Actress Vaishnavi Gowda Photo Viral: ಸೀತಾರಾಮ ಧಾರಾವಾಹಿ ನಟಿ ವೈಷ್ಣವಿ ಗೌಡ ಅವರು ಅನುಕೂಲ್ ಮಿಶ್ರಾರನ್ನು ಮದುವೆಯಾಗಿ ಒಂದು ವರ್ಷ ಆಯ್ತು. ಅವರು ತೆರೆ ಮೇಲೆ ಕಾಣಿಸಿಕೊಳ್ಳದೆ ಒಂದಿಷ್ಟು ಸಮಯ ಕೂಡ ಆಯ್ತು. ಹೀಗಿರುವಾಗ ಪೋಸ್ಟ್‌ವೊಂದು ವೈರಲ್ ಆಗ್ತಿದೆ.

ವೈಷ್ಣವಿ ಗೌಡ ಅವರು ಗರ್ಭಿಣಿ ಎಂದು ಕಾಣಿಸುವ ಪೋಸ್ಟ್‌ವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ವೈಷ್ಣವಿ ಏನಾದರೂ ಸಿಹಿ ಸುದ್ದಿ ಕೊಡ್ತಿದ್ದಾರಾ ಎಂಬ ಸಂಶಯ ಬಂದಿತ್ತು.

ಅಂದಹಾಗೆ ಉದಯ ಟಿವಿಯ ಧಾರಾವಾಹಿಯೊಂದರಲ್ಲಿ ವೈಷ್ಣವಿ ಗೌಡ ಅವರು ನಟಿಸುತ್ತಿದ್ದಾರೆ, ಈ ಸೀರಿಯಲ್‌ನಲ್ಲಿ ಕೃತಿಕಾ ರವೀಂದ್ರ ಕೂಡ ಇದ್ದಾರೆ ಎನ್ನಲಾಗಿತ್ತು. ಈ ಸೀರಿಯಲ್ ಪ್ರೋಮೋ ಆಗಲೀ, ಅಪ್‌ಡೇಟ್ಸ್ ಆಗಲೀ ಏನೂ ಬಂದಿಲ್ಲ.

ಇನ್ನು ವೈಷ್ಣವಿ ಗೌಡ ಅವರು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ ಎನ್ನುವ ಗಾಸಿಪ್ ಮಧ್ಯೆ ಪ್ರಗ್ನೆಂಟ್ ಎಂಬ ಪೋಸ್ಟ್ ಕೂಡ ವೈರಲ್ ಆಗ್ತಿದೆ. ಈ ಬಗ್ಗೆ ವೈಷ್ಣವಿ ಗೌಡ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಗ್ನೆಂಟ್ ಎಂದು ನಂಬುವ ಹಾಗೆ ಎಡಿಟ್ ಮಾಡಲಾದ ಫೋಟೋ ವಿರುದ್ಧ ಸಿಡಿದೆದ್ದಿದ್ದಾರೆ. ಸದ್ಯ ನಾನು ಧಾರಾವಾಹಿಯಲ್ಲಿ ಬ್ಯುಸಿ ಇದ್ದೇನೆ, ಆದಷ್ಟು ಬೇಗೆ ತೆರೆ ಮೇಲೆ ಕಾಣಿಸಿಕೊಳ್ಳುವೆ ಎಂದು ಅವರು ಹೇಳಿದ್ದಾರೆ.

Source link
ವೈಷ್ಣವಿ ಗೌಡ ಪ್ರಗ್ನೆನ್ಸಿ ಫೋಟೋ ವೈರಲ್: ಸಿಡಿದೆದ್ದ ಸೀತಾರಾಮ ಧಾರಾವಾಹಿ ನಟಿ, ಅಸಲಿಗೆ ಸತ್ಯ ಏನು?