‘ಯಾವ ಸಮಯ್?’; ಟೀಕಿಸಿದ ಸಮಯ್ ರೈನಾಗೆ ರಣವೀರ್ ಅಲಹಾಬಾದಿಯಾ ಖಡಕ್ ಉತ್ತರ

‘ಯಾವ ಸಮಯ್?’; ಟೀಕಿಸಿದ ಸಮಯ್ ರೈನಾಗೆ ರಣವೀರ್ ಅಲಹಾಬಾದಿಯಾ ಖಡಕ್ ಉತ್ತರ


'ಯಾವ ಸಮಯ?'; ಟೀಕಿಸಿದ ಸಮಯ್ ರೈನಾಗೆ ರಣವೀರ್ ಅಲಹಾಬಾದಿಯಾ ಖಡಕ್ ಉತ್ತರ

ರಣವೀರ್ ಅಲಹಾಬಾದಿಯಾ ಅವರು ಸಮಯ್ ರೈನಾ ಅವರ ‘ಇಂಡಿಯಾಸ್ ಗಾಟ್ ಲೇಟೆಂಟ್’ ಶೋಗೆ ಬಂದು ವಿವಾದ ಮಾಡಿಕೊಂಡರು. ಆ ಬಳಿಕ ಸಮಯ್ ಹಾಗೂ ರಣವೀರ್ ಮುಖಾಮುಖಿ ಆಗಿಲ್ಲ. ಇತ್ತೀಚೆಗೆ ಸಮಯ್ ರೈನಾ ಅವರ ‘ಸ್ಟಿಲ್ ಅಲೈವ್’ ಶೋನಲ್ಲಿ ಅವರು ರಣವೀರ್ ಬಗ್ಗೆ ಸಾಕಷ್ಟು ಟೀಕೆಗಳನ್ನು ಮಾಡಿದ್ದರು. ಇದಾದ ಬಳಿಕ ಸಮಯ ಯಾರು ಎಂಬ ಪ್ರಶ್ನೆಯನ್ನು ರಣವೀರ್ ಅಲಹಾಬಾದಿಯಾ ಕೇಳಿದ್ದಾರೆ. ಇದು ಚರ್ಚೆಗೆ ಕಾರಣವಾಗಿದೆ.

ರಣವೀರ್ ಅವರು ಪಾಡ್ ಕಾಸ್ಟ್ ಮೂಲಕ ಗಮನ ಸೆಳೆದವರು. ಅವರು ಅಧ್ಯಾತ್ಮದ ಬಗ್ಗೆ ಹೆಚ್ಚು ಚರ್ಚೆ ಮಾಡುತ್ತಾರೆ. ಸೆಲೆಬ್ರಿಟಿಗಳ ಬಳಿ ಅವರು, ‘ಸಾವಿನ ಬಗ್ಗೆ ಏನು ಯೋಚಿಸುತ್ತೀರಿ’ ಎಂಬಿತ್ಯಾದಿ ಪ್ರಶ್ನೆಯನ್ನು ನೇರವಾಗಿ ಕೇಳುತ್ತಾರೆ. ಆದರೆ, ‘ಇಂಡಿಯಾಸ್ ಗಾಟ್ ಲೇಟೆಂಟ್ ಶೋ’ಗೆ ಬಂದು ಅವರು ಮಾಡಿಕೊಂಡ ವಿವಾದ ಚರ್ಚೆ ಹುಟ್ಟುಹಾಕಿತ್ತು. ಈ ವಿವಾದದ ಬಗ್ಗೆ ಸಮಯ ಇತ್ತೀಚೆಗೆ ಮಾತನಾಡಿದ್ದರು. ರಣವೀರ್ ಶೋನಲ್ಲಿ ಸಾಕಷ್ಟು ಕೆಟ್ಟ ಪದಗಳನ್ನು ಆಡಿದ್ದರು ಎಂದು ಸಮಯ್ ಹೇಳಿದ್ದರು. ಈ ವಿಷಯ ರಣವೀರ್‌ಗೆ ಬೇಸರ ಮೂಡಿಸಿದೆ ಎಂಬ ಪ್ರಶ್ನೆ ಮೂಡಿದೆ.

 

Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ

 

ಶೈಲೇಶ್ ಪಾಂಡೆ (@shaileshpandeyy) ಹಂಚಿಕೊಂಡ ಪೋಸ್ಟ್

ಶೈಲೇಶ್ ಪಾಂಡೆ ಹೆಸರಿನ ಪಾಪರಾಜಿ ಜೊತೆ ರಣವೀರ್ ಪೋಸ್ ಕೊಟ್ಟಿದ್ದಾರೆ. ‘ಈಗ ನಮ್ಮಿಬ್ಬರ ಸಮಯ’ ಎಂದರು ಶೈಲೇಶ್. ಇದಕ್ಕೆ ಉತ್ತರಿಸಿದ ರಣವೀರ್, ‘ಸಮಯ್? ಯಾವ ಸಮಯ? ಎಂದು ಕೇಳಿದರು. ಆಗ ಶೈಲೇಶ್, ‘ಸಮಯ ಎಂದರೆ ಟೈಮ್’ ಎಂದರು. ಆಗ ರಣವೀರ್, ‘ಓಹ್ ಸಮಯ. ಈಗ ಅರ್ಥವಾಯಿತು’ ಎಂದರು. ಈ ವಿಡಿಯೋ ಚರ್ಚೆಗೆ ಕಾರಣ ಆಗಿದೆ.

ಇದನ್ನೂ ಓದಿ: ‘ಇಂಡಿಯಾ ಗಾಟ್ ಲೇಟೆಂಟ್’: ಮತ್ತೆ ಬರಲಿದ್ದಾರೆ ಸಮಯ್ ರೈನಾ

ಸಮಯ್ ರೈನಾ ಹಂಚಿಕೊಂಡ ‘ಸ್ಟಿಲ್ ಅಲೈವ್’ ಕೋಟಿ ಕೋಟಿ ವೀಕ್ಷಣೆ ಕಂಡಿದೆ. ಗ್ಯಾಟ್ ಲೇಟೆಂಟ್ ನ ಕೊನೆಯ ಎಪಿಡ್ ಅಲ್ಲಿ ಏನಾಗಿದೆಯೋ ಅದರ ಸಂಪೂರ್ಣ ವಿವರವನ್ನು ಸಮಯ ತೋರಿಸಿದೆ. ‘ಸದಾ ಕೆಟ್ಟದ್ದನ್ನೇ ಮಾತನಾಡುವ ವ್ಯಕ್ತಿ ಕೆಟ್ಟದನ್ನೇ ಮಾತನಾಡಿದರೆ ಯಾರೂ ಏನು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ಒಳ್ಳೆಯದನ್ನು ಮಾತನಾಡುವ ವ್ಯಕ್ತಿ ಕೆಟ್ಟದ್ದನ್ನು ಮಾತನಾಡಿದರೆ ಅದನ್ನು ಯಾರೂ ಸಹಿಸಲಿಲ್ಲ’ ಎಂದಿದ್ದರು ಸಮಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *