
ನಶೆಯಲ್ಲಿ ಕಾರು ಚಲಾಯಿಸಿ ಸಿಕ್ಕಿ ಬಿದ್ದ ಡಾಕ್ಟರ್, ತಪ್ಪಿಸಿಕೊಳ್ಳಲು ಮಾಡಿದ ಮ್ಯಾಜಿಕ್‌ಗೆ ದಂಗಾದ ಪೊಲೀಸ್, ಡ್ರಿಂಕ್ ಅಂಡ್ ಡ್ರೈವ್ ಚೆಕ್ ಮಾಡುವಾಗ ಸಿಕ್ಕಿ ಬಿದ್ದ ಡಾಕ್ಟರ್ ಮಾಡಿದ ಮಂತ್ರ ಏನು?
ಹೈದರಾಬಾದ್ (ಏ.13) ಟ್ರಾಫಿಕ್ ನಿಯಮ ಉಲ್ಲಂಘನೆಗಳಲ್ಲಿ ಕುಡಿದು ವಾಹನ ಚಲಾಯಿಸುವುದು ಅತ್ಯಂತ ಗಂಭೀರ ಪ್ರಕರಣ. ಹೀಗಾಗಿ ಪೊಲೀಸರು ಯಾವುದೇ ಕಾರಣಕ್ಕೂ ಈ ಪ್ರಕರಣದಲ್ಲಿ ರಾಜಿಯಾಗುವುದಿಲ್ಲ, ಅತ್ತು ಕರೆದರೂ ಕರಗುವುದಿಲ್ಲ. ಕುಡಿದು ವಾಹನ ಚಲಾಯಿಸಿ ಸಿಕ್ಕಿ ಬಿದ್ದರೆ ದುಬಾರಿ ದಂಡದ ಜೊತೆ ಡ್ರೈವಿಂಗ್ ಲೈಸೆನ್ಸ್ ಕೂಡ ರದ್ದಾಗಲಿದೆ. ಹೀಗೆ ಡ್ರಿಂಕ್ ಆ್ಯಂಡ್ ಡ್ರೈವ್ ಚೆಕಿಂಗ್ ವೇಳೆ ಡಾಕ್ಟರ್ ಸಿಕ್ಕಿಬಿದ್ದಿದ್ದಾರೆ. ಎಲ್ಲಾ ವಾಹನ ತಡೆದು ಪರಿಶೀಲಿಸುವಂತೆ BMW ಕಾರಿನಲ್ಲಿ ಬಂದ ವೈದ್ಯರನ್ನು ಪೊಲೀಸರು ಪರಿಶೀಲಿಸಿದ್ದಾರೆ. ಆದರೆ ಬ್ರೀಥ್ ಟೆಸ್ಟ್ ಮಾಡುತ್ತಿದ್ದಂತೆ ಕ್ಷಣಾರ್ಧದಲ್ಲಿ ವೈದ್ಯರು ಮ್ಯಾಜಿಕ್ ಮಾಡಿದ್ದಾರೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಮಾಡಿದ ಮ್ಯಾಜಿಕ್‌ಗೆ ಪೊಲೀಸರು ಮಾತ್ರವಲ್ಲ ಹಲವರು ದಂಗಾಗಿದ್ದಾರೆ.
ವೈದ್ಯರು ಮಾಡಿದ ಮ್ಯಾಜಿಕ್ ಏನು?
ಈ ಘಟನೆ ನಡೆದಿರುವುದು ಹೈದರಾಬಾದ್‌ನಲ್ಲಿ. ಹೈದರಾಬಾದ್ ಪೊಲೀಸರು ಡ್ರಿಂಕ್ ಆ್ಯಂಡ್ ಡ್ರೈವ್ ಚೆಕಿಂಗ್ ಮಾಡುತ್ತಿದ್ದ ವೇಳೆ ಈ ಮ್ಯಾಜಿಕ್ ನಡೆದಿದೆ. ಡಾಕ್ಟರ್ ಗೌತಮ್ ರೆಡ್ಡಿ ಕಂಠ ಪೂರ್ತಿ ಕುಡಿದು ತಮ್ಮ BMW ಕಾರಿನಲ್ಲಿ ಮನೆಗೆ ತೆರಳಲು ಡ್ರೈವಿಂಗ್ ಮಾಡುತ್ತಾ ತೆರಳಿದ್ದಾರೆ. ಜುಬಿಲಿ ಹಿಲ್ಸ್ ಬಳಿ ಹೈದರಾಬಾದ್ ಪೊಲೀಸರು ಎಂದಿನಂತೆ ಡ್ರಿಂಕ್ ಆ್ಯಂಡ್ ಡ್ರೈವ್ ಚೆಕಿಂಗ್ ಆರಂಭಿಸಿದ್ದಾರೆ. ಇದೇ ವೇಳೆ ಬಂದ ವೈದ್ಯರ ಕಾರನ್ನು ತಡೆದು ಪೊಲೀಸರು ಪರಿಶೀಲನೆಗೆ ಮುಂದಾಗಿದ್ದಾರೆ.
