
ಬೆಂಗಳೂರು, ಏಪ್ರಿಲ್ 12: ಈ ಬಾರಿಯ ಬಿರುಬಿಸಿಲು ಸಿಲಿಕಾನ್ ಸಿಟಿ ಜನರನ್ನ ಬಿಡದೆ ಕಾಡುತ್ತಿದೆ. ಮನೆಯಲ್ಲಿದ್ದರೆ ಬಿಸಿಲ ಧಗೆ (ಉಷ್ಣ ಅಲೆ). ಇನ್ನು ಹೊರಗೆ ಬಂದರೆ ಸುಡೋ ಬಿಸಿಲು. ಹೀಗಾಗಿ ಜನರು ಕೂಲ್ ಡ್ರಿಂಕ್ಸ್, ಎಳನೀರು ಮೊರೆ ಹೋಗುತ್ತಿದ್ದಾರೆ. ಆದರೆ ರಾತ್ರಿ ನಿದ್ದೆ ಮಾಡುವುದಕ್ಕೆ ಸಂಕಷ್ಟ ಶುರುವಾಗಿದೆ. ಮತ್ತೊಂದೆಡೆ ಏರ್ ಕೂಲರ್ ಹಾಗೂ ಎಸಿಗೆ ಡಿಮ್ಯಾಂಡ್ ಕೂಡ ಶುರುವಾಗಿದೆ.
ರಾತ್ರಿ ನಿದ್ದೆಗೆ ಬಿಸಿಲು ಅಡ್ಡಿ
ಸದ್ಯದಲ್ಲಿ 35 ರಿಂದ 36 ಡಿಗ್ರಿ ತಾಪಮಾನ ದಾಖಲಾಗುತ್ತಿದೆ. ಏಪ್ರಿಲ್ ಕೊನೆಯ ವಾರದ ನಂತರ 37 ರಿಂದ 38* ಡಿಗ್ರಿ ತಲುಪುವ ಸಾಧ್ಯತೆ ಇದೆ. ಇನ್ನು ಬೆಂಗಳೂರಿನಲ್ಲಿ ರಾತ್ರಿ ವೇಳೆ 24 ರಿಂದ 26 ಡಿಗ್ರಿ ತಾಪಮಾನ ಇರುತ್ತದೆ. ಹೀಗಾಗಿ ಜನರು ನಿದ್ದೆ ಮಾಡಲು ಪರದಾಡುತ್ತಿದ್ದಾರೆ.
ಹವಾಮಾನ ವೈಪರಿತ್ಯ: ನೈಸರ್ಗಿಕ ಪ್ರಕ್ರಿಯೆಯಲ್ಲಿ ಏಳುಪೇರು
ಹತ್ತು ವರ್ಷಗಳ ಹಿಂದೆ ಬೆಂಗಳೂರಿನ ಉಷ್ಠಾಂಶ 36 ಡಿಗ್ರಿ ದಾಟಿದಾಗ ಮಳೆ ಕಡ್ಡಾಯವಾಗಿ ಸುರಿಯುತ್ತಿತ್ತು. ಉಷ್ಠಾಂಶ ಹೆಚ್ಚಾದಾಗ ಗಾಳಿಯ ಒತ್ತಡ ಕಡಿಮೆಯಾಗಿ, ಪ್ರೆಶರ್ ಬೆಲ್ಟ್ ಕ್ರಿಯೇಟ್, ಗಾಳಿ, ಮೋಡಗಳನ್ನು ಮಳೆ ಸುರಿಯುತ್ತಿದೆ. ಆದರೆ ಈ ಸಾಮಾನ್ಯ ನೈಸರ್ಗಿಕ ಪ್ರಕ್ರಿಯೆ ಸದ್ಯ ಬದಲಾಗಿದೆ. ವಾಯು ಮಾಲಿನ್ಯದಿಂದ ಹವಾಮಾನ ವೈಪರಿತ್ಯ ಆರಂಭಗೊಂಡಿದೆ. ರಾತ್ರಿಯಾದ್ರೂ ಉಷ್ಟಾಂಶ ತಗ್ಗದೇ, ಇದರಿಂದ ನಿದ್ರೆಯ ಸಮಸ್ಯೆ ಶುರುವಾಗಿದೆ. ರಾತ್ರಿ ವೇಳೆಯೂ ಹೆಚ್ಚು ತಾಪಮಾನದ ಸಿಟಿ ಜನರು ಪರದಾಡುವಂತಾಗಿದೆ ಎಂದು ಜೆಕೆವಿಕೆ ಹವಾಮಾನ ವಿಭಾಗದ ಪ್ರೊ. ತಿಮ್ಮೇಗೌಡ ಹೇಳಿದ್ದಾರೆ.
