Headlines

ನಟಿ Keerthy Suresh ಕುಡಿಯಲ್ಲ, ಆದ್ರೆ ಬೆಳಗಿನ ಜಾವ 2 ಗಂಟೆಗೆ ಹೈಪರ್ ಆಗ್ತಾಳೆ..: ಸೀಕ್ರೆಟ್ ಬಿಚ್ಚಿಟ್ಟ ಸಮಂತಾ | Samantha Reveals A Different Side Of Keerthy Suresh Gvd

ನಟಿ Keerthy Suresh ಕುಡಿಯಲ್ಲ, ಆದ್ರೆ ಬೆಳಗಿನ ಜಾವ 2 ಗಂಟೆಗೆ ಹೈಪರ್ ಆಗ್ತಾಳೆ..: ಸೀಕ್ರೆಟ್ ಬಿಚ್ಚಿಟ್ಟ ಸಮಂತಾ | Samantha Reveals A Different Side Of Keerthy Suresh Gvd



ನಟಿ Keerthy Suresh ಕುಡಿಯಲ್ಲ, ಆದ್ರೆ ಬೆಳಗಿನ ಜಾವ 2 ಗಂಟೆಗೆ ಹೈಪರ್ ಆಗ್ತಾಳೆ..: ಸೀಕ್ರೆಟ್ ಬಿಚ್ಚಿಟ್ಟ ಸಮಂತಾ | Samantha Reveals A Different Side Of Keerthy Suresh Gvd

ಪ್ರಿಯದರ್ಶನ್ ನಿರ್ದೇಶನದ ಮೋಹನ್‌ಲಾಲ್ ನಟನೆಯ ‘ಗೀತಾಂಜಲಿ’ ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟ ಕೀರ್ತಿ ಸುರೇಶ್, ಇಂದು ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಸಖತ್ ಬ್ಯುಸಿ ಆಗಿದ್ದಾರೆ.

ಸೌತ್ ಇಂಡಿಯಾದ ಜನಪ್ರಿಯ ನಟಿ ಕೀರ್ತಿ ಸುರೇಶ್ ಬಗ್ಗೆ ನಟಿ ಸಮಂತಾ ಒಂದು ಇಂಟರೆಸ್ಟಿಂಗ್ ವಿಚಾರ ಹಂಚಿಕೊಂಡಿದ್ದಾರೆ. ಕೀರ್ತಿಗೆ ಅದ್ಭುತ ಹಾಸ್ಯ ಪ್ರಜ್ಞೆ ಇದೆ, ತನಗೆ ಗೊತ್ತಿರುವವರಲ್ಲಿಯೇ ಅವಳು ಅತ್ಯಂತ ತಮಾಷೆಯ ಹುಡುಗಿ ಅಂತ ಸಮಂತಾ ಹೇಳಿದ್ದಾರೆ. ದಕ್ಷಿಣ ಭಾರತದ ಸಿನಿ ಪ್ರೇಕ್ಷಕರ ನೆಚ್ಚಿನ ನಟಿ ಕೀರ್ತಿ ಸುರೇಶ್. ಪ್ರಿಯದರ್ಶನ್ ನಿರ್ದೇಶನದ ಮೋಹನ್‌ಲಾಲ್ ನಟನೆಯ ‘ಗೀತಾಂಜಲಿ’ ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟ ಕೀರ್ತಿ, ಇಂದು ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಸಖತ್ ಬ್ಯುಸಿ ಆಗಿದ್ದಾರೆ.

