ಉತ್ತರ ಕರ್ನಾಟಕದ ಹಳ್ಳಿ ಸೊಗಡಿನ ಕೊಬ್ಬರಿ-ಬೆಳ್ಳುಳ್ಳಿ ಚಟ್ನಿ; ಬಡವರ ಮನೆ ಊಟದ ರುಚಿ ರಹಸ್ಯ | Kannada Recipe A Simple Way To Make Dry Coconut Garlic Mixed Chutney From A Village In North Karnataka Mrq

ಉತ್ತರ ಕರ್ನಾಟಕದ ಹಳ್ಳಿ ಸೊಗಡಿನ ಕೊಬ್ಬರಿ-ಬೆಳ್ಳುಳ್ಳಿ ಚಟ್ನಿ; ಬಡವರ ಮನೆ ಊಟದ ರುಚಿ ರಹಸ್ಯ | Kannada Recipe A Simple Way To Make Dry Coconut Garlic Mixed Chutney From A Village In North Karnataka Mrq



ಉತ್ತರ ಕರ್ನಾಟಕದ ಹಳ್ಳಿ ಸೊಗಡಿನ ಕೊಬ್ಬರಿ-ಬೆಳ್ಳುಳ್ಳಿ ಚಟ್ನಿ; ಬಡವರ ಮನೆ ಊಟದ ರುಚಿ ರಹಸ್ಯ | Kannada Recipe A Simple Way To Make Dry Coconut Garlic Mixed Chutney From A Village In North Karnataka Mrq

ಅಡುಗೆ ಮಾಡಲು ಬೇಸರವಾದಾಗ, ಕೆಲವೇ ಪದಾರ್ಥಗಳನ್ನು ಬಳಸಿ ರುಚಿಕರವಾದ ಒಣಕೊಬ್ಬರಿ-ಬೆಳ್ಳುಳ್ಳಿ ಚಟ್ನಿಯನ್ನು ಸುಲಭವಾಗಿ ತಯಾರಿಸಬಹುದು. ಉತ್ತರ ಕರ್ನಾಟಕದಲ್ಲಿ ಜನಪ್ರಿಯವಾಗಿರುವ ಈ ಚಟ್ನಿ, ರೊಟ್ಟಿ ಮತ್ತು ಅನ್ನದೊಂದಿಗೆ ಸವಿಯಲು ಅತ್ಯುತ್ತಮವಾಗಿದ್ದು, ಇದನ್ನು ತಯಾರಿಸುವ ಸರಳ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ.

Kannada Village Style Chutney Recipe: ಕೆಲವೊಮ್ಮೆ ಅಡುಗೆ ಏನು ಮಾಡಬೇಕು ಅಂತ ತೋಚದೇ ತಲೆಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಸನ್ನಿವೇಶ ಸೃಷ್ಟಿಯಾಗುತ್ತಿರುತ್ತದೆ. ಕೇವಲ ಎರಡರಿಂದ ಮೂರು ಪದಾರ್ಥ ಬಳಸಿ ರುಚಿಕರವಾದ ಚಟ್ನಿಯನ್ನು ತಯಾರಿಸಬಹುದು. ಇಂದಿಗೂ ಹಳ್ಳಿಗಳಲ್ಲಿ ಈ ಚಟ್ನಿ ಫೇಮಸ್. 

ತರಕಾರಿ ಬೆಲೆ ಏರಿಕೆಯಾಗಿದ್ದಾಗ ಎಷ್ಟೋ ಬಡವರು ಈ ಚಟ್ನಿಯಿಂದಲೇ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಉತ್ತರ ಕರ್ನಾಟಕ ಕೂಲಿ ಕಾರ್ಮಿಕರ ಬುತ್ತಿ ಈ ಚಟ್ನಿಯನ್ನು ಹೊಂದಿರುತ್ತೆ. ಎರಡು ರೊಟ್ಟಿ ಅಥವಾ ಎರಡು ಸೌಟು ಅನ್ನಕ್ಕೆ ಈ ಚಟ್ನಿ ಕಲಿಸಿಕೊಂಡು ತಿಂದ್ರೆ ಸ್ವರ್ಗಕ್ಕೆ ಎರಡೇ ಗೇಣು. ಈ ಎರಡು ಪದಾರ್ಥಗಳ ಕಾಂಬಿನೇಷನ್‌ನಿಂದಲೇ ಬಡವರ ಮನೆ ಊಟ ರುಚಿ ಅಮ್ಮಿ ಅಂತ ವಿಷ್ಣುದಾದಾ ಹೇಳಿರಬೇಕು ಅಂತ ಅನ್ನಿಸುತ್ತದೆ. ಒಣಕೊಬ್ಬರಿ-ಬೆಳ್ಳುಳ್ಳಿ ಮಿಕ್ಸ್ ಚಟ್ನಿ ತಯಾರಿಸುವುದು ಹೇಗೆ ಎಂದು ನೋಡೋಣ ಬನ್ನಿ.