ಡ್ರೈವಿಂಗ್ ಮಾಡುತ್ತಿದ್ದ ವೈದ್ಯರ ಬಳಿ ಬಂದು ಬ್ರೀಥ್ ಟೆಸ್ಟ್ ಮಾಡಲು ಪೊಲೀಸರು ಸೂಚಿಸಿದ್ದಾರೆ. ಒಂದೆಡೆಯಿಂದ ಗಾಳಿ ಊದುತ್ತಲೇ ಇತ್ತ ಬಟನ್ ಪ್ರೆಸ್ ಮಾಡಿದ್ದಾರೆ. ತಕ್ಷಣವೇ ಕಾರಿನ ನಂಬರ್ ಪ್ಲೇಟ್ ಬದಲಾಗಿದೆ. TS9FQ9999 ನಂಬರ್ ಪ್ಲೇಟ್ ಕಾರಿನ ನಂಬರ್ ಪ್ಲೇಟ್ DL6CM7097 ಎಂದು ಬದಲಾಗಿದೆ. ಜೇಮ್ಸ್ ಬಾಂಡ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಈ ರೀತಿಯ ಪ್ರಯೋಗ ಮಾಡಲಾಗಿದೆ. ಇದೇ ಮ್ಯಾಜಿಕ್‌ನ್ನು ವೈದ್ಯರ ಗೌತಮ್ ರೆಡ್ಡಿ ತಮ್ಮ ಕಾರಿನಲ್ಲಿ ಮಾಡಿದ್ದಾರೆ. ತೆಲಂಗಾಣ ರಿಜಿಸ್ಟ್ರೇಶನ್ ಕಾರಿನ ಬದಲು ದೆಹಲಿ ರಿಜಿಸ್ಟ್ರೇಶನ್ ಕಾರಾಗಿ ಬದಲಾಗಿದೆ.
ಗೌತಮ್ ರೆಡ್ಡಿ ಕ್ಷಣಾರ್ಧದಲ್ಲಿ ಈ ಮ್ಯಾಜಿಕ್ ಮಾಡಿದ್ದಾರೆ. ಆದರೆ ಪೊಲೀಸರು ಗಮನಿಸಿದ್ದಾರೆ. ಕಾರು ಆಗಮಿಸುವಾಗಲೇ ನಂಬರ್ ಪ್ಲೇಟ್ ಗಮನಿಸಿದ್ದಾರೆ. ಬ್ರೀಥ್ ಟೆಸ್ಟ್ ವೇಳೆ ಕಾರಿನ ನಂಬರ್ ಪ್ಲೇಟ್ ಬದಲಾಗಿರುವುದನ್ನು ಪೊಲೀಸರು ಗಮನಿಸಿ ಗೌತಮ್ ರೆಡ್ಡಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇದೀಗ ಗೌತಮ್ ರೆಡ್ಡಿ ಸಂಕಷ್ಟ ಹೆಚ್ಚಾಗಿದೆ. ಒಂದೆಡೆ ಡ್ರಿಂಕ್ ಡ್ರೈವ್ ಪ್ರಕರಣ ಮತ್ತೊಂದೆಡೆ ನಿಯಮ ಬಾಹಿರವಾಗಿ ಕಾರಿನ ನಂಬರ್ ಪ್ಲೇಟ್ ನಕಲಿ ಮಾಡಿದ ಪ್ರಕರಣ ದಾಖಲಾಗಿದೆ.
ನಕಲಿ ನಂಬರ್ ಪ್ಲೇಟ್ ಬಳಕೆ ಮಾಡುವುದು ಹೊಸದೇನಲ್ಲ. ಹಲವರು ಈ ರೀತಿ ಮಾಡಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಆದರೆ ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿರುವಂತೆ ತಂತ್ರಜ್ಞಾನ ಬಳಸಿ ನಂಬರ್ ಪ್ಲೇಟ್ ಫ್ಲಿಪ್ ಮಾಡುವ ಘಟನೆ ಅತೀ ವಿರಳವಾಗಿದೆ.
Scroll to load tweet…