
ನಟ, ಸ್ಟ್ಯಾಂಡಪ್ ಕಾಮಿಡಿಯನ್ ದಾನಿಶ್ ಸೇಠ್ ಅವರ ಪರಿಚಯ ಅನೇಕರಿಗೆ ಇದೆ. ‘ಹಂಬಲ್ ಪೊಲಿಟೀಶಿಯನ್ ನೋಗರಾಜ್’ ಚಿತ್ರ ಮಾಡಿ ಗಮನ ಸೆಳೆದರು, ನಂತರ ‘ಫ್ರೆಂಚ್ ಬಿರಿಯಾನಿ’ ರೀತಿಯ ಚಿತ್ರಗಳನ್ನು ಮಾಡಿದರು. ಇದರ ಜೊತೆ ಅವರು ‘ಮಿಸ್ಟರ್ ನ್ಯಾಗ್ಸ್’ ಆಗಿ ಎಲ್ಲರಿಗೂ ಇಷ್ಟ ಆಗುತ್ತಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆರ್ಸಿಬಿ ಇನ್ ಸೈಡರ್ ಆಗಿ ಕಾಂಟೆಂಟ್ ಅನ್ನು ಕ್ರಿಯೇಟ್ ಮಾಡುತ್ತಾರೆ. ಮಿಸ್ಟರ್ ನ್ಯಾಗ್ಸ್ ಎಲ್ಲರನ್ನೂ ರಂಜಿಸುತ್ತಿದ್ದಾರೆ. ಅವರು ಟಿವಿ9 ಕನ್ನಡ ಡಿಜಿಟಲ್ ಜೊತೆಗೆ ಮಾತನಾಡಿದ್ದಾರೆ. ಅವರ ಸಂದರ್ಶನದ ವಿವರ ಇಲ್ಲಿದೆ.
ಈ ಪ್ರಕ್ರಿಯೆಯ ಎಂಜಾಯ್ ಮಾಡ್ತೀನಿ..
ದಾನಿಶ್ ಅವರು ಪ್ರತಿ ಪಂದ್ಯದ ಬಳಿಕ ಒಂದು ವಿಶೇಷ ವಿಡಿಯೋ ಮಾಡುತ್ತಾರೆ. ಇದಕ್ಕೆ ಸಿದ್ಧತೆ ಹೇಗಿದೆ ಎಂದು ಅವರು ವಿವರಿಸಿದ್ದಾರೆ. ‘ನಾನು ಇದನ್ನು ಮಾಡಲು ಆರಂಭಿಸಿ 13 ವರ್ಷಗಳೇ ಆಗಿವೆ. ಸ್ಕ್ರಿಪ್ಟ್ ಬರೆಯೋದು ಸ್ವಲ್ಪ ಚಾಲೆಂಜ್ ಎನಿಸುತ್ತದೆ. ಜೋಕ್ ಸರಿಯಾಗಿ ಜನರಿಗೆ ರೀಚ್ ಆಗಬೇಕು. ಅಂದಾಗ ಮಾತ್ರ ನಮ್ಮ ಪ್ರಯತ್ನ ಯಶಸ್ವಿಯಾಗಿದೆ. ನಾನು ವಿಗ್ ಮತ್ತು ಮೀಸೆ ಹಾಕಿದಾಗ ನ್ಯಾಗ್ಸ್ ಆಗಿ ಬದಲಾಗುತ್ತೇನೆ. ನನ್ನದೇ ಟೀಂ ಇದೆ. ಮ್ಯಾಚ್ ನೋಡಿ ಪಾಯಿಂಟ್ಸ್ ಮಾಡ್ಕೋತೀವಿ. ನಾನು ಈ ದೃಷ್ಟಿ ತುಂಬಾನೇ ಎಂಜಾಯ್ ಮಾಡ್ತೀನಿ’ ಎಂದು ದಾನಿಶ್.
ಮನರಂಜನೆ ಕೊಡೋದೊಂದೇ ಉದ್ದೇಶ..
