
ಬೆಂಗಳೂರು, (ಏಪ್ರಿಲ್ 13): ಕರ್ನಾಟಕದಲ್ಲಿ ಎರಡು ಉಪ ಚುನಾವಣೆಗಳು ಮುಕ್ತಾಯವಾದ ಬೆನ್ನಲ್ಲೆ ಸಚಿವ ಸಂಪುಟ ಪುನಾರಚನೆ (ಸಚಿವ ಸಂಪುಟ ಪುನಾರಚನೆ) ಚಟುವಟಿಕೆಗಳು ಜೋರಾಗಿವೆ. ಸರ್ಕಾರವೂ ಮೂರು ವರ್ಷ ಪೂರೈಸುತ್ತಿರುವ ಹಿನ್ನೆಲೆ ನಮಗೂ ಸಚಿವ ಸ್ಥಾನ ಕೊಡಿ ಎಂದು 25ಕ್ಕೂ ಅಧಿಕ ಶಾಸಕರು ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳಿದ್ದಾರೆ. ಆದರೆ, ಶಾಸಕರ ದೆಹಲಿ ಯಾತ್ರೆಗೆ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ (ಸಿದ್ದರಾಮಯ್ಯ) ಬೆಂಬಲಿಸಿದರೆ ಮತ್ತೊಂದೆಡೆ ಡಿಸಿಎಂ ಡಿಕೆ ಶಿವಕುಮಾರ್ (ಡಿಕೆ ಶಿವಕುಮಾರ್) ಗರಂ ಆಗಿದ್ದಾರೆ. ಖಡಕ್ ಎಚ್ಚರಿಕೆಯನ್ನೂ ಸಹ ನೀಡಿದ್ದು, ಇದು ರಾಜ್ಯ ಕಾಂಗ್ರೆಸ್‌ನಲ್ಲಿ ಭಾರೀ ಸಂಚಲನ ಮೂಡಿಸಿದೆ.
ಪಕ್ಷದ ಶಿಸ್ತನ್ನು ಯಾರೂ ಮೀರಬೇಡಿ
ಸಚಿವ ಸ್ಥಾನಕ್ಕಾಗಿ ವಿಚಾರವಾದಿ ಶಾಸಕರ ದೆಹಲಿ ಪ್ರವಾಸ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, ಪಕ್ಷದ ಶಿಸ್ತನ್ನು ಯಾರೂ ಮೀರಬೇಡಿ. ಪಕ್ಷದ ಚೌಕಟ್ಟಿನ ಒಳಗೆ ಎಲ್ಲಾ ಶಾಸಕರು ಮಾತನಾಡಬೇಕು. ಕೆಲವರು ಮಾತನಾಡಿದ್ದಾರೋ ಎಲ್ಲವನ್ನೂ ಗಮನಿಸಿದ್ದಾರೆ. ಆದರೆ ಮೀಡಿಯಾ ನಿಮ್ಮ ಭವಿಷ್ಯ ಅಲ್ಲ, ಪಾರ್ಟಿ ನಿಮ್ಮ ಭವಿಷ್ಯ. ಪಾರ್ಟಿಯಲ್ಲೇ ಎಲ್ಲರ ಭವಿಷ್ಯವಿದೆ, ಪಕ್ಷದ ಚೌಕಟ್ಟಿನೊಳಗೆ ಇರಬೇಕು. ಇದು ಸಂಪುಟ ಪುನಾರಚನೆ ಕೇಳುವ ಟೈಂ ಅಲ್ಲ. ಈಗ ಮಂತ್ರಿ ಮಾಡೋ ಟೈಂ ಅಲ್ಲ, ಮೊದಲು ಚುನಾವಣೆ ಮಾಡೋಣ ಎಂದು ಖಡಕ್ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ತೀವ್ರಗೊಂಡ ಸಚಿವ ಸಂಪುಟ ಪುನಾರಚನೆ ಕೂಗು: ದಿಲ್ಲಿ ಯಾತ್ರೆ ಕೈಗೊಂಡಿರುವ ಶಾಸಕರು ಯಾರ್ಯಾರು?
ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ
ವರಿಷ್ಠರನ್ನ ಭೇಟಿ ಮಾಡೋದು ತಪ್ಪೇನಿಲ್ಲ. ಆದರೆ ಬೇಕಾಬಿಟ್ಟಿ ಏನೇನೋ ಕಮೆಂಟ್ ಮಾಡೋದಾದ್ರೆ ನಾವು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ನನ್ನ ಹತ್ತಿರ ಬಂದು ಹೇಳಿದ್ದರು. ಹೋಗಿ ಕೇಳೋದರಲ್ಲಿ ತಪ್ಪು ಇಲ್ಲ . ಫಸ್ಟ್ ಎಂಎಎಲ್ ಆದವರು, ಎರಡನೇ ಬಾರಿ ಆದವರು ಕೇಳೋದು ತಪ್ಪು ಏನೆಲ್ಲ. ಹಿಂದೆ ಎಲ್ಲಾ ನಡೆದಿದೆ. ಆದರೆ ಇದು ಟೈಮ್ ಅಲ್ಲ, ಇದು ಟೈಮ್ ಅಲ್ಲ. ಈಗ ಎಲೆಕ್ಷನ್ ಇನ್ನೂ ನಡೆಯುತ್ತಿದೆ. ಹೀಗಾಗಿ ಮೊದಲು ಎಲೆಕ್ಷನ್ ಮಾಡೋಣ.
