Headlines

ಬಿಎಂಟಿಸಿಯ ಈ ಬಸ್ಸಿನಲ್ಲಿ ಕೇವಲ 6 ರೂ.ಗೆ ಮೆಟ್ರೋ ನಿಲ್ದಾಣಕ್ಕೆ ಹೋಗಬಹುದು!: ಎಲ್ಲಿಂದ ಎಲ್ಲಿಗೆ? ಇಲ್ಲಿದೆ ಮಾಹಿತಿ

ಬಿಎಂಟಿಸಿಯ ಈ ಬಸ್ಸಿನಲ್ಲಿ ಕೇವಲ 6 ರೂ.ಗೆ ಮೆಟ್ರೋ ನಿಲ್ದಾಣಕ್ಕೆ ಹೋಗಬಹುದು!: ಎಲ್ಲಿಂದ ಎಲ್ಲಿಗೆ? ಇಲ್ಲಿದೆ ಮಾಹಿತಿ


ಬಿಎಂಟಿಸಿಯ ಈ ಬಸ್ಸಿನಲ್ಲಿ ಕೇವಲ 6 ರೂ.ಗೆ ಮೆಟ್ರೋ ನಿಲ್ದಾಣಕ್ಕೆ ಹೋಗಬಹುದು!: ಎಲ್ಲಿಂದ ಎಲ್ಲಿಗೆ? ಇಲ್ಲಿದೆ ಮಾಹಿತಿ

ಬೆಂಗಳೂರು, ಏ.13: ಸಿಲಿಕಾನ್ ಸಿಟಿಯ ಜನರಿಗೆ ಒಂದು ಗುಡ್ ನ್ಯೂಸ್ ಕಾಡಿದೆ. ಇನ್ಮುಂದೆ ಬಿಎಂಟಿಸಿಯ ಈ ಬಸ್ಸಿನಲ್ಲಿ ಕೇವಲ 6 ರೂ, ಗೆ ಹೋಗಬಹುದು. ನಗರದ ಹರಲೂರು, ಕಸವನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳಿಗೆ ಮೆಟ್ರೋ ನಿಲ್ದಾಣ ತಲುಪಲು ಇದ್ದ ದೊಡ್ಡ ಸಮಸ್ಯೆಗೆ ಈಗ ಪರಿಹಾರ ಸಿಕ್ಕಿದೆ. ಬಿಎಂಟಿಸಿಯು ‘ಹಳದಿ ಮಾರ್ಗ’ದ (ಹಳದಿ ರೇಖೆ) ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸಲು MF-22E ಮತ್ತು MF-22EA ಎಂಬ ಹೊಸ ಫೀಡರ್ ಬಸ್ ಸೇವೆಗಳನ್ನು ಆರಂಭಿಸಿದೆ.

ಈ ಫೀಡರ್ ಬಸ್‌ಗಳು ಹೊಸ ರೋಡ್ ಮೆಟ್ರೋ ನಿಲ್ದಾಣದಿಂದ ಸಂಚಾರ ಆರಂಭಿಸಿ ಅದೇ ನಿಲ್ದಾಣಕ್ಕೆ ಬಂದು ತಲುಪಲಿವೆ. ಈ ಮಾರ್ಗವು ಚೂಡಸಂದ್ರ ಸರ್ಕಲ್, ಸಿಲ್ವರ್ ಕೌಂಟಿ ರಸ್ತೆ, ಹರಲೂರು ಗ್ರಾಮ, ಸರ್ಜಾಪುರ ರಸ್ತೆ, ಇಬ್ಲೂರು ಜಂಕ್ಷನ್ ಮತ್ತು ಎಚ್‌ಎಸ್‌ಆರ್ ಲೇಔಟ್‌ನ 27ನೇ ಮೇನ್ ರಸ್ತೆಯನ್ನು ಒಳಗೊಂಡಿದೆ. ವಾಪಸ್ ಬರುವಾಗ ಸೋಮಸುಂದರಪಾಳ್ಯ, ಕೂಡ್ಲು ಮತ್ತು ಕೂಡ್ಲು ಮೆಟ್ರೋ ನಿಲ್ದಾಣದ ಮೂಲಕ ಹಾದು ಹೋಗಲಿವೆ.

ಈ ಬಸ್ಸುಗಳ ಟಿಕೆಟ್ ದರವು ಕನಿಷ್ಠ 6 ರೂಪಾಯಿಯಿಂದ ಗರಿಷ್ಠ 25 ರೂಪಾಯಿವರೆಗೆ ಇರುತ್ತದೆ. ಸುಮಾರು 6,000 ರಿಂದ 10,000 ಅಪಾರ್ಟ್‌ಮೆಂಟ್‌ಗಳಿರುವ ಈ ದಟ್ಟಣೆಯ ಪ್ರದೇಶದಲ್ಲಿ ಕಿರಿದಾದ ರಸ್ತೆಗಳಿಗೆ ಈ ಹಿಂದೆ ಸಾರ್ವಜನಿಕ ಸಾರಿಗೆ ಕೊರತೆ ಇತ್ತು. ಈಗ ಫೀಡರ್ ಬಸ್ ನಿಂದಾಗಿ ನಿವಾಸಿಗಳು ಸ್ವಂತ ವಾಹನಗಳನ್ನು ಅವಲಂಬಿಸುವುದು ತಪ್ಪಲಿದೆ.

ಇದನ್ನೂ ಓದಿ ಎರಡು ಬೆಕ್ಕುಗಳ ಮಿಲನ: ನಾಲ್ಕು ಮರಿ ಜನನ, ಕಿತ್ತಾಟ ಜೋರಾದ ಬೆನ್ನಲ್ಲೇ ಪೊಲೀಸ್ ಎಂಟ್ರಿ!

ಸದ್ಯಕ್ಕೆ ಪೀಕ್ ಅವರಲ್ಲಿ 35 ರಿಂದ 40 ನಿಮಿಷಗಳ ಅಂತರದಲ್ಲಿ ಮೂರು ಬಸ್ಸುಗಳು ಸಂಚರಿಸುತ್ತಿವೆ. ಆದರೆ, ‘ನಮ್ಮ ಬಿಎಂಟಿಸಿ’ ಆಯಪ್‌ನಲ್ಲಿ ಬಸ್ ಟ್ರ್ಯಾಕಿಂಗ್ ಸರಿಯಾಗಿ ಆಗುತ್ತಿಲ್ಲ ಮತ್ತು ಬಸ್ಸುಗಳ ಸಂಖ್ಯೆ ಹೆಚ್ಚಿಸಬೇಕು ಎಂಬ ಬೇಡಿಕೆ ಕೇಳಿಬಂದಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾದಂತೆ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸುವುದಾಗಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *