ಜೂ ಎನ್​​ಟಿಆರ್ ಸಿನಿಮಾಕ್ಕೆ ಬಾಲಿವುಡ್ ನಟನಿಗೆ ಗಾಳ ಹಾಕಿದ ಪ್ರಶಾಂತ್ ನೀಲ್

ಜೂ ಎನ್​​ಟಿಆರ್ ಸಿನಿಮಾಕ್ಕೆ ಬಾಲಿವುಡ್ ನಟನಿಗೆ ಗಾಳ ಹಾಕಿದ ಪ್ರಶಾಂತ್ ನೀಲ್


ಜೂ ಎನ್ ಟಿಆರ್ ಸಿನಿಮಾಕ್ಕೆ ಬಾಲಿವುಡ್ ನಟನಿಗೆ ಗಾಳ ಹಾಕಿದ ಪ್ರಶಾಂತ್ ನೀಲ್

ಜೂ ಎನ್ ಟಿಆರ್ (Jr NTR) ನಟಿಸಿ ಪ್ರಶಾಂತ್ ನೀಲ್ (ಪ್ರಶಾಂತ್ ನೀಲ್) ನಿರ್ದೇಶನ ಮಾಡುತ್ತಿರುವ ‘ಡ್ರ್ಯಾಗನ್’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಸಿನಿಮಾದ ಚಿತ್ರಗಳು ಕರ್ನಾಟಕ, ಹೈದರಾಬಾದ್‌ನಲ್ಲಿ ವಿದೇಶಗಳಲ್ಲಿಯೂ ಚಿತ್ರೀಕರಣ ನಡೆಯುತ್ತಿದೆ. ಸಿನಿಮಾಕ್ಕೆ ಹೊಸ-ಹೊಸ ಕಲಾವಿದರು ಸೇರುತ್ತಿದ್ದಾರೆ. ಇತ್ತೀಚೆಗಷ್ಟೇ ಮಲಯಾಳಂ ಸ್ಟಾರ್ ನಟ ಟೊವಿನೋ ಥಾಮಸ್ ಅವರನ್ನು ಪ್ರಮುಖ ಪಾತ್ರಕ್ಕಾಗಿ ಕೇಳಲಾಯಿತು. ಆದರೆ ಟೊವಿನೊ, ಪಾತ್ರವನ್ನು ನಿರಾಕರಿಸಿದ್ದರು. ಇದೀಗ ಅದೇ ಪಾತ್ರಕ್ಕೆ ಬಾಲಿವುಡ್ ನಟನೊಬ್ಬನ ಆಯ್ಕೆ ಮಾಡಿದ್ದಾರಂತೆ ಪ್ರಶಾಂತ್ ನೀಲ್.

ಪ್ರಶಾಂತ್ ನೀಲ್ ನಿರ್ದೇಶನದ, ಜೂನಿಯರ್ ಎನ್‌ಟಿಆರ್ ನಟನೆಯ ಹೊಸ ಚಿತ್ರಕ್ಕಾಗಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರನ್ನು ಸಂಪರ್ಕಿಸಲಾಗಿದೆ. ಈ ಮೊದಲು ಮಲಯಾಳಂ ನಟ ಟೊವಿನೋ ಥಾಮಸ್ ಅವರು ನಿರ್ವಹಿಸಬೇಕಿದ್ದ ಪಾತ್ರಕ್ಕೆ ಈಗ ವಿವೇಕ್ ಒಬೆರಾಯ್ ಮೊದಲು ಆಯ್ಕೆಯಾಗಿದ್ದಾರೆ. ವಿವೇಕ್ ಒಬೆರಾಯರು ಪ್ರಭಾಸ್ ನಟನೆಯ ‘ಸ್ಪಿರಿಟ್’ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಅದರ ಜೊತೆಗೆ ಇದೀಗ ‘ಡ್ರ್ಯಾಗನ್’ ಸಿನಿಮಾದಲ್ಲಿಯೂ ವಿವೇಕ್ ನಟಿಸಲಿದ್ದಾರೆ.

ಇದನ್ನೂ ಓದಿ:’ಡ್ರ್ಯಾಗನ್’ ಸಿನಿಮಾ ಶೂಟಿಂಗ್ ನಿಲ್ಲಿಸಿದ ಪ್ರಶಾಂತ್ ನೀಲ್, ಜೂ. ಎನ್ಟಿಆರ್; ಕಾರಣ ಏನು?

ವಿವೇಕ್ ಒಬೆರಾಯರಿಗೆ ದಕ್ಷಿಣದ ಚಿತ್ರರಂಗ ಹೊಸದೇನೂ ಅಲ್ಲ. ಹಲವು ವರ್ಷಗಳಿಂದ ಅವರು ಬಾಲಿವುಡ್ ಜೊತೆಗೆ ತೆಲುಗು, ತಮಿಳು, ಮಲಯಾಳಂ, ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಲೇ ಬಂದಿದ್ದಾರೆ. ಕನ್ನಡದ ‘ರುಸ್ತುಂ’ ಸಿನಿಮಾದಲ್ಲಿಯೂ ವಿವೇಕ್ ಒಬೆರಾಯ್ ನಟಿಸಿದ್ದಾರೆ. ಹಿಂದೆ ಬಾಲಿವುಡ್‌ನಲ್ಲಿ ಚಾಕಲೇಟ್ ಹೀರೋ, ಶಾರುಖ್ ಖಾನ್‌ಗೆ ಸ್ಪರ್ಧಿ ಎಂದೆಲ್ಲ ಎನಿಸಿಕೊಂಡಿದ್ದ ವಿವೇಕ್ ಒಬೆರಾಯ್ ಈಗ ವಿಲನ್ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ‘ಡ್ರ್ಯಾಗನ್’ ಸಿನಿಮಾದಲ್ಲಿಯೂ ಸಹ ವಿವೇಕ್ ಅವರದ್ದು ವಿಲನ್ ಪಾತ್ರ.

ಜೂ ಎನ್ ಟಿಆರ್ ನಟನೆಯ ಸಿನಿಮಾದಲ್ಲಿ ಕನ್ನಡದ ನಟಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಪಕ್ಕಾ ಆಕ್ಷನ್ ಸಿನಿಮಾ ಆಗಿರುತ್ತದೆ. ಆದರೆ ಮೊದಲ ಬಾರಿಗೆ ಈ ಸಿನಿಮಾಕ್ಕಾಗಿ ವಿದೇಶಕ್ಕೆ ತೆರಳಿದ ಪ್ರಶಾಂತ್ ನೀಲ್. ಅದು ಮಾತ್ರವೇ ಅಲ್ಲದೆ, ಈ ಸಿನಿಮಾದಲ್ಲಿ ತಮ್ಮ ಎಂದಿನ ಡಾರ್ಕ್ ಶೇಡ್ ಬಿಟ್ಟು ತುಸು ಕಲರ್ ಫುಲ್ ಶೇಡ್ ಗಳು ಕಾಣಿಸಲಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *