
ಹೋಟೆಲ್ ಮ್ಯಾನೇಜ್‌ಮೆಂಟ್ ಪೂರ್ಣಗೊಳಿಸಿದವರಿಗಷ್ಟೇ ಇಲ್ಲಿ ಕೆಲಸ ಮಾಡುವ ಅವಕಾಶ ಇದ್ದು, ಮಾಧ್ಯಮ ವರದಿಗಳ ಪ್ರಕಾರ, ರೊಟ್ಟಿ ತಯಾರಕರಿಗೆ ಕೂಡಾ ತಿಂಗಳಿಗೆ 2 ಲಕ್ಷ ರೂಪಾಯಿ ವೇತನವಿದೆ. ಅಂದರೆ ವರ್ಷಕ್ಕೆ 24 ಲಕ್ಷ ರೂ. ಅಷ್ಟಕ್ಕೂ 3 ಹೆಲಿಪ್ಯಾಡ್, 168 ಕಾರುಗಳನ್ನ ಏಕಕಾಲದಲ್ಲಿ ಪಾರ್ಕ್ ಮಾಡಬಲ್ಲ ಪಾರ್ಕಿಂಗ್, ಲಕ್ಸುರಿಯ, ಥರಾವರಿ ಸೌಲಭ್ಯ ಇರುವ ಅಂಬಾನಿ ಮನೆಯಲ್ಲಿ 600ಕ್ಕೂ ಹೆಚ್ಚು ನೌಕರರು ದುಡಿಯುತ್ತಿದ್ದಾರೆ. ಇವರಿಗೆ ಅಡುಗೆ ಮಾಡಿ ಹಾಕಲು ಪ್ರತ್ಯೇಕ ಶೆಫ್ ತಂಡವೇ ಇದೆ. ಇದರ ಅರ್ಥ ಸಾಮಾನ್ಯ ಜನರು ಒಂದು ಫಂಕ್ಷನ್ ಮಾಡಿದ್ರೆ ಎಷ್ಟು ಮಂದಿ ಬರಬಹುದೋ ಅಷ್ಟೇ ದಿನವೂ ಇಲ್ಲಿ ಅಡುಗೆ ಮಾಡಬೇಕು.