ಒಣಕೊಬ್ಬರಿ-ಬೆಳ್ಳುಳ್ಳಿ ಮಿಕ್ಸ್ ಚಟ್ನಿ ತಯಾರಿಸಲು ಬೇಕಾಗುವ ಸಾಮಾಗ್ರಿಗಳು

ಒಣಕೊಬ್ಬರಿ: 100 ಗ್ರಾಂ

ಬೆಳ್ಳುಳ್ಳಿ: 10 ರಿಂದ 15 ಎಸಳು

ಜೀರಿಗೆ: 1 ಟೀ ಸ್ಪೂನ್

ಎಣ್ಣೆ: 1 ಟೀ ಸ್ಪೂನ್

ಅಚ್ಚ ಖಾರದ ಪುಡಿ: 1/2 ಟೀ ಸ್ಪೂನ್

ಉಪ್ಪು ರುಚಿಗೆ ತಕ್ಕಷ್ಟು

ಕೋತಂಬರಿ ಸೊಪ್ಪು

ಒಣಕೊಬ್ಬರಿ-ಬೆಳ್ಳುಳ್ಳಿ ಮಿಕ್ಸ್ ಚಟ್ನಿ ಮಾಡುವ ವಿಧಾನ

*ಮೊದಲಿಗೆ ಬೆಳ್ಳುಳ್ಳಿ ಸಿಪ್ಪೆಯನ್ನು ಬಿಡಿಸಿಕೊಂಡು ಎತ್ತಿಟ್ಟುಕೊಳ್ಳಬೇಕು. ಆನಂತರ ಒಣಕೊಬ್ಬರಿಯನ್ನು ಕೆಂಡದ ಮೇಲೆ ಸುಟ್ಟಿಕೊಳ್ಳಿ. (ಕೆಂಡ ಇಲ್ಲದಿದ್ರೆ ಗ್ಯಾಸ್ ಮೇಲೆಯೇ ಹದವಾಗಿ ಸುಟ್ಟುಕೊಳ್ಳಿ)

* ತದನಂತರ ಕೆಂಡದ ಮೇಲೆ ಸುಟ್ಟುಕೊಂಡ ಒಣಕೊಬ್ಬರಿಯನ್ನು ಕಲ್ಲಿನಲ್ಲಿ ಚೆನ್ನಾಗಿ ಜಜ್ಜಿಕೊಳ್ಳಿ. ಮಿಕ್ಸಿಯಲ್ಲಿ ರುಬ್ಬಿಕೊಳ್ಳೋದರಿಂದ ಚಟ್ನಿ ರುಚಿ ಕಡಿಮೆಯಾಗುತ್ತದೆ. ಹಾಗಾಗಿಯೇ ಕಲ್ಲು ಅಥವಾ ಕುಟ್ಟಾಣಿಯಲ್ಲಿಯೇ ಕುಟ್ಟಿಕೊಳ್ಳಬೇಕು.

*ಕೊಬ್ಬರಿಯಲ್ಲಿ ಸಣ್ಣದಾಗಿ ಜಜ್ಜಿಕೊಂಡ ನಂತ್ರ ಇದಕ್ಕೆ ಸಿಪ್ಪೆ ಸುಲಿದ ಬೆಳ್ಳುಳ್ಳಿ ಮತ್ತು ಜೀರಿಗೆ ಸೇರಿಸಿ ಜಜ್ಜಿಕೊಳ್ಳಬೇಕು. ಇದಾದ ಬಳಿಕ ಎಣ್ಣೆ ಅಥವಾ ತುಪ್ಪ, ಅಚ್ಚ ಖಾರದ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಕೊನೆಗೆ ಬೇಕಿದ್ರೆ ಸಣ್ಣದಾಗಿ ಕೊಚ್ಚಿಕೊಂಡಿರುವ ಕೋತಂಬರಿಯನ್ನು ಸೇರಿಸಿಕೊಳ್ಳಬಹುದು. ಇದರಿಂದ ಒಣಕೊಬ್ಬರಿ ಮತ್ತು ಬೆಳ್ಳುಳ್ಳಿ ಚಟ್ನಿಯ ರುಚಿ ಮತ್ತಷ್ಟು ಹೆಚ್ಚಾಗುತ್ತದೆ.

ಇದನ್ನೂ ಓದಿ: ತಿಂಗಳಿಟ್ರೂ ಕಡೆದಂತಹ ಉತ್ತರ ಕರ್ನಾಟಕ ಶೈಲಿಯ ಖಾರ ಖಾರವಾದ ಮಿಕ್ಸ್ ಚಟ್ನಿ ಪುಡಿ ಮಾಡುವ ವಿಧಾನ

ಇದನ್ನೂ ಓದಿ:ಒಂದು ಮಾವಿನಕಾಯಿಯಿಂದ ಇಡೀ ಮನೆ ಮಂದಿಯ ಹೊಟ್ಟೆ ತುಂಬಿಸೋ ರೆಸಿಪಿ; ಹಳ್ಳಿ ಶೈಲಿಯ ಅಡುಗೆ



Source link

Leave a Reply

Your email address will not be published. Required fields are marked *