
ಗಾಳಿಯಾಡಲು ಬಿಡಿ: ಶೂಗಳನ್ನು ಬಳಸಿದ ತಕ್ಷಣವೇ ಕಪಾಟಿನಲ್ಲಿ ಇಡಬೇಡಿ. ಕನಿಷ್ಠ 2-3 ಗಂಟೆಗಳ ಕಾಲ ಹೊರಗೆ ಗಾಳಿಯಾಡುವ ಜಾಗದಲ್ಲಿ ಇಡಿ.
ಸಾಕ್ಸ್ ಬಗ್ಗೆ ಗಮನವಿರಲಿ: ಯಾವಾಗಲೂ ಹತ್ತಿ (ಕಾಟನ್) ಸಾಕ್ಸ್‌ಗಳನ್ನೇ ಧರಿಸಿ. ಏಕೆಂದರೆ, ಅವು ಬೆವರನ್ನು ಚೆನ್ನಾಗಿ ಹೀರಿಕೊಳ್ಳುತ್ತವೆ. ಒಮ್ಮೆ ಬಳಸಿದ ಸಾಕ್ಸ್ ಅನ್ನು ತೊಳೆಯದೆ ಮತ್ತೆ ಧರಿಸಬೇಡಿ.
ಬದಲಾಯಿಸಿ ಬಳಸಿ: ಪ್ರತಿದಿನ ಒಂದೇ ಜೋಡಿ ಶೂ ಧರಿಸುವ ಬದಲು, ಎರಡು ಜೋಡಿಗಳನ್ನು ಒಂದು ದಿನ ಬಿಟ್ಟು ಒಂದು ದಿನ ಬಳಸಿ. ಇದರಿಂದ ಶೂಗಳು ಒಣಗಲು ಸಾಕಷ್ಟು ಸಮಯ ಸಿಗುತ್ತದೆ.
ನೆನಪಿಡಿ: ನಿಮ್ಮ ಶೂಗಳು ಹೊರಗಿನಿಂದ ಸ್ವಚ್ಛವಾಗಿದ್ದು, ಒಳಗಿನಿಂದ ಮಾತ್ರ ವಾಸನೆ ಬರುತ್ತಿದ್ದರೆ ಈ ಟಿಪ್ಸ್‌ಗಳು ಚೆನ್ನಾಗಿ ಕೆಲಸ ಮಾಡುತ್ತವೆ. ಆದರೆ, ಶೂಗಳು ತುಂಬಾ ಕೊಳಕಾಗಿದ್ದರೆ, ಅವುಗಳನ್ನು ತೊಳೆಯುವುದು ಅಥವಾ ‘ಡ್ರೈ ಕ್ಲೀನ್’ ಮಾಡಿಸುವುದೇ ಸರಿಯಾದ ದಾರಿ.