Headlines

ಮದುವೆ ಸಂಭ್ರಮದಲ್ಲಿದ್ದ ಮನೆಗೆ ಪ್ರಿಯಕರನೇ ಕಂಟಕ: ಖಾಸಗಿ ಫೋಟೋ ಲೀಕ್ ಬೆನ್ನಲ್ಲೇ ಬಾವಿಗೆ ಹಾರಿ ಯುವತಿ ಸಾವು!

ಮದುವೆ ಸಂಭ್ರಮದಲ್ಲಿದ್ದ ಮನೆಗೆ ಪ್ರಿಯಕರನೇ ಕಂಟಕ: ಖಾಸಗಿ ಫೋಟೋ ಲೀಕ್ ಬೆನ್ನಲ್ಲೇ ಬಾವಿಗೆ ಹಾರಿ ಯುವತಿ ಸಾವು!

ಮದುವೆ ಸಂಭ್ರಮದಲ್ಲಿದ್ದ ಮನೆಗೆ ಪ್ರಿಯಕರನೇ ಕಂಟಕ: ಖಾಸಗಿ ಫೋಟೋ ಲೀಕ್ ಬೆನ್ನಲ್ಲೇ ಬಾವಿಗೆ ಹಾರಿ ಯುವತಿ ಸಾವು!
ವಿಜಯಪುರ ಜಿಲ್ಲೆಯ ಯುವತಿಯೊಬ್ಬಳ ಮದುವೆ ನಿಶ್ಚಯವಾಗಿತ್ತು, ಆದರೆ ಆಕೆಯ ಪ್ರಿಯಕರ ಖಾಸಗಿ ಫೋಟೋಗಳನ್ನು ವರನ ಮನೆಯವರಿಗೆ ಕಳುಹಿಸಿದ್ದರಿಂದ ಮದುವೆ ಮುರಿದುಬಿದ್ದಿದೆ. ಈ ಘಟನೆಯಿಂದ ತೀವ್ರವಾಗಿ ಮನನೊಂದ ಯುವತಿ, ಸಮಾಜದಲ್ಲಿ ಆದ ಅವಮಾನವನ್ನು ಸಹಿಸಲಾಗದೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ನಿಶ್ಚಯವಾಗಿದ್ದ ಮದುವೆ ಪ್ರಿಯಕರನ ಯಡವಟ್ಟಿನಿಂದಾಗಿ ಮುರಿದುಬಿದ್ದ ಹಿನ್ನೆಲೆಯಲ್ಲಿ, ಮನನೊಂದ ಯುವತಿಯೊಬ್ಬಳು ಬಾವಿಗೆ ಹಾರಿ ಆ*ತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಂದಾಳ ಗ್ರಾಮದಲ್ಲಿ ನಡೆದಿದೆ.

ಬಂದಾಳ ಗ್ರಾಮದ ಜಯಶ್ರೀ ಬಿರಾದಾರ್ (22) ಆ*ತ್ಮಹ*ತ್ಯೆ ಮಾಡಿಕೊಂಡ ಯುವತಿ. ಇದೇ ಏಪ್ರಿಲ್ 27 ರಂದು ಜಯಶ್ರೀಗೆ ವಿವಾಹ ನಿಶ್ಚಯವಾಗಿತ್ತು. ಮದುವೆಯ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಶ್ರೀಶೈಲ್ ಬಡಾನೂರ್ ಎಂಬಾತ ಕಂಟಕನಾಗಿದ್ದಾನೆ.

ಜಯಶ್ರೀ ಮತ್ತು ತಾನು ಜೊತೆಗಿದ್ದ ಕೆಲವು ಖಾಸಗಿ ಫೋಟೋಗಳನ್ನು ಶ್ರೀಶೈಲ್ ಮದುವೆ ನಿಶ್ಚಯವಾಗಿದ್ದ ವರನ ಮನೆಯವರಿಗೆ ಕಳುಹಿಸಿದ್ದಾನೆ ಎನ್ನಲಾಗಿದೆ. ಯುವತಿ ಬೇರೊಬ್ಬನ ಜೊತೆಗಿರುವ ಫೋಟೋಗಳನ್ನು ಕಂಡ ವರನ ಕಡೆಯವರು ತಕ್ಷಣವೇ ಮದುವೆಯನ್ನು ರದ್ದುಗೊಳಿಸಿದ್ದಾರೆ.

ಇದರಿಂದ ತನ್ನ ಪ್ರೇಮ ಪ್ರಕರಣ ಬಹಿರಂಗವಾಗಿ, ಸಮಾಜದಲ್ಲಿ ಮಾನ ಮರ್ಯಾದೆ ಹೋಯಿತಲ್ಲಾ ಎಂಬ ತೀವ್ರ ನೋವಿನಿಂದ ಜಯಶ್ರೀ ಗ್ರಾಮದ ಮದಿನಾ ಮಸೂತಿ ಪಕ್ಕದ ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾಳೆ.

ಮಗಳ ಸಾವಿನಿಂದ ಕಂಗಾಲಾಗಿರುವ ತಾಯಿ ಸಾವಿತ್ರಿ ಅವರು, "ನನ್ನ ಮಗಳ ಬಲಿ ಪಡೆದ ಶ್ರೀಶೈಲ್‌ನನ್ನು ಕೂಡಲೇ ಬಂಧಿಸಬೇಕು. ಆತನ ಕಿಡಿಗೇಡಿತನವೇ ಮಗಳ ಆತ್ಮಹತ್ಯೆಗೆ ಕಾರಣ" ಎಂದು ಕಣ್ಣೀರಿಡುತ್ತಾ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಬಾವಿಯಲ್ಲಿ ಯುವತಿಯ ಶವ ಪತ್ತೆಯಾಗಿದ್ದು, ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Source link

Leave a Reply

Your email address will not be published. Required fields are marked *