
ತೆಲುಗು ಚಿತ್ರರಂಗದ (ಟಾಲಿವುಡ್) ಜನಪ್ರಿಯ ಗಾಯಕಿ ಮಂಗ್ಲಿ (ಸಿಂಗರ್ ಮಂಗ್ಲಿ) ವಿರುದ್ಧ ಹೈದರಾಬಾದ್ನ ಪಂಜಗುಟ್ಟಾ ಪೊಲೀಸ್ ಠಾಣೆಯಲ್ಲಿ 10 ಕೋಟಿ ರೂಪಾಯಿಗಳ ವಂಚನೆಯ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ವಕೀಲ ಸುಬ್ಬರಾವ್ ಎಂಬುವವರು ಈ ದೂರನ್ನು ನೀಡಿದ್ದು, ಮಂಗ್ಲಿ ಮತ್ತು ಅವರ ಸಹೋದರ ಶಿವ ಸೇರಿದಂತೆ ಎಟ್ ಹಲವರಿಂದ ಹಣ ಪಡೆದು ಹೂಡಿಕೆದಾರರಿಗೆ ವಂಚಿಸಿದ್ದಾರೆ, ಹಣ ಮರಳಿ ಕೇಳಿದವರಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಇದೀಗ ವಕೀಲ ಸುಬ್ಬರಾವ್ ವಿರುದ್ಧ ಗಾಯಕಿ ಮಂಗ್ಲಿ ಪ್ರತಿದೂರು ದಾಖಲಿಸಿದ್ದಾರೆ.
ದೂರುದಾರ ಸುಬ್ಬರಾವ್ ಅವರ ಪ್ರಕಾರ, ಮಂಗ್ಲಿ ಮತ್ತು ಅವರ ತಂಡ ಮೈಕ್ರೋಫೈನಾನ್ಸ್, ರಿಯಲ್ ಎಸ್ಟೇಟ್ ಮತ್ತು ಇಂಪೋರ್ಟ್-ಎಕ್ಸ್ಪೋರ್ಟ್ ವ್ಯವಹಾರಗಳಲ್ಲಿ ಹೆಚ್ಚಿನ ಲಾಭದ ಆಮಿಷವೊಡ್ಡಿ ಸುಮಾರು 100 ರಿಂದ 150 ಜನರಿಂದ ಹಣವನ್ನು ಸಂಗ್ರಹಿಸಲಾಗಿದೆ. ಸುಮಾರು 10 ಕೋಟಿ ರೂಪಾಯಿ ಹಣವನ್ನು ಹೂಡಿಕೆದಾರರಿಂದ ಪಡೆದು, ಈಗ ಅಸಲು ಮತ್ತು ಲಾಭ ಎರಡನ್ನೂ ನೀಡದೆ ವಂಚಿಸುತ್ತಿದ್ದಾರೆ ಎಂದು ಸುಬ್ಬರಾವ್ ದೂರಿದ್ದಾರೆ. ಹೂಡಿಕೆ ಮಾಡಿದ ಹಣವನ್ನು ಮರಳಿ ಕೇಳಿದಾಗ ಮಂಗ್ಲಿ ಅವರ ಸಹೋದರ ಶಿವ ಮತ್ತು ತಮಗೆ ಕೊಲೆ ಬೆದರಿಕೆ ಹಾಕಿದ್ದಾರೆ ಹಾಗೂ ಅಪಘಾತ ಮಾಡಿ ಸಾಯಿಸುತ್ತಿದ್ದಾರೆ ಎಂದು ವಕೀಲರು ದೂರಿನಲ್ಲಿ ತಿಳಿಸಿದ್ದಾರೆ.
ಈ ಆರೋಪಗಳನ್ನು ತಳ್ಳಿಹಾಕಿರುವ ಗಾಯಕಿ ಮಂಗ್ಲಿ, ವಕೀಲ ಸುಬ್ಬರಾವ್ ಅವರ ವಿರುದ್ಧ ಹೈದರಾಬಾದ್ ನರಸಿಂಗಿ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ. ಸುಬ್ಬರಾವ್ ಅವರು ತಮ್ಮ ಹೆಸರನ್ನು ಕೆಡಿಸಲು ಸಂಚು ರೂಪಿಸಿದ್ದಾರೆ ಮತ್ತು 150 ಕೋಟಿ ಹಗರಣ ಮಾಡಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಅವರು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ ಎಂದು ಮಂಗ್ಲಿ ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಘನತೆಗೆ ಕುಂದು ತರುವಂತಹ ವಿಡಿಯೋಗಳನ್ನು ಹರಿಬಿಡುವುದಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ:ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಪ್ರಸ್ತುತ ಪಂಜಗುಟ್ಟಾ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಮಂಗ್ಲಿ ಅವರ ಸಹೋದರನ ವಿರುದ್ಧ ಪ್ರಕರಣ ದಾಖಲಾಗಿದೆ. ಮತ್ತೊಂದೆಡೆ, ಮಂಗ್ಲಿ ನೀಡಿದ ದೂರಿನ ವಕೀಲ ಸುಬ್ಬರಾವ್ ವಿರುದ್ಧವೂ ತನಿಖೆ ನಡೆಯುತ್ತಿದೆ. ಸತ್ಯಾಸತ್ಯತೆಯನ್ನು ಪರಿಶೀಲಿಸಲು ದಾಖಲಾತಿಗಳನ್ನು ಸಂಗ್ರಹಿಸಲಾಗುತ್ತಿದೆ.
ಮಂಗ್ಲಿ, ತೆಲುಗು ಚಿತ್ರರಂಗದ ಜನಪ್ರಿಯ ಗಾಯಕಿ. ಬಡ ಮತ್ತು ಹಿಂದುಳಿದ ಕುಟುಂಬದಿಂದ ಬಂದು ಒಂದೆಡೆ ಹೆಜ್ಜೆಗಳನ್ನು ಇಡುತ್ತಾ ಈಗ ಜನಪ್ರಿಯ ಗಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಇದೀಗ ಮಂಗ್ಲಿ ವಿರುದ್ಧ ಹಣಕಾಸು ವಂಚನೆಯ ಆರೋಪ ಕೇಳಿಬಂದಿದೆ. ಕಳೆದ ವರ್ಷ, ಖಾಸಗಿ ರೆಸಾರ್ಟ್ನಲ್ಲಿ ನಡೆದಿದ್ದ ಮಂಗ್ಲಿಯ ಹುಟ್ಟುಹಬ್ಬದ ಆಚರಣೆಯ ಮೇಲೆ ಸಹ ಪೊಲೀಸರು ದಾಳಿ ನಡೆಸಿದ್ದರು. ಆ ವೇಳೆ ಮದ್ಯದ ಬಾಟಲಿಗಳು ಲಭ್ಯವಾಗಿದ್ದವು, ಅನುಮತಿ ಇಲ್ಲದೆ ಪಾರ್ಟಿಯಲ್ಲಿದೆ ಎಂದು ದೂರು ದಾಖಲಾಗಿತ್ತು. ಆದರೆ ಯಾವುದೇ ಕಾನೂನು ಬಾಹಿರ ಮಾದಕ ವಸ್ತುಗಳ ಪತ್ತೆ ಆಗಿರಲಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