ಎಸಿ ಮತ್ತು ಏರ್ ಕೂಲರ್ಗಳಿಗೆ ಭರ್ಜರಿ ಡಿಮ್ಯಾಂಡ್
ಸದ್ಯ ಬಿರುಬಿಸಿಲಿಗೆ ಎಲ್ಲರೂ ತತ್ತರಿಸಿ ಹೋಗಿದ್ದಾರೆ. ಕೂಲ್ ಸಿಟಿ ಖ್ಯಾತಿಯ ಬೆಂಗಳೂರು ಸದ್ಯ ಹಾಟ್ ಸಿಟಿಯಾಗಿದೆ. ಹೀಗಾಗಿ ಜನರು ಮನೆಯಿಂದ ಹೊರಗೆ ಬಂದರೆ ಸಾಕು ತಂಪಾಗಿರೋದಕ್ಕೆ ಅಂತ ಎಳನೀರು, ಜ್ಯೂಸ್ ಕುಡಿತಿದ್ದಾರೆ. ಆದರೆ ಮನೆಯಲ್ಲಿ ಮುಂಜಾನೆ ಬಿಸಿಲಿನ ಧಗೆಯಾದ್ರೆ ಸಂಜೆ ವೇಳೆಗೆ ಪ್ಯಾನ್ ಹಾಕಿದ್ರೂ ಬಿಸಿ ಗಾಳೆ ಬರುತ್ತದೆ. ರಾತ್ರಿ ನಿದ್ದೆ ಮಾಡುವುದಕ್ಕೆ ಆಗುತ್ತಿಲ್ಲ. ಹೀಗಿರುವಾಗ ಏರ್ ಕೂಲರ್ ಹಾಗೂ ಎಸಿಗಳಿಗೆ ಭರ್ಜರಿ ಡಿಮ್ಯಾಂಡ್ ಶುರುವಾಗಿದೆ.
ಮನೆಗಳಲ್ಲಿ ವಾತಾವರಣ ನಿರ್ಮಾಣಕ್ಕೆ ಏರ್ ಕೂಲಿಂಗ್, ಎಸಿಗೆ ಸಕತ್ ಬೇಡಿಕೆ ಶುರುವಾಗಿದೆ. ಗ್ರಾಹಕರ ಆರೋಗ್ಯ ಮತ್ತು ನೈರ್ಮಲ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ತಯಾರಿಸಿದ ಕೂಲಿಂಗ್ ಅಪ್ಲಾಯನ್ಸ್ಗೆ ಬೇಡಿಕೆ ದುಪ್ಪಟ್ಟಾಗಿದೆ.
ಇದನ್ನೂ ಓದಿ: ಕರ್ನಾಟಕದ ಕಾಲು ಭಾಗ ಜನ ಕುಡಿಯೋದು ಕ್ಯಾನ್, ಬಾಟಲ್ ನೀರು! ಇಲ್ಲಿ ನೀರಿಗಿಂತ ಬಾಟಲ್ ವಾಟರ್ಗೇ ಹೆಚ್ಚು ಬೇಡಿಕೆಯಿದೆ
ಇನ್ನು ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗಬಹುದು, ಸದ್ಯಕ್ಕೆ ಏರ್ ಕೂಲರ್ ಹಾಗೂ ಎಸಿಗಳ ಬೇಡಿಕೆ ಶುರುವಾಗಿದೆ. ಇದು ಮುಂದಿನ ದಿನದಲ್ಲಿ ಮತ್ತಷ್ಟು ಬಿಸಿಲಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ, ಸಿಟಿ ಜನರ ಆರೋಗ್ಯದ ಬಗ್ಗೆ ಕೊಂಚ ಎಚ್ಚರವಹಿಸಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.