
ಜನವರಿ: ರಕ್ಷಣಾ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಯುವಕ-ಯುವತಿಯರಿಗೆ ಕೇಂದ್ರ ಮೀಸಲು ಪೊಲೀಸ್ ಪಡೆಯು (CRPF) ಭರ್ಜರಿ ಸಿಹಿ ಸುದ್ದಿ ನೀಡಿದೆ. 2026ನೇ ಸಾಲಿನ ತಾಂತ್ರಿಕ ಮತ್ತು ಟ್ರೇಡ್ಸ್‌ಮನ್ ವಿಭಾಗ ಒಟ್ಟು 9,175 ಕಾನ್‌ಟೇಬಲ್ ಹುದ್ದೆಗಳ ಭರ್ತಿಗೆ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.
ಹುದ್ದೆಗಳ ವಿವರ ಮತ್ತು ವೇತನ:
ಈ ಬೃಹತ್ ನೇಮಕಾತಿ ಪ್ರಕ್ರಿಯೆಯಲ್ಲಿ 9,096 ಪುರುಷ ಮತ್ತು 79 ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಪೇ-ಲೆವೆಲ್ 3ರ ಅಡಿಯಲ್ಲಿ 21,700 ರಿಂದ 69,100 ರೂ. ವರೆಗೆ ಮಾಸಿಕ ವೇತನ ಹಾಗೂ ಕೇಂದ್ರ ಸರ್ಕಾರದ ಇತರೆ ಭತ್ಯೆಗಳು ದೊರೆಯಲಿವೆ.
ಕರ್ನಾಟಕದಲ್ಲಿ 466 ಹುದ್ದೆಗಳು ಲಭ್ಯ:
ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗೆ ಬಾರಿ ಉತ್ತಮ ಅವಕಾಶವಿದ್ದು, ಈ ಪುರುಷರ ಹುದ್ದೆಗಳಲ್ಲಿ ಮಾತ್ರ 466 ಹುದ್ದೆಗಳನ್ನು ಮೀಸಲಿಡಲಾಗಿದೆ. ಇದರಲ್ಲಿ ಡ್ರೈವರ್, ಕುಕ್, ವಾಟರ್ ಕ್ಯಾರಿಯರ್, ಸಫಾಯಿ ಕರ್ಮಚಾರಿ ಸೇರಿದಂತೆ ವಿವಿಧ ವೃತ್ತಿಪರ ಹುದ್ದೆಗಳು ಸೇರಿವೆ. ಅರ್ಜಿ ಸಲ್ಲಿಕೆ ಆರಂಭ ಏಪ್ರಿಲ್ 20 ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 19 ಎಂದು ನಿಗದಿಪಡಿಸಲಾಗಿದೆ.
ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!
ಯಾವ ಹುದ್ದೆಗಳಿವೆ? (ವ್ಯಾಪಾರಗಳು):
ನೇಮಕಾತಿಯಲ್ಲಿ ಚಾಲಕ (ಚಾಲಕ) ಹುದ್ದೆಗೆ ಅತಿ ಹೆಚ್ಚು ಅಂದರೆ 3,176 ಸ್ಥಾನಗಳನ್ನು ನೀಡಲಾಗಿದೆ. ಉಳಿದಂತೆ ಅಡುಗೆಯವರು (ಕುಕ್-1426), ಬಗ್ಲರ್ (1263), ಸಫಾಯಿ ಕರ್ಮಚಾರಿ (547), ವಾಟರ್ ಕ್ಯಾರಿಯರ್ (502) ಹಾಗೂ ಬಾರ್ಬರ್, ಟೈಲರ್, ಕಾರ್ಪೆಂಟರ್ ಹುದ್ದೆಗಳಿಗೆ ನೇಮಕಾತಿ.
ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತರು CRPF ನ ಅಧಿಕೃತ ನೇಮಕಾತಿ ಜಾಲತಾಣ www.rect.crpf.gov.in ಗೆ ಭೇಟಿ ನೀಡಿ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳ ಸಹಾಯವಾಣಿ ಸಂಖ್ಯೆ 011-26160255 ಅನ್ನು ಸಂಪರ್ಕಿಸಲು ಕೋರಲಾಗಿದೆ.
ಉದ್ಯೋಗಕ್ಕೆ ಸಂಬಂಧಿಸಿದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