
ಜೂನಿಯರ್ ಎನ್ ಟಿಆರ್ (JR NTR) ಅವರು ಇತ್ತೀಚೆಗೆ ಸುದ್ದಿಯಾಗಿದ್ದಾರೆ. ಅವರು ಪ್ರಶಾಂತ್ ನೀಲ್ ಅವರ ‘ಡ್ರ್ಯಾಗನ್’ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾಗಾಗಿ ಅವರ ದೇಹದ ತೂಕ ಕಡಿಮೆ ಮಾಡಿಕೊಂಡಿದ್ದರು. ಈಗ ಜೂನಿಯರ್ ಎನ್ ಟಿಆರ್ ಅವರು ಕಟ್ಟುಮಸ್ತಾದ ದೇಹ ಮಾಡಿಕೊಂಡಿದ್ದಾರೆ. ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಜೂನಿಯರ್ ಎನ್ ಟಿಆರ್ ಅವರು ಕೊನೆಯದಾಗಿ ತೆಲುಗಿನಲ್ಲಿ ಕಾಣಿಸಿಕೊಂಡಿದ್ದು ‘ದೇವರ’ ಚಿತ್ರದಲ್ಲಿ. ಈ ಸಿನಿಮಾ ಮೋದಿ ಮಾಡುವಲ್ಲಿ ವಿಫಲವಾಯಿತು. ಆ ಬಳಿಕ ಅವರು ‘ವಾರ್ 2’ ಸಿನಿಮಾ ಮಾಡಿದರು. ಈ ಚಿತ್ರ ಹೀನವಾಗಿ ಸೋಲು ಕಂಡಿತು. ಈಗ ಅವರು ಪ್ರಶಾಂತ್ ನೀಲ್ ಜೊತೆ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾ ನಿಂತಿದೆ ಎಂದೆಲ್ಲ ಸುದ್ದಿಗಳು ಹರಿದಾಡಿತ್ತು. ತಂಡದವರು ಪ್ರತಿ ಹಂತಕ್ಕೂ ಸ್ಪಷ್ಟನೆ ನೀಡುತ್ತಾ ಹೋಗುತ್ತಿದ್ದಾರೆ. ಈಗ ಜೂನಿಯರ್ ಎನ್ ಟಿಆರ್ ಟ್ರೋಲ್ ಗೆ ಉತ್ತರ ಹೇಳಿದೆ.
ಜೂನಿಯರ್ ಎನ್ ಟಿಆರ್ ಅವರು ಈಗ ಹಿಂಭಾಗದಿಂದ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರ ಫಿಟ್ ಆದ ಬಾಡಿ ಗಮನ ಸೆಳೆದಿದೆ. ‘ಇದನ್ನು ನಿರ್ಮಿಸಿದ್ದು, ಖರೀದಿ ಮಾಡಿಲ್ಲ’ ಎಂದು ಅವರು ಕ್ಯಾಪ್ಶನ್ ನೀಡಿದ್ದಾರೆ. ಈ ಮೂಲಕ ಟ್ರೋಲ್ ಮಾಡುವವರಿಗೆ ಅವರು ಉತ್ತರ ಕೊಟ್ಟಿದ್ದಾರೆ.
Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ
‘ಡ್ರ್ಯಾಗನ್’ ಚಿತ್ರಕ್ಕಾಗಿ ಜೂ.ಎನ್.ಟಿಆರ್ ಅವರು ಸಾಕಷ್ಟು ತೂಕ ಇಳಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಕೆಲವರಿಗೆ ಈ ಬಗ್ಗೆ ಬೇಸರವಿದೆ. ಅವರ ಸಿನಿಮಾ ಶೂಟಿಂಗ್ ಮುಗಿದ ಬಳಿಕ ಮತ್ತೆ ತೂಕ ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ: ಜೂ ಎನ್ ಟಿಆರ್ ಸಿನಿಮಾಕ್ಕೆ ಬಾಲಿವುಡ್ ನಟನಿಗೆ ಗಾಳ ಹಾಕಿದ ಪ್ರಶಾಂತ್ ನೀಲ್
ಪ್ರಶಾಂತ್ ನೀಲ್ ಕೊನೆಯದಾಗಿ ನಿರ್ದೇಶನ ಮಾಡಿದ್ದು ‘ಸಲಾರ್’ ಚಿತ್ರವನ್ನು. ಈ ಸಿನಿಮಾ ಹಿಟ್ ಆಗಿಲ್ಲ. ಆ ಬಳಿಕ ಅವರು ‘ಡ್ರ್ಯಾಗನ್’ ಚಿತ್ರ ಒಪ್ಪಿಕೊಂಡರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.