ಜನನಾಯಗನ್ ಬಳಿಕ, ಅದೇ ನಿರ್ಮಾಪಕರ 'KD' ಚಿತ್ರಕ್ಕೂ ಸೆನ್ಸಾರ್ ಕಿರಿಕ್; ನಿಜವಾಗಿ ಏನಾಗ್ತಿದೆ?

ಜನನಾಯಗನ್ ಬಳಿಕ, ಅದೇ ನಿರ್ಮಾಪಕರ 'KD' ಚಿತ್ರಕ್ಕೂ ಸೆನ್ಸಾರ್ ಕಿರಿಕ್; ನಿಜವಾಗಿ ಏನಾಗ್ತಿದೆ?

ಜನನಾಯಗನ್ ಬಳಿಕ, ಅದೇ ನಿರ್ಮಾಪಕರ 'KD' ಚಿತ್ರಕ್ಕೂ ಸೆನ್ಸಾರ್ ಕಿರಿಕ್; ನಿಜವಾಗಿ ಏನಾಗ್ತಿದೆ?

ಜನನಾಯಗನ್ ಮಾದರಿಯಲ್ಲೆ ಕೆಡಿ ಚಿತ್ರಕ್ಕೆ ಕಂಟಕ..?

ತಮಿಳು ಸೂಪರ್ ಸ್ಟಾರ್ ದಳಪತಿ ವಿಜಯ್ ನಟನೆಯ ‘ಜನನಾಯಗನ್’ (Jana Nayagan) ಸಿನಿಮಾ ಬಳಿಕ, KVN ನಿರ್ಮಾಣ ಸಂಸ್ಥೆಯ ಕನ್ನಡದ, 5 ಭಾಷೆಯ ‘ಕೆಡಿ’‌ ಸಿನಿಮಾ ಮೇಲೆ ಸೆನ್ಸಾರ್ ಬೋರ್ಡ್ ಪ್ರಹಾರ ಮಾಡ್ತಿದೆಯಾ? ಹೀಗೊಂದು ಸಂದೇಹ ಮೂಡಲು ಕಾರಣವಾಗ್ತಿದೆ ಸೆನ್ಸಾರ್ ನಡೆ ಎನ್ನಲಾಗುತ್ತಿದೆ. ಕಾರಣ, ‘KD’ ಸಿನಿಮಾದ ಹಿಂದಿ ವರ್ಷನ್‌ಗೆ ಸಂಕಷ್ಟ ಎದುರಾಗಿದೆ. ಈ ಸಿನಿಮಾದ ಸೆನ್ಸಾರ್ ಮಾಡಲು ಮಂಡಳಿ ಹಿಂದೇಟು ಹಾಕಿದೆ ಎನ್ನಲಾಗ್ತಿದೆ. ಇದೇನು ಕೆವಿಎನ್‌ ಸಂಸ್ಥೆಯ ವಿರುದ್ಧ ‘ರಿವೇಂಜ್’ ನಡಿತಿದ್ಯಾ ಅಂತ ಹಲವರು ಮಾತನ್ನಾಡಿಕೊಳ್ಳುವಂತೆ ಆಗಿದೆ.

ಕೇಂದ್ರ ಸೆನ್ಸಾರ್ ಬೋರ್ಡ್ ನಿಂದ ನಿಮಯ ಉಲ್ಲಂಘನೆ?

ಹೌದು, ನಿರ್ದೇಶಕ ನಿರ್ಮಾಣ ಸಂಸ್ಥೆ ಹಾಗೂ ಪ್ರಾದೇಶಿಕ ಸೆನ್ಸಾರ್ ಮಂಡಳಿ ಗಮನಕ್ಕೆ ತರದೇ ರಿವೈಸಿಂಗ್ ಕಮಿಟಿಗೆ ಬರೆದ ಮುಂಬೈನ ಸೆಂಟರ್ ಸೆನ್ಸಾರ್ ಬೋರ್ಡ್ ನಡೆ ಈ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಪ್ರಾದೇಶಿಕ ಸೆನ್ಸಾರ್ ಮಂಡಳಿ ಈಗಾಗ್ಲೇ ಕೆಡಿ ಸಿನಿಮಾ ವೀಕ್ಷಿಸಿ ರಕ್ತಪಾತ ಇರೋದ್ರಿಂದ ಚಿತ್ರಕ್ಕೆ ಎ ಸರ್ಫಿಟಿಕೇಟ್ ನೀಡುವುದಾಗಿ ಹೇಳಿದ್ದು, ಹಾಡಿನ ಸಾಹಿತ್ಯ ಎರಡು ಸಾಲು ಬದಲಿಸಲು ಸೂಚನೆ ನೀಡಿತ್ತು. ಆದರೆ, ಇದೀಗ ಮುಂಬೈನಲ್ಲಿ ಕೆಡಿ ಸಿನಿಮಾದ ಹಿಂದಿ ವರ್ಷನ್ ಸಮಸ್ಯೆ ಎದುರಿಸುತ್ತಿದೆ. ಒಂದೇ ಸಿನಿಮಾ ಭಾಷಾವಾರು ಸಮಸ್ಯೆ ಎದುರಿಸುತ್ತಿರೋದಕ್ಕೆ ಕಾರಣವೇನು ಎಂಬ ಪ್ರಶ್ನೆಯನ್ನು ಈ ಸಿನಿಮಾ ಇದೀಗ ಹುಟ್ಟುಹಾಕಿದೆ.

ಕನ್ನಡ ಸಿನಿಮಾಗಳಿಗೆ ಮೇಲೆ ಕೇಂದ್ರ ಸೆನ್ಸಾರ್ ಬೋಡರ್ನಿಂದ ಅನ್ಯಾಯ?

ಆದ್ರೆ, ಇದನ್ನ ಪಾಸ್ ಮಾಡದ ಮುಂಬೈನಲ್ಲಿರುವ ಕೇಂದ್ರ ಸೆನ್ಸಾರ್ ಮಂಡಳಿ.. ಮತ್ತೆ ರಿವೈಸಿಂಗ್ ಕಮಿಟಿಗೆ ಕಳುಹಿಸಿ ಈ ಧೋರಣೆ ತೋರಿದೆ.. ಒಂದೇ ಸಿನಿಮಾಗೆ ಬೇರೆ ಬೇರೆ ಕಡೆ ನಡೆಯುತ್ತಿರುವ ಸೆನ್ಸಾರ್ ಮಂಡಳಿ ಧೋರಣೆ ಇದೀಗ ಚರ್ಚೆಗೆ ಕಾರಣವಾಗುತ್ತಿದೆ. ಮುಂದೇನು ಬೆಳವಣಿಗೆ ನಡೆಯಲಿದೆ ಎಂಬುದನ್ನು ಕಾದು ನೋಡಲಾಗುತ್ತಿದೆ.

Source link

Leave a Reply

Your email address will not be published. Required fields are marked *