Headlines

Karna Serial: ಕರ್ಣನಿಗೆ ಠಕ್ಕರ್ ಕೊಡೋಕೆ ಬಂದ ಹ್ಯಾಂಡ್​ಸಮ್​ ಅರ್ಜುನ್​ ; ಗಗನ್ ಗ್ರ್ಯಾಂಡ್ ಎಂಟ್ರಿಗೆ ಕಿರಣ್‌ ರಾಜ್ ಶಾಕ್

Karna Serial: ಕರ್ಣನಿಗೆ ಠಕ್ಕರ್ ಕೊಡೋಕೆ ಬಂದ ಹ್ಯಾಂಡ್​ಸಮ್​ ಅರ್ಜುನ್​ ;  ಗಗನ್ ಗ್ರ್ಯಾಂಡ್ ಎಂಟ್ರಿಗೆ ಕಿರಣ್‌ ರಾಜ್ ಶಾಕ್

Karna Serial: ಕರ್ಣನಿಗೆ ಠಕ್ಕರ್ ಕೊಡೋಕೆ ಬಂದ ಹ್ಯಾಂಡ್​ಸಮ್​ ಅರ್ಜುನ್​ ;  ಗಗನ್ ಗ್ರ್ಯಾಂಡ್ ಎಂಟ್ರಿಗೆ ಕಿರಣ್‌ ರಾಜ್ ಶಾಕ್

ಕರ್ಣ ಸೀರಿಯಲ್​ನಲ್ಲಿ ನಿಧಿ ಮತ್ತು ಕರ್ಣನನ್ನು ದೂರ ಮಾಡಲು ರಮೇಶ್ ಹೊಸ ಪ್ಲ್ಯಾನ್ ಮಾಡಿದ್ದು, ಇದಕ್ಕೆ ತಿರುಗೇಟು ನೀಡಲು ಕರ್ಣ ಸಿದ್ಧನಾಗಿದ್ದಾನೆ. ಆದರೆ, ಎಲ್ಲರ ಊಹೆಗಳನ್ನು ಮೀರಿ ‘ಸೀತಾರಾಮ’ ಖ್ಯಾತಿಯ ಗಗನ್ ಚಿನ್ನಪ್ಪ, ಅರ್ಜುನ್ ಆಗಿ ನಿಧಿಯನ್ನು ಮದುವೆಯಾಗಲು ಎಂಟ್ರಿ ಕೊಟ್ಟಿದ್ದಾನೆ.

ಕರ್ಣ ಸೀರಿಯಲ್​ (Karna Serial)ನಲ್ಲಿ ಸದ್ಯ ಭಾರಿ ಟ್ವಿಸ್ಟ್​ ಸಿಕ್ಕಿದೆ. ಕರ್ಣ ಮತ್ತು ನಿಧಿ ಒಂದಾಗಬೇಕು ಎಂದು ಎಲ್ಲರೂ ಕಾಯುತ್ತಿದ್ದರೆ, ಇದೀಗ ಆಗಿದ್ದೇ ಬೇರೆ. ನಿಧಿಯನ್ನು ಮದುವೆಯಾಗಲು ಬಂದಿದ್ದಾನೆ ಹ್ಯಾಂಡ್​ಸಮ್​ ಅರ್ಜುನ್.

ನಿಧಿ ಮತ್ತು ಕರ್ಣನನ್ನು ದೂರ ಮಾಡಲು ರಮೇಶ ಪ್ಲ್ಯಾನ್​ ಮಾಡಿ ಹುಡುಗನನ್ನು ಕರೆಸಿದ್ದಾನೆ. ಅವನಿಗೆ ತಿರುಗೇಟು ನೀಡಲು ಕರ್ಣ ಕೂಡ ಇನ್ನೊಂದು ಪ್ಲ್ಯಾನ್​ ಮಾಡಿದ್ದಾನೆ. ಆದರೆ ಇದೀಗ ಅಲ್ಲಿ ಎಂಟ್ರಿ ಕೊಟ್ಟಿರೋದು ಅರ್ಜುನ್​. ಇದರಿಂದ ಫ್ಯಾನ್ಸ್​ಗೆ ಸಿಕ್ಕಾಪಟ್ಟೆ ಕನ್​ಫ್ಯೂಸ್​​ ಆಗಿಬಿಟ್ಟಿದೆ.

