
ಜನವರಿ, ಏಪ್ರಿಲ್ 12: ಆಫ್ರಿಕಾದ ಉಗಾಂಡ ಮಿಲಿಟರಿ ಮುಖ್ಯಸ್ಥ ಮುಹೂಝಿ ಕೈನೇರುಗಬ (Muhoozi Kainerugaba) ಅವರು ಟರ್ಕಿ ದೇಶದಿಂದ 1 ಬಿಲಿಯನ್ ಡಾಲರ್ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಂದರೆ, 9,300 ಕೋಟಿ ರೂ ಅನ್ನು ಉಗಾಂಡಕ್ಕೆ ಟರ್ಕಿ ಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲ, ಟರ್ಕಿ ದೇಶದ ಅತ್ಯಂತ ಸುಂದರ ಮಹಿಳೆಯನ್ನು ತನಗೆ ಮದುವೆಯಾಗಲು ಒಪ್ಪಬೇಕು ಎಂದೂ ಕೇಳಿದ್ದಾರೆ.
ಟರ್ಕಿಯಿಂದ ಮುಹೂಝಿ ಹಣ ಕೇಳುತ್ತಿರುವುದು ಯಾಕೆ?
ಟರ್ಕಿ ದೇಶವು ಸೊಮಾಲಿಯಾದಲ್ಲಿ ಸಮುದ್ರ ಬಂದರುಗಳು, ವಿಮಾನ ನಿಲ್ದಾಣಗಳು, ಮೂಲಸೌಕರ್ಯ ಯೋಜನೆಗಳ ನಿರ್ಮಾಣ ಇತ್ಯಾದಿ ಸಾಕಷ್ಟು ವ್ಯವಹಾರಗಳನ್ನು ನಡೆಸುತ್ತಿದೆ. ಆದರೆ, ಸೊಮಾಲಿಯಾದಲ್ಲಿ ಎರಡು ಇಡಲಾಗಿದ್ದು ಉಗಾಂಡದಿಂದ ಭದ್ರತೆ ಒದಗಿಸಲಾಗಿದೆ. ಅಲ್ ಖೈದಾ ಸಂಬಂಧ ಇರುವ ಅಲ್ ಶಾಬಾದ್ ಉಗ್ರ ಸಂಘಟನೆಯ ಉಪಟಳವನ್ನು ನಿಯಂತ್ರಿಸಲು ಉಗಾಂಡ ನೆರವಾಗಿದೆ. ಪ್ರಾದೇಶಿಕ ಭದ್ರತೆಗೆ ಉಗಾಂಡ ಮಾಡಿರುವ ಪ್ರಯತ್ನಕ್ಕೆ ಟರ್ಕಿ ಋಣಿಯಾಗಿರುತ್ತದೆ. ಉಗಾಂಡಕ್ಕೆ 1 ಬಿಲಿಯನ್ ಡಾಲರ್ ಕೊಡಬೇಕು ಎಂದು ಟರ್ಕಿಯನ್ನು ಕೈನೇರುಗಬ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಹಾರ್ಮುಜ್ ಜಲಸಂಧಿಗೆ ಅಮೆರಿಕದಿಂದಲೂ ತಡೆ; ಸಂಧಾನಕ್ಕಾಗಿ ರಷ್ಯಾ ಕೂಡ ಸಿದ್ಧ
‘ಟರ್ಕಿಗೆ ಇದು ಸಿಂಪಲ್ ಡೀಲ್. ನೀವು ನಮಗೆ ಹಣ ಕೊಡಿ. ಇಲ್ಲದಿದ್ದರೆ ಅವರ ರಾಯಭಾರ ಕಚೇರಿಯನ್ನು ಮುಚ್ಚುತ್ತೇನೆ. ಅವರು ಬೇಕಾದಲ್ಲಿ ಟರ್ಕಿಯಲ್ಲಿರುವ ನಮ್ಮ ರಾಯಭಾರ ಕಚೇರಿಯನ್ನು ಮುಚ್ಚಲಿ, ಪರವಾಗಿಲ್ಲ’ ಎಂದು ಅವರು ಎಕ್ಸ್‌ನಲ್ಲಿ ಹಾಕಿರುವ ಪೋಸ್ಟ್‌ನಲ್ಲಿ. ಮುಹೂಝಿ ಕೈನೇರುಗಬ ಅವರು ಉಗಾಂಡದ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿದ್ದರು. ಉಗಾಂಡ ಅಧ್ಯಕ್ಷ ಯೋವೇರಿ ಮುಸೆವೇನಿ ಅವರ ಮಗನೂ ಆಗಿರುವ ಅವರು ಉಗಾಂಡದ ಭವಿಷ್ಯದ ಅಧ್ಯಕ್ಷರೂ ಗುರುತಾಗಿದ್ದಾರೆ.
