ಕುಂಭಮೇಳದ ಫೋಟೋದಿಂದ ವೈರಲ್ ಆಗಿದ್ದ ಹುಡುಗಿಯ ಮದುವೆ ವಿವಾದಕ್ಕೆ ತಿರುಗಿದೆ. ಆಕೆ ಅಪ್ರಾಪ್ತೆ ಎಂದು ರಾಷ್ಟ್ರೀಯ ಆಯೋಗ ಹೇಳಿದರೆ, ಮದುವೆಗೆ ನೀಡಿದ್ದ ಆಧಾರ್ ಕಾರ್ಡ್ ಅಸಲಿ ಎಂದು ಕೇರಳ ಪೊಲೀಸ್ ವರದಿ ತಿಳಿಸಿದೆ. ಈ ವಯಸ್ಸಿನ ಗೊಂದಲದಿಂದಾಗಿ ಆಕೆಯ ಪತಿಯ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.
ತಿರುವನಂತಪುರ: ಕುಂಭಮೇಳದ ಫೋಟೋದಿಂದ ವೈರಲ್ ಆಗಿದ್ದ ಹುಡುಗಿಯ ಮದುವೆ ವಿವಾದದಲ್ಲಿ, ಕೇರಳ ಪೊಲೀಸರ ಕಡೆಯಿಂದ ಯಾವುದೇ ತಪ್ಪು ನಡೆದಿಲ್ಲ ಎಂದು ಪೊಲೀಸ್ ವರದಿಯಲ್ಲಿ ಹೇಳಲಾಗಿದೆ. ಮದುವೆ ಸಮಯದಲ್ಲಿ ಹುಡುಗಿ ಕೊಟ್ಟಿದ್ದ ಆಧಾರ್ ಕಾರ್ಡ್ ಅಸಲಿಯಾಗಿದೆ ಅಂತ ಪೊಲೀಸರು ಪತ್ತೆ ಹಚ್ಚಿದ್ದಾರೆ.

UIDAI ವೆಬ್‌ಸೈಟ್‌ನಲ್ಲಿ ಪರಿಶೀಲಿಸಿ ಇದನ್ನ ಖಚಿತಪಡಿಸಿಕೊಂಡಿದ್ದಾರೆ ಅಂತ ವರದಿಯಲ್ಲಿ ತಿಳಿಸಲಾಗಿದೆ. ಇದೇ ಆಧಾರ್ ನಂಬರ್ ಆಕೆಯ ಜನ್ಮ ಪ್ರಮಾಣಪತ್ರದಲ್ಲೂ ಇದೆ. ಆದರೆ, ಜನ್ಮ ಪ್ರಮಾಣಪತ್ರವನ್ನು ದೃಢೀಕರಿಸಲು ಯಾವುದೇ ವ್ಯವಸ್ಥೆ ಇಲ್ಲ ಅಂತಾನೂ ವರದಿಯಲ್ಲಿ ವಿವರಿಸಲಾಗಿದೆ. ಈ ವರದಿಯನ್ನು ಡಿಜಿಪಿಗೆ ಹಸ್ತಾಂತರಿಸಲಾಗಿದೆ. ಇದೇ ತಿಂಗಳ 22ರಂದು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ ಮುಂದೆ ಡಿಜಿಪಿ ಹಾಜರಾಗಬೇಕಿದೆ.

ಈ ವೈರಲ್ ಹುಡುಗಿಯ ಮದುವೆ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಮದುವೆ ಸಮಯದಲ್ಲಿ ಹುಡುಗಿಗೆ 18 ವಯಸ್ಸು ಆಗಿರಲಿಲ್ಲ ಎಂದು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ಪತ್ತೆ ಹಚ್ಚಿತ್ತು. ಇದರ ಬೆನ್ನಲ್ಲೇ ಮಧ್ಯಪ್ರದೇಶ ಪೊಲೀಸರು ಆಕೆಯ ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದರು. ಕಳೆದ ಮಾರ್ಚ್ 11 ರಂದು ತಿರುವನಂತಪುರದ ಅರುಮಾನೂರ್ ಶ್ರೀ ನೈನಾರ್ ದೇವ ದೇವಸ್ಥಾನದಲ್ಲಿ ಈ ಮದುವೆ ನಡೆದಿತ್ತು.

ಮದುವೆ ವೇಳೆ ಹುಡುಗಿಗೆ ಕೇವಲ 16 ವರ್ಷ 2 ತಿಂಗಳು ವಯಸ್ಸಾಗಿತ್ತು ಎಂದು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ಹೇಳಿದೆ. ಮದುವೆಗಾಗಿ ನಕಲಿ ಜನ್ಮ ಪ್ರಮಾಣಪತ್ರ ಸೃಷ್ಟಿಸಲಾಗಿದೆ ಅಂತಾನೂ ಆಯೋಗದ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ಸಂಬಂಧ ತನಿಖೆಗೆ ಆದೇಶಿಸಲಾಗಿತ್ತು.

ಇದನ್ನೂ ಓದಿ: ಅಂಬಾನಿ ಮನೆಯಲ್ಲಿ ರೊಟ್ಟಿ ಮಾಡಿದ್ರೆ ಸಿಗತ್ತೆ 24 ಲಕ್ಷ ರೂ. ಸಂಬಳ: ಇದೊಂದು ಕ್ವಾಲಿಫಿಕೇಷನ್ ಇದ್ರೆ ಸಾಕು ನೋಡಿ

ಮಧ್ಯಪ್ರದೇಶದ ಆಸ್ಪತ್ರೆ ದಾಖಲೆಗಳ ಪ್ರಕಾರ, ಆ ಹುಡುಗಿ 2009ರ ಡಿಸೆಂಬರ್ 30ರಂದು ಜನಿಸಿದ್ದಾಳೆ. ಈ ಕಾರಣಕ್ಕಾಗಿಯೇ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಕೇರಳ ಮತ್ತು ಮಧ್ಯಪ್ರದೇಶದ ಡಿಜಿಪಿಗಳು ದೆಹಲಿಯಲ್ಲಿ ಹಾಜರಾಗುವಂತೆ ಆಯೋಗ ಸೂಚನೆ ನೀಡಿದೆ.

ಇದನ್ನೂ ಓದಿ: Karna Serial: ಕರ್ಣನಿಗೆ ಠಕ್ಕರ್ ಕೊಡೋಕೆ ಬಂದ ಹ್ಯಾಂಡ್ಸಮ್ ಅರ್ಜುನ್ ; ಗಗನ್ ಗ್ರ್ಯಾಂಡ್ ಎಂಟ್ರಿಗೆ ಕಿರಣ್ ರಾಜ್ ಶಾಕ್

Source link
ಕುಂಭಮೇಳ ವೈರಲ್ ಹುಡುಗಿ ಮದುವೆ ವಯಸ್ಸಿನ ವಿವಾದದಲ್ಲಿ ಹೊಸ ತಿರುವು! ಕೇರಳ ಪೊಲೀಸರ ತನಿಖೆ