ಇದೀಗ ನಟಿ ಸಮಂತಾ, ಕೀರ್ತಿ ಸುರೇಶ್ ಬಗ್ಗೆ ಹೇಳಿದ ಮಾತುಗಳು ಎಲ್ಲರ ಗಮನ ಸೆಳೆಯುತ್ತಿವೆ. ಕೀರ್ತಿ ಸುರೇಶ್ ಮದ್ಯಪಾನ ಮಾಡುವುದಿಲ್ಲ, ಆದರೂ ಬೆಳಗಿನ ಜಾವ 2 ಗಂಟೆಗೆ ಸಖತ್ ಹೈಪರ್ ಆಗ್ತಾರೆ ಅಂತ ಸಮಂತಾ ಹೇಳಿದ್ದಾರೆ. ಕೀರ್ತಿಗೆ ನಂಬಲಾಗದಂತಹ ಹ್ಯೂಮರ್ ಸೆನ್ಸ್ ಇದೆ, ತನಗೆ ಗೊತ್ತಿರುವವರಲ್ಲೇ ಅವಳು ಅತ್ಯಂತ ತಮಾಷೆ ಮಾಡುವ ಹುಡುಗಿ ಎಂದೂ ಸಮಂತಾ ಸೇರಿಸಿದ್ದಾರೆ.

ಸಖತ್ ಹೈಪರ್

“ಬೆಳಗಿನ ಜಾವ 2 ಗಂಟೆಗೆ ಅಲ್ಲಿಂದ ಓಡಿ ಹೋಗ್ಬೇಕು. ಅವಳು ಕುಡಿಯೋದೇನೂ ಇಲ್ಲ, ಆದ್ರೆ ಆ ಟೈಮ್‌ನಲ್ಲಿ ಸಖತ್ ಹೈಪರ್ ಆಗ್ತಾಳೆ. ಕೇವಲ 0.3 ಸೆಕೆಂಡ್‌ಗಳಲ್ಲಿ ಎಲ್ಲವನ್ನೂ ಏರುಪೇರು ಮಾಡ್ತಾಳೆ. ಅವಳ ಹ್ಯೂಮರ್ ಸೆನ್ಸ್ ಅದ್ಭುತ. ಅವಳು ಬೆಸ್ಟ್, ನನಗೆ ಗೊತ್ತಿರೋರಲ್ಲೇ ಕೀರ್ತಿ ಅತ್ಯಂತ ತಮಾಷೆಯ ಹುಡುಗಿ,” ಅಂತ ಸಮಂತಾ ಹೇಳಿದ್ದಾರೆ. ಸದ್ಯ ಕೀರ್ತಿ ನಟನೆಯ ‘ರಿವಾಲ್ವರ್ ರೀಟಾ’ ಚಿತ್ರ ಇತ್ತೀಚೆಗೆ ತೆರೆಕಂಡಿತ್ತು. ಇದನ್ನು ಜೆ.ಕೆ ಚಂದ್ರು ನಿರ್ದೇಶಿಸಿದ್ದರು.

ಈ ವರ್ಷ ಕೀರ್ತಿ ನಟನೆಯ ಹಲವು ಚಿತ್ರಗಳು ಮಲಯಾಳಂ, ತಮಿಳು ಹಾಗೂ ತೆಲುಗಿನಲ್ಲಿ ಬಿಡುಗಡೆಯಾಗಲಿವೆ. ಮಲಯಾಳಂನಲ್ಲಿ ‘ತೋಟಂ’ ಎಂಬ ಚಿತ್ರದಲ್ಲಿ ಕೀರ್ತಿ ನಟಿಸುತ್ತಿದ್ದಾರೆ. ಇದಕ್ಕೂ ಮುನ್ನ, ವಿಷ್ಣು ಜಿ. ರಾಘವ್ ನಿರ್ದೇಶನದ, ಟೊವಿನೋ ಥಾಮಸ್ ನಾಯಕರಾಗಿದ್ದ ‘ವಾಶಿ’ ಚಿತ್ರದಲ್ಲಿ ಕೀರ್ತಿ ಕೊನೆಯದಾಗಿ ಮಲಯಾಳಂನಲ್ಲಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲ, ಪ್ರಿಯದರ್ಶನ್-ಮೋಹನ್‌ಲಾಲ್ ಜೋಡಿಯ ಬಿಗ್ ಬಜೆಟ್ ಚಿತ್ರ ‘ಮರಕ್ಕಾರ್’ ಚಿತ್ರದಲ್ಲೂ ಕೀರ್ತಿ ಪ್ರಮುಖ ಪಾತ್ರ ಮಾಡಿದ್ದರು.



Source link

Leave a Reply

Your email address will not be published. Required fields are marked *