Headlines

ನಾಲ್ಕು ಕ್ರೂರ ಗ್ರಹರು ಒಂದೇ ರಾಶಿಯಲ್ಲಿ!! ಯಾರಿಗೆಲ್ಲ ಇದರಿಂದ ಅಪಾಯ…

ನಾಲ್ಕು ಕ್ರೂರ ಗ್ರಹರು ಒಂದೇ ರಾಶಿಯಲ್ಲಿ!! ಯಾರಿಗೆಲ್ಲ ಇದರಿಂದ ಅಪಾಯ…


ನಾಲ್ಕು ಕ್ರೂರ ಗ್ರಹರು ಒಂದೇ ರಾಶಿಯಲ್ಲಿ!! ಯಾರಿಗೆಲ್ಲ ಇದರಿಂದ ಅಪಾಯ...

ಮೀನ ರಾಶಿಯಲ್ಲಿ ಶನಿ, ಕುಜ, ರವಿ ಮತ್ತು ಬುಧ – ಈ ನಾಲ್ಕು ಪ್ರಬಲ ಗ್ರಹಗಳ ಯುತಿ ನಡೆಯುತ್ತಿರುವುದು ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದ ಅತ್ಯಂತ ಕುತೂಹಲಕಾರಿ ವಿದ್ಯಮಾನವಾಗಿದೆ. ಈ ಚತುರ್ಗ್ರಹಿ ಯೋಗವು ದ್ವಾದಶ ರಾಶಿಗಳ ಮೇಲೆ ಪರಿಣಾಮಗಳನ್ನು ಬೀರುತ್ತದೆ. ಈ ಸಂಯೋಗವು ಏಪ್ರಿಲ್ 11 ರಿಂದ ಏಪ್ರಿಲ್ 15 ರವರೆಗೆ ಇರಲಿದೆ. ಅಲ್ಪಾವಧಿಯಾದರೂ ಗ್ರಹಗಳು ತಮ್ಮ ಕಾರ್ಯವನ್ನು ಮಾಡಿ ಮುಂದಡಿಯಿಡುತ್ತವೆ.

ಶುಭ ಫಲದ ರಾಶಿಗಳು:

ವೃಷಭ ರಾಶಿ:

ನಿಮಗೆ ಈ ಸಂಯೋಗವು ಲಾಭದ ಸ್ಥಾನದಲ್ಲಿ ನಡೆಯುವುದರಿಂದ ಆರ್ಥಿಕವಾಗಿ ಉತ್ತಮ ಪ್ರಗತಿ ಇದೆ. ಹಳೆಯ ಬಾಕಿ ಹಣ ವಾಪಸ್ ಬರಬಹುದು ಮತ್ತು ಉದ್ಯೋಗದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ.

ಮಿಥುನ ರಾಶಿ:

ಕರ್ಮ ಸ್ಥಾನದಲ್ಲಿ ಈ ಗ್ರಹಗಳ ವೃತ್ತಿ ಜೀವನದಲ್ಲಿ ಹೊಸ ಜವಾಬ್ದಾರಿಗಳು ಸಿಗಲಿವೆ. ಅಧಿಕಾರಿಗಳಿಂದ ದೊರೆಯಲಿದೆ, ಸಮಾಜದಲ್ಲಿ ಗೌರವ ಹೆಚ್ಚುತ್ತದೆ.

ಕರ್ಕಾಟಕ ರಾಶಿ:

ಭಾಗ್ಯ ಸ್ಥಾನದಲ್ಲಿ ಈ ಯುತಿ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುತ್ತದೆ. ದೂರದ ಪ್ರಯಾಣದಿಂದ ಲಾಭವಾಗಲಿದ್ದು, ತಂದೆಯ ಕಡೆಯಿಂದ ಬೆಂಬಲ ಸಿಗಲಿದೆ.

ವೃಶ್ಚಿಕ ರಾಶಿ:

ಬುದ್ಧಿವಂತಿಕೆಯಿಂದ ಕಠಿಣ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತೀರಿ. ಉತ್ತಮ ಸಮಯ ಮತ್ತು ಹೂಡಿಕೆಗಳಿಂದ ಲಾಭ ಪಡೆಯುವ ಸಾಧ್ಯತೆಯಿದೆ.