ಶಾಸಕರ ದೆಹಲಿ ದಂಡಯಾತ್ರೆ ಬೆಂಬಲಿಸಿದ ಸಿಎಂ
ಹೌದು…ಅತ್ತ ಡಿಕೆ ಶಿವಕುಮಾರ್ ಸಚಿವ ಪುನಾರಚನೆಗೆ ವಿರೋಧ ವ್ಯಕ್ತಪಡಿಸಿದ್ದು, ದೆಹಲಿಗೆ ತೆರಳಿದ ಶಾಸಕರಿಗೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಆದರೆ, ಇದಕ್ಕೂ ಮೊದಲು ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಸಂಪುಟ ಪುನಾರಚನೆ ಸಂಬಂಧ ದೆಹಲಿಗೆ ತೆರಳಿದ ಶಾಸಕರ ಪರವಾಗಿ ಮಾತನಾಡಿದ್ದಾರೆ
ಶಾಸಕರ ನಡೆ ಬಗ್ಗೆ ನಿನ್ನೆ(ಏಪ್ರಿಲ್ 12) ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸಿದ್ದರಾಮಯ್ಯ, ದೆಹಲಿಗೆ ಹೋದ್ರೆ ತಪ್ಪೇನು, ಬೇಡ ಅಂದೋರು ಯಾರು? ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ಮಾಡಿದ್ದೇವೆ. ಎರಡೂವರೆ ವರ್ಷಗಳ ಬಳಿಕ ಸಂಪುಟ ಪುನಾರಚನೆ ಮಾಡಬೇಕಿತ್ತು. ಪಂಚ ರಾಜ್ಯಗಳ ಚುನಾವಣೆ, ಬೈಎಲೆಕ್ಷನ್‌ನಿಂದ ವಿಳಂಬವಾಗಿದೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಸಿದ್ದರಾಮಯ್ಯನವರು ಪರೋಕ್ಷವಾಗಿ ಶಾಸಕರ ದೆಹಲಿ ಯಾತ್ರೆಗೆ ಬೆಂಬಲ ನೀಡಿದ್ದಾರೆ.
ಮತ್ತೆ ಶುರುವಾಯ್ತಾ ಡಿಕೆಶಿ-ಸಿದ್ದರಾಮಯ್ಯ ಮುಸುಕಿನ ಗುದ್ದಾಟ?
ನಾಯಕತ್ವ ಬದಲಾವಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಸಮಯ ಸಂದರ್ಭ ಬಂದಾಗೆಲ್ಲಾ ಡಿಕೆ ಶಿವಕುಮಾರ್ ಪರೋಕ್ಷವಾಗಿ ನಾಯಕತ್ವ ಬದಲಾವಣೆ ಬಗ್ಗೆ ಪ್ರಸ್ತಾಪಿಸುತ್ತಲೇ ಬಂದಿದ್ದಾರೆ. ಸಿಎಂ ಆಗಲೇಬೇಕೆಂದು ಪಟ್ಟು ಹಿಡಿದಿರುವ ಡಿಕೆ ಶಿವಕುಮಾರ್ ದೆಹಲಿಗೆ ಹೋಗಿ ಬರುತ್ತಲೇ ಇದ್ದಾರೆ. ಇನ್ನು ಅವರ ಬೆಂಬಲಿಗ ಶಾಸಕರು ಸಹತ್ವ ಬದಲಾವಣೆಯ ಬಗ್ಗೆಯೂ ಧ್ವನಿ ಎತ್ತುತ್ತಲೇ ಇದ್ದಾರೆ. ಆದರೆ, ಇದೀಗ ಸಂಪುಟ ಪುನಾರಚನೆಗೆ ಡಿಕೆ ಶಿವಕುಮಾರ್ ಆಗಲಿ ಅಥವಾ ಅವರ ಬಣದ ಶಾಸಕರಾಗಲಿ ಯಾವುದೇ ಬೆಂಬಲ ನೀಡುತ್ತಿಲ್ಲ, ಬದಲಾಗಿ ವಿರೋಧ ವ್ಯಕ್ತಪಡಿಸುತ್ತಿರುವ ಭಾರೀ ಚರ್ಚೆಗೆ ಗ್ರಾಸವಾಗಿದೆ.