ಅಂದಹಾಗೆ ಈ ಅರ್ಜುನ್​, ಸೀತಾರಾಮ ಸೀರಿಯಲ್​ನಲ್ಲಿ ರಾಮ್​ ಪಾತ್ರಧಾರಿಯಾಗಿದ್ದ ಗಗನ್​ ಚಿನ್ನಪ್ಪ. ಇನ್ನು ನಮ್ಮ ಮುಂದಿನ ಗುರಿ ಇರೋದು ನಿಧಿಯನ್ನು ಮದುವೆಯಾಗಲು ಬರುವ ಹುಡುಗನನ್ನು ಓಡಿಸೋದು ಎಂದು ಕರ್ಣನಿಗೆ ಅಸಿಸ್ಟೆಂಟ್​ ಹೇಳ್ತಿರುವಾಗಲೇ ಅರ್ಜುನ್​ ಎಂಟ್ರಿಯಾಗಿದೆ.

ಅರ್ಜುನ್​ನನ್ನು ನೋಡಿ ಈಗ ಫ್ಯಾನ್ಸ್​ ಗಲಿಬಿಲಿಗೊಂಡಿದ್ದಾರೆ. ಕರ್ಣ ಮತ್ತು ನಿಧಿ ಒಂದಾಗಬೇಕು ಅಂತಿದ್ದೋರು ಯಾಕೋ ಸ್ವಲ್ಪ ಮನಸ್ಸನ್ನು ಬದಲಿಸಿದಂತೆ ಕಾಣುತ್ತಿದೆ. ನಿಧಿ ಮತ್ತು ಅರ್ಜುನ್​ ಜೋಡಿಯೂ ಸಕತ್​ ಆಗಿರುತ್ತದೆ ಎನ್ನುತ್ತಿದ್ದಾರೆ ಸೀರಿಯಲ್​ ವೀಕ್ಷಕರು. ಮತ್ತೆ ಕೆಲವರು ಸೀತಾಳನ್ನು ಎಲ್ಲಿ ಬಿಟ್ಟು ಬಂದಿ ಎಂದು ತಮಾಷೆ ಮಾಡ್ತಿದ್ದಾರೆ.

ಒಟ್ಟಿನಲ್ಲಿ ಅರ್ಜುನ್​ನನ್ನು ಕರೆತಂದಿದ್ದು ಕರ್ಣನಾ ಅಥವಾ ರಮೇಶ್​ನಾ ಎನ್ನುವುದು ಸದ್ಯಕ್ಕೆ ಇರುವ ಗೊಂದಲ. ಕರ್ಣನ ಪ್ಲ್ಯಾನ್​ ಏನು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.

ಇದಾಗಲೇ ಕರ್ಣ ರಮೇಶನ ಸ್ವಂತ ಮಗ ಎನ್ನುವುದು ನಯನತಾರಾ ಹೇಳಿದ್ದಾಳೆ. ಆದರೆ ಅವರಿಬ್ಬರಿಗೂ ಇದು ಗೊತ್ತಿಲ್ಲ. ಇದೇ ಕಾರಣಕ್ಕೆ, ರಮೇಶ್​ ಮಗನ ಜೀವನ ಹಾಳು ಮಾಡಲು ಮುಂದಾಗಿದ್ದರೆ, ಅಪ್ಪನ ಕುತಂತ್ರಕ್ಕೆ ತಕ್ಕ ಶಾಸ್ತಿ ಮಾಡುವುದಾಗಿ ಕರ್ಣ ಹೇಳುತ್ತಿದ್ದಾನೆ. ಇದರ ಮಧ್ಯೆಯೇ ಅರ್ಜುನ್​ ಎಂಟ್ರಿ ಆಗಿದ್ದು, ಯಾರೂ ಊಹಿಸದ ತಿರುವು ಪಡೆದುಕೊಂಡಿದೆ.

Source link

Leave a Reply

Your email address will not be published. Required fields are marked *