
ಜನವರಿ, ಏಪ್ರಿಲ್ 12: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಇರಾನ್ ಮತ್ತು ಅಮೆರಿಕ ನಡುವಿನ ಸಂಧಾನ ಮಾತುಕತೆಗಳು ಮುರಿದುಬಿದ್ದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಅವರು ಹಾರ್ಮುಜ್ ಜಲಸಂಧಿ (Hormuz Strait) ಮೇಲೆ ಕಣ್ಣು ಇರಿಸಿದ್ದಾರೆ. ಈ ಜಲಸಂಧಿಯನ್ನು ಪೂರ್ಣವಾಗಿ ತಡೆಯುವಂತೆ ಅಮೆರಿಕದ ನೌಕಾಪಡೆಗೆ ತಿಳಿಸಲಾಗಿದೆ. ಈ ಕ್ಷಣದಿಂದಲೇ ಹಾರ್ಮುಜ್ ಜಲಸಂಧಿಯಿಂದ ಯಾವುದೇ ಹಡಗು ಹೊರಹೋಗದಂತೆ, ಹಾಗೂ ಹೊರಗಿನಿಂದ ಯಾವ ಹಡಗೂ ಒಳಗೆ ಹೋಗದಂತೆ ತಡೆಯುವ ಪ್ರಕ್ರಿಯೆ ಎಂದು ಟ್ರಂಪ್ ಘೋಷಿಸಿದ್ದಾರೆ.
ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಇರಾನ್ ಮತ್ತು ಅಮೆರಿಕ ನಡುವೆ ನಡೆದ ಸಂಧಾನ ಮುರಿದುಬೀಳಲು ಹಲವು ಕಾರಣಗಳನ್ನು ಪ್ರಸ್ತಾಪಿಸಲಾಗಿದೆ. ಇದರಲ್ಲಿ ಎರಡು ಪ್ರಮುಖವಾದದ್ದು, ಪರಮಾಣ ಶಸ್ತ್ರಾಸ್ತ್ರ ತಯಾರಿಕೆಯನ್ನು ನಿಲ್ಲಿಸಲು ಇರಾನ್ ಒಪ್ಪದೆ ಇದ್ದದ್ದು. ಹಾಗೆಯೇ, ಹಾರ್ಮುಜ್ ಜಲಸಂಧಿಯನ್ನು ಮುಕ್ತವಾಗಿ ಬಿಡಲೂ ಇರಾನ್ ಒಪ್ಪದಿದ್ದುದು ಇನ್ನೊಂದು ಕಾರಣ.
ಇದನ್ನೂ ಓದಿ: ಪಾಕಿಸ್ತಾನದ ಮಧ್ಯಸ್ಥಿಕೆ ಇಲ್ಲದೇ ಇದ್ದರೆ ಇಸ್ರೇಲ್‌ಗೆ ತಕ್ಕ ಶಾಸ್ತಿಯಾಗುತ್ತಿದೆ: ಟರ್ಕಿ ಅಧ್ಯಕ್ಷ ಎರ್ಡೋಗನ್ ಗುಡುಗು
ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಎಲ್ಲಾ ಹಡಗುಗಳಿಂದಲೂ ಸುಂಕ ವಸೂಲಿ ಮಾಡುವ ವ್ಯವಸ್ಥೆ ನಿರ್ಮಿಸಲಾಗಿದೆ. ಹಾರ್ಮುಜ್ ಜಲಸಂಧಿಯನ್ನು ದಾಟಬೇಕಾದರೆ ಇರಾನ್‌ಗೆ ಟೋಲ್ ಕಟ್ಟಬೇಕು. ನಂತರ, ಇರಾನ್ ನೌಕಾಸೇನೆಯ ಬೆಂಗಾವಲಿನಲ್ಲಿ ಆ ಹಡಗು ಹಾರ್ಮುಜ್ ಜಲಸಂಧಿ ದಾಟಲು ಅವಕಾಶ ಕೊಡದಿದ್ದರೆ. ಇಂಥದ್ದೊಂದು ವ್ಯವಸ್ಥೆ ಇರಾನ್ ಮಾಡಿದೆ. ಈಗ ಅಮೆರಿಕದ ಸೇನೆಯಿಂದ ಹಾರ್ಮುಜ್ ಜಲಸಂಧಿಯನ್ನು ಹಿಡಿತಕ್ಕೆ ತರಲು ಹೊರಟಿದೆ. ಇದು ಇನ್ನಷ್ಟು ಭೀಕರ ಯುದ್ಧಕ್ಕೆ ಎಡೆ ಮಾಡಿಕೊಡಬಹುದು.
ಸಂಧಾನಕ್ಕೆ ಮಧ್ಯಸ್ಥಿಕೆ ವಹಿಸಲು ರಷ್ಯಾ ಸಿದ್ಧ
ಇದೇ ವೇಳೆ, ಅಮೆರಿಕ ಮತ್ತು ಇರಾನ್ ಮಧ್ಯೆ ಒಂದು ರಾಜಿ ಏರ್ಪಡಿಸಲು ಮಧ್ಯಸ್ಥಿಕೆ ವಹಿಸಲು ತಾನು ಸಿದ್ಧ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಇರಾನ್ ಅಧ್ಯಕ್ಷ ಮಸೂದ್ ಪೆಜೇಶ್ಕಿಯನ್ ಅವರಿಗೆ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ಇರಾನ್-ಅಮೆರಿಕ ಸಂಧಾನಕ್ಕೆ ‘ಪರಮಾಣು’ ತಡೆ: ಇಸ್ಲಾಮಾಬಾದ್ ಮ್ಯಾರಥಾನ್ ಮಾತುಕತೆ ಹಳಿ ತಪ್ಪಿದ್ದೇಕೆ?
ಈ ಇಬ್ಬರು ನಾಯಕರು ಫೋನ್ ಮೂಲಕ ಮಾತನಾಡಿ, ಪ್ರಸ್ತುತ ವಿದ್ಯಮಾನಗಳನ್ನು ಚರ್ಚಿಸಿದ್ದಾರೆ. ಈ ಸಂಘರ್ಷ ಅಥವಾ ಬಿಕ್ಕಟ್ಟಿಗೆ ರಾಜಕೀಯವಾದ ಮತ್ತು ರಾಜತಾಂತ್ರಿಕವಾದ ಪರಿಹಾರಕ್ಕೆ ಪ್ರಯತ್ನಿಸಲು ತಾನು ಸಿದ್ಧ ಎಂದು ಈ ವೇಳೆ ಪುಟಿನ್ ಅವರಿಗೆ ಆಫರ್ ಮಾಡಲಾಗಿದೆ.
ಇರಾನ್ ಮತ್ತು ಅಮೆರಿಕದ ನಡುವಿನ ಕದನವಿರಾಮ 15 ದಿನಗಳದ್ದಾಗಿದೆ. ಇನ್ನು 9-10 ದಿನಗಳು ಬಾಕಿ ಇವೆ. ಅಷ್ಟರೊಳಗೆ ರಾಜಿ ಏರ್ಪಟ್ಟರೆ ಯುದ್ಧ ನಿಲ್ಲಬಹುದು. ಇಲ್ಲದಿದ್ದರೆ ಹೆಚ್ಚು ತೀವ್ರತೆಯಲ್ಲಿ ಸಮರ ಮುಂದುವರಿಯುವ ಸಾಧ್ಯತೆ ಇದೆ.
ಹೆಚ್ಚಿನ ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