ಈ ವ್ಯಕ್ತಿ, ಮುಹೂಜಿ ಕೈನೆರುಬಾಗಾ ಉಗಾಂಡಾದ ಮುಖ್ಯಸ್ಥ
ಸೇನೆ, ಸರ್ವಾಧಿಕಾರಿ ಮುಸೆವೆನಿಯ ಮಗ ದೇಶದ ಸಂಭಾವ್ಯ ಭವಿಷ್ಯದ ನಾಯಕ
ಇಲ್ಲಿ, ಅವನು ತುರ್ಕಿಯೆಗೆ ಬೆದರಿಕೆ ಹಾಕುತ್ತಿದ್ದಾನೆ
1 ಬಿಲಿಯನ್ $ ಮತ್ತು ಅತ್ಯಂತ ಸುಂದರವಾದ ಟರ್ಕಿಶ್ ಮಹಿಳೆಯನ್ನು ಹೆಂಡತಿಯಾಗಿ ಕೇಳುವುದು ಅಥವಾ ಅವನು ರಾಜತಾಂತ್ರಿಕ ಸಂಬಂಧಗಳನ್ನು ನಿಲ್ಲಿಸುತ್ತಾನೆ. pic.twitter.com/xPORjQTVHm
— ಕ್ಲೆಮೆಂಟ್ ಮೊಲಿನ್ (@clement_molin) ಏಪ್ರಿಲ್ 11, 2026
ಟರ್ಕಿಯ ಸುಂದರ ಮಹಿಳೆಯನ್ನು ವರಿಸುತ್ತೇನೆ ಎಂಬ ಮುಹೂಝಿ
ಟರ್ಕಿ ದೇಶದ ಅತ್ಯಂತ ಸುಂದರ ಮಹಿಳೆಯನ್ನು ತನಗೆ ಒಪ್ಪಿಸಬೇಕು. ತಾನು ಆಕೆಯನ್ನು ಮದುವೆಯಾಗುತ್ತೇನೆ ಎಂದೂ ಉಗಾಂಡದ ಮಿಲಿಟರಿ ಮುಖ್ಯಸ್ಥ ಕಾಣಿಸಿಕೊಂಡಿದ್ದಾರೆ. ಇದೇ ವ್ಯಕ್ತಿ ಹಿಂದೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನು ಮದುವೆಯಾಗಿದ್ದಾರೆ ಎಂದು ಹೇಳಿದ್ದರು.
ಇದನ್ನೂ ಓದಿ: ಪಾಕಿಸ್ತಾನದ ಮಧ್ಯಸ್ಥಿಕೆ ಇಲ್ಲದೇ ಇದ್ದರೆ ಇಸ್ರೇಲ್‌ಗೆ ತಕ್ಕ ಶಾಸ್ತಿಯಾಗುತ್ತಿದೆ: ಟರ್ಕಿ ಅಧ್ಯಕ್ಷ ಎರ್ಡೋಗನ್ ಗುಡುಗು
ಇಸ್ರೇಲ್ಗೆ ಬೆಂಬಲ ಕೊಡುತ್ತೇನೆಂದ ಮುಹೂಝಿ
ಇರಾನ್ ಜೊತೆ ಯುದ್ಧದಲ್ಲಿರುವ ಇಸ್ರೇಲ್ಗೆ ನೆರವು ಕೊಡಲು ಒಂದು ಲಕ್ಷ ಸೈನಿಕರನ್ನು ಉಗಾಂಡದಿಂದ ಕಳುಹಿಸಿಕೊಡುವುದಾಗಿ ಮುಹೂಜಿ ಕೈನೆರುಗಬ ಹೇಳಿದ್ದಾರೆ. ನಮ್ಮ ದೇವರಾದ ಯೇಸು ಕ್ರಿಸ್ತನ ಪವಿತ್ರ ಜಾಗವನ್ನು ರಕ್ಷಿಸಲು ನನ್ನನ್ನು ರಕ್ಷಿಸಲು ಉಗಾಂಡ ಸೈನಿಕರು ಇಸ್ರೇಲ್‌ಗೆ ಸಿದ್ಧ ತೆರಳುತ್ತಾರೆ.
ಉಗಾಂಡದ ಮೇಲೆ ಟರ್ಕಿ ಅನ್ಯಾಯ ಎಸಗುತ್ತಿದೆ ಎಂದು ಆರೋಪಿಸಿರುವ ಮುಹೂಝಿ, ‘ನಿಮ್ಮ ಬೆನ್ನಿಗೆ ಸದಾ ಚೂರಿ ಹಾಕುತ್ತಲೇ ಇರುವ ಸ್ನೇಹಿತ ಯಾವನಿಗೆ ಬೇಕು’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೆಚ್ಚಿನ ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಸೇನೆ, ಸರ್ವಾಧಿಕಾರಿ ಮುಸೆವೆನಿಯ ಮಗ ದೇಶದ ಸಂಭಾವ್ಯ ಭವಿಷ್ಯದ ನಾಯಕ
1 ಬಿಲಿಯನ್ $ ಮತ್ತು ಅತ್ಯಂತ ಸುಂದರವಾದ ಟರ್ಕಿಶ್ ಮಹಿಳೆಯನ್ನು ಹೆಂಡತಿಯಾಗಿ ಕೇಳುವುದು ಅಥವಾ ಅವನು ರಾಜತಾಂತ್ರಿಕ ಸಂಬಂಧಗಳನ್ನು ನಿಲ್ಲಿಸುತ್ತಾನೆ.