರಫ್ತು ಸುಂಕವನ್ನು 55.5 ರೂಗೆ ಹೆಚ್ಚಿಸಲಾಗಿದೆ. ಜೊತೆಗೆ, ಎಟಿಎಫ್ (ಏವಿಯೇಶನ್ ಟರ್ಬೈನ್ ಫುಯೆಲ್) ಅಥವಾ ಜೆಟ್ ಇಂಧನದ ಮೇಲಿನ ರಫ್ತು ಸುಂಕವನ್ನು 12.5 ರೂಗಳನ್ನು ಹೆಚ್ಚಿಸಲಾಗಿದೆ. 29.5 ರೂ ಇದ್ದ ಇದರ ಬೆಲೆಯನ್ನು 42 ರೂಗೆ ಏರಿಸಲಾಗಿದೆ.
ಇದನ್ನೂ ಓದಿ: ಟೋಲ್ ಬೂಟ್ನಲ್ಲಿ ಇನ್ಮುಂದೆ ಕ್ಯಾಶ್ ಪೇಮೆಂಟ್ಗೆ ಅವಕಾಶವಿಲ್ಲ; ಫಾಸ್ಟ್ಯಾಗ್ ಕಡ್ಡಾಯ
ಪೆಟ್ರೋಲ್ ಮೇಲಿನ ರಫ್ತು ಸುಂಕವನ್ನು ಸರ್ಕಾರ ಹೆಚ್ಚಿಸಿಲ್ಲ. ಸದ್ಯ ಈ ವ್ಯಾಪಕ ಬಳಕೆಗೆ ಸರ್ಕಾರ ಶೂನ್ಯ ಸುಂಕ ಹಾಕುತ್ತಿದೆ. ಈ ಕ್ರಮ ಮುಂದುವರಿಯುತ್ತದೆ.
ಇದೆ ವೇಳೆ, ಆಂತರಿಕವಾಗಿ ಕೆಲ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅಬಕಾರಿ ಸುಂಕ ಮತ್ತು ಸೆಸ್ ಅನ್ನು ಪರಿಷ್ಕರಿಸಲಾಗಿದೆ. ಹೈಸ್ಪೀಡ್ ಡೀಸಲ್ ಅಥವಾ ಪ್ರೀಮಿಯಂ ಡೀಸಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು (ಎಸ್ಐಡಿ) ಲೀಟರ್ಗೆ 24 ರೂಗೆ ಏರಿಸಲಾಗಿದೆ. ರಸ್ತೆ ಮತ್ತು ಮೂಲಸೌಕರ್ಯ ಸೆಸ್ ದರವನ್ನು 36 ರೂಗೆ ಹೆಚ್ಚಿಸಲಾಗಿದೆ.
ಇದನ್ನೂ ಓದಿ: AMFI ಡೇಟಾ: ಮಾರ್ಚ್ನಲ್ಲಿ ಈಕ್ವಿಟಿ ಫಂಡ್ಗಳಿಗೆ ಹೂಡಿಕೆ ಸುಗ್ಗಿ; ಶೇ. 55ರಷ್ಟು ಹೆಚ್ಚಿದ ಒಳಹರಿವು
ರಫ್ತು ಸುಂಕ ಪರಿಷ್ಕರಣೆ ಯಾಕೆ?
ಅತಿಹೆಚ್ಚು ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನವನ್ನು ಪಡೆಯುತ್ತದೆ. ಕಚ್ಚಾ ತೈಲವನ್ನು ಆಮದು ಮಾಡಿಕೊಂಡು, ಅದನ್ನು ಸಂಸ್ಕರಿಸಿ, ಪೆಟ್ರೋಲ್, ಡೀಸಲ್, ಜೆಟ್ ಫುಯಲ್ ಇತ್ಯಾದಿ ವಿವಿಧ ಪೆಟ್ರೋಲಿಯಂ ಉತ್ಪನ್ನಗಳನ್ನು ತಯಾರಿಸುತ್ತದೆ. ಆಂತರಿಕ ಬಳಕೆ ಬೇಕಾಗುವಷ್ಟು ಇಟ್ಟುಕೊಂಡು, ಉಳಿದವನ್ನು ರಫ್ತು ಮಾಡಲು ಅವಕಾಶ ಕೊಡದಿದ್ದರೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