
‘ಕರ್ಣ’ ಧಾರಾವಾಹಿಯಲ್ಲಿ (ಕರ್ಣ ಧಾರಾವಾಹಿ) ಸಾಕಷ್ಟು ತಿರುವುಗಳು ಎದುರಾಗಿವೆ. ಈ ಧಾರಾವಾಹಿಗೆ ಹೊಸ ಪಾತ್ರಧಾರಿಗಳು ಬಂದಿದ್ದು ಕಡಿಮೆ. ಈಗ ಧಾರಾವಾಹಿಗೆ ಹೊಸ ಪಾತ್ರಧಾರಿಯ ಎಂಟ್ರಿ ಆಗಿದೆ. ಅದುವೇ ಗಗನ್ ಚಿನ್ನಪ್ಪ. ಹೌದು. ಗಗನ್ ಅವರು ‘ಸೀತಾ ರಾಮ’ ಧಾರಾವಾಹಿಯಲ್ಲಿ ನಟಿಸಿದ್ದರು. ಈಗ ಈ ಧಾರಾವಾಹಿಯಲ್ಲಿ ನಿಧಿಯನ್ನು ಮದುವೆಯಾಗಲು ಗಗನ್ ಆಗಮನ ಆಗಿದೆ. ಅವರು ಪರ್ಮನೆಂಟ್ ಆಗಿ ಧಾರಾವಾಹಿಯಲ್ಲಿ ಇರೋದಿಲ್ಲ. ಅವರದ್ದು ಅತಿಥಿ ಪಾತ್ರ.
ಕರ್ಣ ತನ್ನ ತಂದೆ ರಮೇಶ್ ಮಾಡಿದ ಕುತಂತ್ರಕ್ಕೆ ಬಲಿಯಾಗಿದ್ದಾನೆ. ಕರ್ಣ ತನಗೆ ಇಷ್ಟ ಇಲ್ಲದಿದ್ದರೂ ನಿತ್ಯಾಳ ಮದುವೆ ಆಗುವ ಪರಿಸ್ಥಿತಿ ಬಂತು. ನಂತರ ಆತ ಮದುವೆ ಆದ ಕೂಡ. ಆ ಬಳಿಕವೂ ರಮೇಶ್ ತೊಂದರೆ ಕೊಡೋದನ್ನು ಮುಂದುವರಿಸಿದ್ದಾರೆ. ಕರ್ಣನು ಲವ್ ಮಾಡಿದ್ದು ನಿಧಿಯನ್ನು. ಆಕೆಯನ್ನು ಮದುವೆ ಆಗುತ್ತೇನೆ ಎಂದು ಹೇಳಿದ್ದಾನೆ.
ಇದಕ್ಕೆ ಅವಕಾಶ ಕೊಡಬಾರದು ಎಂಬುದು ರಮೇಶನ ಆಲೋಚನೆ. ಈ ಕಾರಣಕ್ಕೆ ನಿಧಿಗೆ ಒಂದು ಹುಡುಗನ ಕರೆತರಬೇಕು ಎಂದು ಆಲೋಚನೆ ಮಾಡಿದ್ದಾನೆ. ಅದಕ್ಕೆ ಸರಿಯಾಗಿ ಗಗನ್ ಚಿನ್ನಪ್ಪ ಅವರನ್ನು ಕರೆತಂದಿದ್ದಾನೆ. ನಿಧಿಯನ್ನು ಮದುವೆ ಆಗುವ ಹುಡಗನಾಗಿ ಗಗನ್ ಕಾಣಿಸಿಕೊಳ್ಳಲಿದ್ದಾರೆ.
Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ
ಗಗನ್ ಚಿನ್ನಪ್ಪ ಅವರ ಪಾತ್ರ ಈ ವಾರ ಪೂರ್ತಿ ಇರುವ ಸಾಧ್ಯತೆ ಇದೆ. ಅವರು ಬರೋದು ಹುಡುಗಿಯನ್ನು ನೋಡೋದು ಇದೆಲ್ಲವನ್ನೂ ಮಾಡಲು ಒಂದು ವಾರದ ಎಪಿಸೋಡ್ಗಳು ಬೇಕಾಗಬಹುದು. ಅಲ್ಲಿಯವರೆಗೆ ಗಗನ್ ಚಿನ್ನಪ್ಪ ಅವರು ವೀಕ್ಷಕರಿಗೆ ಮನರಂಜನೆ ನೀಡಲಿದ್ದಾರೆ. ಅದಕ್ಕಾಗಿ ಅಭಿಮಾನಿಗಳು ಕಾದಿದ್ದಾರೆ.
ಇದನ್ನೂ ಓದಿ: ‘ಕರ್ಣ’ ಧಾರಾವಾಹಿಯಲ್ಲಿ ಮಹಾ ತಿರುವು; ಕರ್ಣನ ತಂದೆ ರಿವೀಲ್
ರಮೇಶ್ ವಿರುದ್ಧ ಕರ್ಣ ತಿರುಗಿ ಬಿದ್ದಿದ್ದಾನೆ. ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾನೆ. ಇನ್ನು, ನಿಧಿ ಕೂಡ ರಮೇಶ್ ಕೆಟ್ಟ ಬುದ್ದಿಯನ್ನು ಅರಿತುಕೊಂಡಿದ್ದಾಳೆ. ಆಕೆ ಕೂಡ ಅವನ ವಿರುದ್ಧ ತಿರುಗಿ ಬೀಳುವ ಕೆಲಸವನ್ನು ಮಾಡಿದ್ದಾಳೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.