ಪ್ರೀತಿಸಿ ಮದುವೆಯಾಗಿದ್ದ ಶಿಲ್ಪಾ ಎಂಬ ಮಹಿಳೆ ಪತಿಯ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಹಣ ಮತ್ತು ಬಂಗಾರ ನೀಡಿದರೂ ಕಿರುಕುಳ ಮುಂದುವರಿದ ಹಿನ್ನೆಲೆಯಲ್ಲಿ, ಮೃತಳ ತಂದೆ ಪತಿ ಮತ್ತು ಅತ್ತೆಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹಾದ್ರಿಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಗ್ರಾಮದ ಶಿಲ್ಪಾ (ಅನುಷಾ) ಪ್ರದೀಪ ಸ್ವಾಮಿ ಹಿರೇಮಠ (27) ಆತ್ಮ*ಹತ್ಯೆ ಮಾಡಿಕೊಂಡ ಮಹಿಳೆ.

ಹಿರೇಕೆರೂರು ಪಟ್ಟಣದ ಶಿವಯೋಗೆಪ್ಪ ಕಾಯಕದ ಅವರ ಮಗಳಾದ ಶಿಲ್ಪಾ 2021ರಲ್ಲಿ ಹಾದ್ರಿಹಳ್ಳಿ ಗ್ರಾಮದ ಪ್ರದೀಪ ಸ್ವಾಮಿ ಹಿರೇಮಠ ಅವರನ್ನು ಪ್ರೀತಿಸಿ, ಕುಟುಂಬಸ್ಥರ ವಿರೋಧದ ಮಧ್ಯೆಯೂ ಮದುವೆಯಾಗಿದ್ದಳು.

ಆರಂಭದಲ್ಲಿ ಮುನಿಸಿಕೊಂಡಿದ್ದ ತವರು ಮನೆಯವರು ನಂತರ ಮಗಳೊಂದಿಗೆ ಚೆನ್ನಾಗಿದ್ದರು. ಕೆಲದಿನ ಕಳೆದ ನಂತರ ಪತಿ ಪ್ರದೀಪಸ್ವಾಮಿ ಪದೇ ಪದೇ ವರದಕ್ಷಿಣೆ ತರುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಕೊನೆಗೆ ಶಿಲ್ಪಾಳ ತವರು ಮನೆಯವರು 7 ತೊಲೆ ಬಂಗಾರ ಮತ್ತು ಹಣ ನೀಡಿದ್ದರು.

ಮದ್ಯ ವ್ಯಸನಿಯಾಗಿದ್ದ ಪ್ರದೀಪ ಸ್ವಾಮಿ, ಮತ್ತೆ ಹೆಚ್ಚಿನ ಹಣ ತವರು ಮನೆಯಿಂದ ತರುವಂತೆ ಪತ್ನಿಗೆ ನಿತ್ಯವೂ ದೈಹಿಕವಾಗಿ, ಮಾನಸಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಅಲ್ಲದೆ, ನೀನು ದುಡಿದು ಹಣ ತರುವಂತೆ ಹೇಳುತ್ತಿದ್ದ. ಶಿಲ್ಪಾ ಖಾಸಗಿ ಬ್ಯಾಂಕ್‌ನಲ್ಲಿ ಕೆಲಸಕ್ಕೆ ಸೇರಿ ಸಂಬಳವನ್ನು ಪತಿಗೆ ನೀಡುತ್ತಿದ್ದಳು.

ಇದನ್ನೂ ಓದಿ: ನಶೆಯಲ್ಲಿ ಕಾರು ಚಲಾಯಿಸಿ ಸಿಕ್ಕಿ ಬಿದ್ದ ಡಾಕ್ಟರ್, ತಪ್ಪಿಸಿಕೊಳ್ಳಲು ಮಾಡಿದ ಮ್ಯಾಜಿಕ್‌ಗೆ ದಂಗಾದ ಪೊಲೀಸ್

ಇಷ್ಟಕ್ಕೂ ಸುಮ್ಮನಾಗದ ಪ್ರದೀಪಸ್ವಾಮಿ, ನನಗೆ ಮತ್ತಷ್ಟು ಹಣ ಬೇಕು ಎಂದು ತೀವ್ರ ಹಿಂಸೆ ನೀಡಲಾರಂಭಿಸಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಶಿಲ್ಪಾ, ಶುಕ್ರವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಹಾಕಿಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ. ಮಗಳ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ತಂದೆ ಶಿವಯೋಗೆಪ್ಪ ಕಾಯಕದ ಅವರು ಮಗಳ ಪತಿ ಪ್ರದೀಪ ಸ್ವಾಮಿ ಹಾಗೂ ಅತ್ತೆ ಲತಾ ಹಿರೇಮಠ ವಿರುದ್ಧ ಹಿರೇಕೆರೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: Mangaluru: ಪೊಲೀಸರ ಸೋಗಿನಲ್ಲಿ ಶುರುವಾದ ಹೊಸ ವಂಚನೆ! ಬೈಕ್ ರೈಡರ್‌ಗಳೇ ಇವರ ಟಾರ್ಗೆಟ್

28ರ ಜಿಮ್ ಟ್ರೈನರ್‌ಗೆ 42ರ ಮಹಿಳೆ ಜೊತೆ ಸಂಬಂಧ? ಯುವಕನ ಸಾವಿನ ಹಿಂದೆ ಆಂಟಿ ಕರಿನೆರಳು#Bengaluru https://t.co/Rdk2MdjyRP

— Asianet Suvarna News (@AsianetNewsSN) April 12, 2026

Source link
ಪ್ರೀತಿಸಿ ಮದುವೆಯಾದ್ರೂ ವರದಕ್ಷಿಣೆಗೆ ಕಿರುಕುಳ; ಗಂಡನ ಧನದಾಹಕ್ಕೆ ಬೇಸತ್ತು ಪ್ರಾಣ ಕಳೆದುಕೊಂಡ ಮಹಿಳೆ