ಮಿಶ್ರ ಫಲದ ರಾಶಿಗಳು:

ಮೇಷ ರಾಶಿ:

ವ್ಯಯ ಸ್ಥಾನದಲ್ಲಿ ಈ ಸಂಯೋಗವಿರುವುದರಿಂದ ಖರ್ಚುಗಳು ಹೆಚ್ಚಾಗಬಹುದು. ಆದರೆ ವಿದೇಶಿ ವ್ಯವಹಾರಗಳಲ್ಲಿ ತೊಡಗಿರುವವರಿಗೆ ಉತ್ತಮ ಲಾಭ ಸಿಗಲಿದೆ. ಆರೋಗ್ಯದ ಕಡೆ ಗಮನವಿರಲಿ.

ಸಿಂಹ ರಾಶಿ:

ಅಷ್ಟಮ ಸ್ಥಾನದ ಈ ಯುತಿಯು ಹಠಾತ್ ಧನಲಾಭ ತರಬಹುದು, ಆದರೆ ವಾಹನ ಚಲಾಯಿಸುವಾಗ ಮತ್ತು ಸಂವಹನದಲ್ಲಿ ಜಾಗ್ರತೆ ಅಗತ್ಯ.

ತುಲಾ ರಾಶಿ:

ಶತ್ರುಗಳ ಮೇಲೆ ಜಯ ಸಾಧಿಸುತ್ತೀರಿ. ಸಾಲದ ಹೊರೆ ಕಡಿಮೆಯಾಗಲಿದೆ, ಆದರೆ ಗುಪ್ತ ರೋಗಗಳು ಅಥವಾ ಸಣ್ಣಪುಟ್ಟ ಶಸ್ತ್ರಚಿಕಿತ್ಸೆಗಳ ಬಗ್ಗೆ ಎಚ್ಚರವಿರಲಿ.

ಧನು ರಾಶಿ:

ಸುಖ ಸ್ಥಾನದಲ್ಲಿ ಈ ಗ್ರಹಗಳ ಮನೆ ಅಥವಾ ಆಸ್ತಿ ಖರೀದಿಗೆ ಯೋಗವಿದೆ. ಆದರೆ ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬಹುದು.

ಅಶುಭದ ರಾಶಿಗಳು

ಕನ್ಯಾ ರಾಶಿ:

ಸಪ್ತಮ ಸ್ಥಾನದಲ್ಲಿ ಈ ಸಂಯೋಗವಿರುತ್ತದೆ ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಮೂಡಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ.

ಮಕರ ರಾಶಿ:

ತೃತೀಯ ಸ್ಥಾನದಲ್ಲಿ ಈ ಯುತಿ ಖಚಿತವಾಗಿ, ಆದರೆ ಒಡಹುಟ್ಟಿದವರೊಂದಿಗೆ ವಾಗ್ವಾದ ಉಂಟಾಗುವ ಸಾಧ್ಯತೆಯಿದೆ. ಸಣ್ಣ ಪ್ರಯಾಣ ಅಡೆತಡೆಗಳಿಂದ ಕೂಡಿರಬಹುದು.

ಕುಂಭ ರಾಶಿ:

ಎರಡನೇ ಮನೆಯಲ್ಲಿ ಈ ಗ್ರಹಗಳ ಮಾತಿನ ಮೇಲೆ ನಿಯಂತ್ರಣವಿರಲಿ. ಕುಟುಂಬದಲ್ಲಿ ಕಲಹವಾಗದಂತೆ ನೋಡಿಕೊಳ್ಳಿ. ಕಣ್ಣಿನ ಸಮಸ್ಯೆಗಳ ಬಗ್ಗೆ ಜಾಗ್ರತೆ ಅಗತ್ಯ.

ಮೀನ ರಾಶಿ:

ನಿಮ್ಮದೇ ರಾಶಿಯಲ್ಲಿ ಈ ನಾಲ್ಕು ಗ್ರಹಗಳಿರುವುದರಿಂದ ಮಾನಸಿಕ ಒತ್ತಡ ಹೆಚ್ಚಿರಬಹುದು. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತುರ ಬೇಡ. ಶನಿ ಮತ್ತು ಕುಜನ ಪ್ರಭಾವದಿಂದ ಕೋಪದ ಮೇಲೆ ಹತೋಟಿ ಇರಲಿ.

– ಲೋಹಿತ ಹೆಬ್ಬಾರ್



Source link

Leave a Reply

Your email address will not be published. Required fields are marked *