
ಬೆಂಗಳೂರು, (ಏಪ್ರಿಲ್ 12): ಪಕ್ಕದ ಮನೆಯ ಸಾಕು ನಾಯಿ ಸ್ಕೂಬಿ ತನ್ನ ಹೆಂಡ್ತಿಯನ್ನು ನೋಡಿ ಬೊಗಳಿದಕ್ಕೆ ಆಕ್ರೋಶಗೊಂಡ ಪತಿ ಕ್ರೌರ್ಯ ಮೆರೆದಿದ್ದಾನೆ. ತನ್ನ ಪತ್ನಿಯನ್ನು ನೋಡಿ ಬೊಗಳಿದ್ದಕ್ಕೆ ವ್ಯಕ್ತಿಯೋರ್ವ ಪಕ್ಕದ ಮನೆಯ ಸ್ಕೂಬಿ ನಾಯಿಗೆ ಕಟ್ಟಿಗೆಯಿಂದ ಹೊಡೆದು ಸಾಯಿಸಲು ಯತ್ನಿಸಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಅವರೆಹಳ್ಳಿಯಲ್ಲಿ ನಡೆದಿದೆ. ಆಂಜಿನಪ್ಪ ಎಂಬುವವರಿಗೆ ಸೇರಿದ ಸಾಕು ನಾಯಿ ಸ್ಕೂಬಿ, ನಿನ್ನೆ (ಏಪ್ರಿಲ್ 11) ಸಂಜೆ ಪಕ್ಕದ ಮನೆಯ ಮಹಿಳೆಯನ್ನು ನೋಡಿ ಬೊಗಳಿದೆ. ಇದರಿಂದ ಕೋಪಗೊಂಡ ಪತಿ ಗೋಪಿ, ರಾತ್ರಿ ಆಂಜಿನಪ್ಪ ಮನೆಗೆ ತೆರಳಿ ಗೇಟಿನಲ್ಲಿ ಕಟ್ಟಿದ್ದ ಸ್ಕೂಬಿ ನಾಯಿಗೆ ಕಟ್ಟಿಗೆಯಿಂದ ಮನಬಂದಂತೆ ಹೊಡೆದು ಕ್ರೌರ್ಯ ಮೆರೆದಿದ್ದಾನೆ. ಗೋಪಿಯ ಹೊಡೆತಕ್ಕೆ ಸ್ಕೂಬಿ ತಪ್ಪಿ ಬಿದ್ದಿದ್ದು, ಕೂಡಲೇ ಮಾಲೀಕ ಅಂಜಿನಪ್ಪ ಸ್ಕೂಬಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದು ಸದ್ಯ ನಾಯಿ ಪ್ರಾಣಾಪಾಯದಿಂದ ಪಾರಾಗಿದೆ. ನಾಯಿಗೆ ಹೊಡೆದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಸಿಕ್ಕ ದೃಶ್ಯ ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