
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವಾ ಪಿಪಿಎಫ್ (ಪಿಪಿಎಫ್- ಸಾರ್ವಜನಿಕ ಭವಿಷ್ಯ ನಿಧಿ) ಸರ್ಕಾರದಿಂದ ನಡೆಸಲಾಗುವ ಸಣ್ಣ ಉಳಿತಾಯ ಯೋಜನೆಗಳಲ್ಲಿ ಒಂದು. ದೀರ್ಘಾವಧಿ ಹೂಡಿಕೆಗೆ ಅವಕಾಶ ಕೊಡುವ ಸ್ಕೀಮ್. ಪಿಪಿಎಫ್‌ನಲ್ಲಿ ವಾರ್ಷಿಕ ಬಡ್ಡಿದರ ಶೇ. 7.1 ಇದೆ. ಬ್ಯಾಂಕ್ ಡೆಪಾಸಿಟ್ ತುಸು ಹೆಚ್ಚು. ವರ್ಷಕ್ಕೆ ಒಂದೂವರೆ ಲಕ್ಷ ರೂವರೆಗೆ ಹೂಡಿಕೆಗೆ ಅವಕಾಶ ಕೊಡುತ್ತದೆ. ತಿಂಗಳಿಗೆ 12,500 ರೂವರೆಗೆ ಹೂಡಿಕೆ ಮಾಡಬಹುದು. ಕೋಟಿ ರೂ ಕಾರ್ಪಸ್ ನಿರ್ಮಿಸುವವರು ಪಿಪಿಎಫ್ ಮೂಲಕ ಅದನ್ನು ಸಾಕಾರಗೊಳಿಸಬಹುದು.
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಸ್ಕೀಮ್ನ ವಿವರ
- ಯಾರು ಮಾಡಬಹುದೆ?: ಯಾರು ಬೇಕಾದರೂ ಪಿಪಿಎಫ್ ಅಕೌಂಟ್ ತೆರೆಯಬಹುದು.
- ಎಷ್ಟು ಹೂಡಿಕೆ: ವರ್ಷಕ್ಕೆ 1.5 ಲಕ್ಷ ರೂವರೆಗೆ ಹೂಡಿಕೆ
- ಎಷ್ಟು ಅವಧಿ: ಪಿಪಿಎಫ್ ಸ್ಕಿಮ್ನ ಮೆಚ್ಯೂರಿಟಿ ಅವಧಿ 15 ವರ್ಷ. ಆ ಬಳಿಕ ಐದೈದು ವರ್ಷ ಅವಧಿಗೆ ಅವಕಾಶ.
ಇದನ್ನೂ ಓದಿ: ಪಿಪಿಎಫ್‌ನಲ್ಲಿ ಕೇವಲ 1 ಪರ್ಸಂಟ್ ಬಡ್ಡಿಗೆ ಸಾಲ? ಯಾವ ವರ್ಷ, ಎಷ್ಟು ಅವಧಿ ಇತ್ಯಾದಿ ನಿಯಮಗಳು ತಿಳಿದಿರಿ
ಪಿಪಿಎಫ್ ಮೂಲಕ 1 ಕೋಟಿ ರೂ ಕಾರ್ಪಸ್ ಹೊಂದಲು ಎಷ್ಟು ವರ್ಷ ಬೇಕು?
ನೀವು ಪಿಪಿಎಫ್‌ನಲ್ಲಿ ವರ್ಷಕ್ಕೆ ಒಂದೂವರೆ ಲಕ್ಷ ರೂನಂತೆ 15 ವರ್ಷ ಹೂಡಿಕೆ ಮಾಡಿದರೆ, ಒಟ್ಟು ಕಾರ್ಪಸ್ 40.68 ಲಕ್ಷ ರೂ. ಐದು ವರ್ಷ ಹೂಡಿಕೆಯನ್ನು ವಿಸ್ತರಿಸಿದರೆ ಕಾರ್ಪಸ್ 66.58 ಲಕ್ಷ ರೂ. ಇನ್ನೂ ಐದು ವರ್ಷ ಮುಂದುವರಿಸಿದರೆ ಒಟ್ಟು ಕಾರ್ಪಸ್ 1.03 ಕೋಟಿ ರೂ. ಅಂದರೆ, 25 ವರ್ಷಗಳ ಕಾಲ ನೀವು ಒಂದೂವರೆ ಲಕ್ಷ ವಾರ್ಷಿಕ ಹೂಡಿಕೆ ಮಾಡುತ್ತಾ ಹೋದಾಗ ಒಂದು ಕೋಟಿ ರೂ ಹೊಂದಲು ಸಾಧ್ಯ.
25 ವರ್ಷದ ನಂತರವೂ ನೀವು ಹೂಡಿಕೆ ಮುಂದುವರಿಸಬಹುದು. 30 ವರ್ಷಕ್ಕೆ ನಿಮ್ಮ ಹೂಡಿಕೆಯ ಫಲವು 1.54 ಲಕ್ಷ ರೂ ಆಗಿರುತ್ತದೆ. ಹೀಗೆ ಹೂಡಿಕೆ ಅವಧಿ ಹೆಚ್ಚಿಸುತ್ತಾ ಹೋದಂತೆ ಹೆಚ್ಚೆಚ್ಚು ಫಲ ದೊರಕುತ್ತಾ ಹೋಗುತ್ತದೆ.
ಇದನ್ನೂ ಓದಿ: ಮುಖ್ಯ ಬ್ಯಾಂಕುಗಳಲ್ಲಿ ಶೇ. 7.75ರವರೆಗೆ ಫಿಕ್ಸೆಡ್ ಡೆಪಾಸಿಟ್ ದರಗಳು
ಪಿಪಿಎಫ್ ಮೂಲಕ ಮಾಸಿಕ ಆದಾಯ
ಪಿಪಿಎಫ್‌ನಲ್ಲಿ ನೀವು 25 ವರ್ಷ ಹೂಡಿಕೆ ಮಾಡಿದರೆ ಒಟ್ಟು ಕಾರ್ಪಸ್ 1.03 ಕೋಟಿ ರೂ. ಈ ಸಂದರ್ಭದಲ್ಲಿ ನೀವು ಬಡ್ಡಿಯನ್ನು ಮಾತ್ರ ಹಿಂಪಡೆಯುವ ಅವಕಾಶ. 1.03 ಕೋಟಿ ರೂಗೆ ಒಂದು ವರ್ಷದ ಸಿಗುವ ಬಡ್ಡಿ 7.32 ಲಕ್ಷ ರೂ. ವರ್ಷಕ್ಕೆ ಒಮ್ಮೆ ಬಡ್ಡಿ ಹಿಂಪಡೆಯಬಹುದು. ಅದನ್ನು 12 ತಿಂಗಳಿಗೆ ಭಾಗಿಸಿದರೆ ಒಂದು ತಿಂಗಳಿಗೆ ಸುಮಾರು 61,000 ರೂ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