Headlines

asha bhosle ಆಸ್ಪತ್ರೆ ದಾಖಲಾಗಿದ್ದ ಪಾಲ್ಕೆ ಪ್ರಶಸ್ತಿ ಪುರಸ್ಕೃತ ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನ | Dadasaheb Phalke Awardee Legendary Singer Asha Bhosle Passes Away At 92

ಆಸ್ಪತ್ರೆ ದಾಖಲಾಗಿದ್ದ ಪಾಲ್ಕೆ ಪ್ರಶಸ್ತಿ ಪುರಸ್ಕೃತ ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನ, ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ವಿಜೇತ ಆಶಾ ಭೋಸ್ಲೆ ಇಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 

ಮುಂಬೈ (ಏ.12) ಖ್ಯಾತ ಗಾಯಕಿ, ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ವಿಜೇತ ಪ್ಲೇ ಬ್ಯಾಕ್ ಸಿಂಗರ್ ಆಶಾ ಭೋಸ್ಲೆ ನಿಧನರಾಗಿದ್ದಾರೆ. 92 ವರ್ಷದ ಆಶಾ ಭೋಸ್ಲೆ ಆರೋಗ್ಯ ಏರುಪೇರಾದ ಹಿನ್ನಲೆಯಲ್ಲಿ ಎಪ್ರಿಲ್ 11 ರಂದು ಮುಂಬೈನ ಬ್ರಿಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸಂಪೂರ್ಣ ಕ್ಷೀಣಿಸಿದ್ದ ಕಾರಣ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಕಳೆದೊಂದು ದಿನದಲ್ಲಿ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಕಿ ಇಂದು ನಿಧನರಾಗಿದ್ದಾರೆ ಎಂದು ವರದಿಯಾಗಿದೆ.

ಶ್ವಾಸಕೋಶದ ಇನ್‌ಫೆಕ್ಷನ್‌ನಿಂದ ಆಸ್ಪತ್ರೆ ದಾಖಲು

ಗಾಯಕಿ ಆಶಾ ಭೋಸ್ಲೆ ಕಳೆದ ಕೆಲ ದಿನಗಳಿಂದ ಶ್ವಾಸಕೋಶದ ಇನ್‌ಫೆಕ್ಷನ್‌ನಿಂದ ಬಳಲಿದ್ದರು. ಎಪ್ರಿಲ್ 11 ರಂದು ಉಸಿರಾಟದ ಸಮಸ್ಯೆ ತೀವ್ರಗೊಂಡ ಕಾರಣ ಆಸ್ಪತ್ರೆ ದಾಖಳಿಸಲಾಗಿತ್ತು. ಅಶಾ ಭೋಸ್ಲೆ ಆಸ್ಪತ್ರೆ ದಾಖಲು ಹಾಗೂ ಆರೋಗ್ಯ ಕುರಿತು ಆಶಾ ಭೋಸ್ಲೆ ಮೊಮ್ಮಗಳು ಝನೈ ಭೋಸ್ಲಾ ಮಾಹಿತಿ ನೀಡಿದ್ದರು. ಚಿಕಿತ್ಸೆ ಮುಂದುವರಿದಿದೆ, ದೇವರ ದಯದಿಂದ ಶೀಘ್ರದಲ್ಲೇ ಚೇತರಿಸಿಕೊಳ್ಳುವಂತಾಗಲಿ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.

Source link

Leave a Reply

Your email address will not be published. Required fields are marked *