
ದಕ್ಷಿಣ ಭಾರತದಲ್ಲಿ ಭಾನುಪ್ರಿಯಾ ಕ್ಲಾಸಿಕಲ್ ಸಿನಿಮಾಗಳಿಂದ ಹೆಚ್ಚು ಜನಪ್ರಿಯರಾದ ನಟಿ. ಒಂದು ಕಾಲದಲ್ಲಿ ಟಾಲಿವುಡ್‌ನ ದೊಡ್ಡ ಸ್ಟಾರ್‌ಗಳ ಜೊತೆ ನಟಿಸಿದ್ದಾರೆ. ಸಾಂಪ್ರದಾಯಿಕ ಲುಕ್‌ನಲ್ಲಿ ಕಾಣಿಸಿಕೊಂಡು ಮನಸೆಳೆದಿದ್ದಾರೆ.
ತಮಿಳಿನಲ್ಲಿ ನಾಯಕಿಯಾಗಿ ಪರಿಚಿತರಾದ ಭಾನುಪ್ರಿಯಾ ಅವರನ್ನು ‘ಸೀತಾರ’ ಚಿತ್ರಕ್ಕಾಗಿ ತೆಲುಗಿಗೆ ಕರೆತಂದವರು ನಿರ್ದೇಶಕ ವಂಶಿ. ಭಾನುಪ್ರಿಯಾ ಅವರನ್ನು ನೋಡಿ ಅನೇಕರು ತಿರಸ್ಕರಿಸಿದರೂ, ಅವರನ್ನು ನಂಬಿದವರು ಹಾಗೂ ಸಿನಿ ಜೀವನವನ್ನು ಕಟ್ಟಿಕೊಟ್ಟವರು ನಿರ್ದೇಶಕ ವಂಶಿ ಮಾತ್ರ.