ಆರ್ಸಿಬಿ ಗೆಲ್ಲಲಿ, ಸೋಲಲಿ ನ್ಯಾಗ್ಸ್ ಕಡೆಯಿಂದ ಬರುವ ಕಾಂಟೆಂಟ್ ಸಖತ್ ಫನ್ ಆಗಿರುತ್ತದೆ. ಇನ್ನು, ಆರ್ಸಿಬಿ ಗೆದ್ದು ಬೇರೆ ತಂಡ ಸೋತಾಗಲೂ ದಾನಿಶ್ ಅವರು ಯಾರಿಗೂ ಬೇಸರ ಆಗದಂತೆ ಹಲವು ವಿಡಿಯೋಗಳನ್ನು ಮಾಡಿದ್ದಾರೆ. ಈ ಪ್ರಕ್ರಿಯೆಯ ಬಗ್ಗೆ ಅವರು ವಿವರಣೆ ನೀಡಿದ್ದಾರೆ. ‘ನಾನು ಕಾಮಿಡಿಯನ್ ಆಗಿ ಎಲ್ಲವನ್ನೂ ಭಿನ್ನವಾಗಿ ನೋಡುತ್ತೇನೆ. ಹೀಗಾಗಿ, ಹೊಸ ಆಯಂಗಲ್ ಸಿಗಬಹುದು. ಇನ್ನು ಪ್ರತಿ ಕಂಂಟೆಂಟ್ ಬರೆಯುವಾಗ ಬೇರೆ ತಂಡಕ್ಕೆ ನೋವಾಗದಂತೆ ಅದನ್ನು ಬರೆಯುತ್ತೇವೆ. ಬೇರೆ ತಂಡದವರು ಏನಾದರೂ ಸಾಧನೆ ಮಾಡಿದರೆ ಅದನ್ನು ಹೊಗಳುವ ಕೆಲಸವನ್ನು ನಾವು ಮಾಡುತ್ತೇವೆ. ವೈಯಕ್ತಿಕ ಟೀಕೆಗಳನ್ನು ಎಂದಿಗೂ ಮಾಡಲ್ಲ’ ಎನ್ನುತ್ತಾರೆ ದಾನಿಶ್. ವಿಡಿಯೋ ಪ್ರತಿ ರೆಡಿ ಆದ ಬಳಿಕ ಅದನ್ನು ನೋಡುತ್ತಾರಂತೆ. ಹೀಗಾಗಿ, ಯಾರಿಗೂ ನೋವಾಗದಂತೆ ನೋಡಿಕೊಳ್ಳುವ ಉದ್ದೇಶ ನಮ್ಮದು ಎನ್ನುತ್ತಾರೆ ಅವರು.
ನಮ್ಮದೇ ಗ್ರೇಟ್ ಎನ್ನಲ್ಲ
ಪ್ರತಿ ಐಪಿಎಲ್ ಫ್ರಾಂಚೈಸಿಗಳು ಸೋಶಿಯಲ್ ಮೀಡಿಯಾ. ಭಿನ್ನ ಕಾಂಟೆಂಟ್ಗಳನ್ನು ಸ್ಥಾಪಿಸಲಾಗಿದೆ. ಇವುಗಳಿಗೆ ಹೋಲಿಕೆ ಮಾಡಿದರೆ ಆರ್ ಸಿಬಿ ಒಂದು ಹಂತ ತಲುಪಿದೆ ಎನಿಸುತ್ತದೆ. ಆದರೆ, ಇದನ್ನು ದಾನಿಶ್ ಒಪ್ಪೋದಿಲ್ಲ. ‘ನಾವು ಫ್ಯಾನ್ ಎಂಗೇಜ್ಮೆಂಟ್ ಗೋಸ್ಕರ್ ಮಾಡೋದು. ತಂಡದ ಜೊತೆಗೆ ಹಾಗೂ ಅಭಿಮಾನಿಗಳ ನಡುವೆ ನಾವು ಸೇತುವೆ ಆಗುತ್ತೇವೆ ಅಷ್ಟೇ. ಇದು ದೊಡ್ಡ ಜವಾಬ್ದಾರಿ. ಯಾರಿಗೂ ನೋವು ಮಾಡುವ ಉದ್ದೇಶವಿಲ್ಲ. ನಾನು ಹೆಚ್ಚು ಪುಸ್ತಕಗಳನ್ನು ಓದುತ್ತೇನೆ. ಜ್ಞಾನವನ್ನು ವಿಡಿಯೋಗಳನ್ನು ಬೆರೆಸುತ್ತೇನೆ’ ಎನ್ನುತ್ತಾರೆ ದಾನಿಶ್.
ನಾನು ದಾನಿಶ್ ಆಗಲ್ಲ, ನ್ಯಾಗ್ಸ್ ಆಗಿ ಜೋಕ್ ಮಾಡ್ತೀನಿ..
‘ದಾನೀಶ್ ಆಗಿ ನಾನು ಯಾವಾಗಲೂ ಅವರ ಬಳಿ ಈ ರೀತಿ ಜೋಕ್ ಮಾಡಿಲ್ಲ. ನಾನು ಜೋಕ್ ಮಾಡಿದ್ದು ನ್ಯಾಗ್ಸ್ ಆಗಿ. ಬಾಂಡ್ ಬೆಳೆದು 13 ವರ್ಷಗಳು ಕಳೆದಿವೆ. ನಾನು ಜೋಕ್ ಮಾಡಿದ್ರೆ ಅವರಿಗೂ ಇಷ್ಟ ಆಗುತ್ತೆ, ಜನರಿಗೂ ಇಷ್ಟ ಆಗುತ್ತೆ. ಅವರು ಬ್ಯಾಟ್ ಹಿಡಿದು ಮಾತ್ರ ಅಲ್ಲ, ಜೀವನ ಎಲ್ಲಾ ಪ್ರದರ್ಶನ. ನಾನು ಕಾಮಿಡಿ ಮಾಡಿದಾಗ ನನ್ನ ಬಳಿ ಯಾಕೆ ಹೀಗೆ ಮಾತಾಡ್ತೀರಿ ಎಂದು ಕೇಳುವ ಅವಕಾಶ ಅವರಿಗೆ ಇತ್ತು. ಅವರು ಎಂದಿಗೂ ಹಾಗೆ ಮಾಡಿಲ್ಲ. ಅವರು ರಿಯಲ್ ಎನ್. ಅವರಿಂದ ಕಲಿಯೋದು ತುಂಬಾನೇ ಇದೆ’ ಎನ್ನುತ್ತಾರೆ ದಾನಿಶ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.