Headlines

ದೂದಿಹಳ್ಳಿ ಗ್ರಾಮದ ಕೆರೆಯ ಹೂಳು ತೆಗೆಯುವಾಗ ಸಿಕ್ತು 3 ಅಡಿ ಎತ್ತರದ ನಂದಿ ಮೂರ್ತಿ | Haveri A 3 Foot Tall Nandi Idol Was Found While Removing Silt From A Lake In Doodihalli Village Mrq

ದೂದಿಹಳ್ಳಿ ಗ್ರಾಮದ ಕೆರೆಯ ಹೂಳು ತೆಗೆಯುವಾಗ ಸಿಕ್ತು 3 ಅಡಿ ಎತ್ತರದ ನಂದಿ ಮೂರ್ತಿ | Haveri A 3 Foot Tall Nandi Idol Was Found While Removing Silt From A Lake In Doodihalli Village Mrq



ದೂದಿಹಳ್ಳಿ ಗ್ರಾಮದ ಕೆರೆಯ ಹೂಳು ತೆಗೆಯುವಾಗ ಸಿಕ್ತು 3 ಅಡಿ ಎತ್ತರದ ನಂದಿ ಮೂರ್ತಿ | Haveri A 3 Foot Tall Nandi Idol Was Found While Removing Silt From A Lake In Doodihalli Village Mrq

ದೂದಿಹಳ್ಳಿ ಗ್ರಾಮದ ಕೆರೆಯಲ್ಲಿ ಹೂಳು ತೆಗೆಯುವಾಗ ಪುರಾತನ ನಂದಿ ಮೂರ್ತಿಯೊಂದು ಪತ್ತೆಯಾಗಿದೆ. ಮೂರು ಅಡಿ ಎತ್ತರದ ಈ ವಿಗ್ರಹಕ್ಕೆ ಗ್ರಾಮಸ್ಥರು ಪೂಜೆ ಸಲ್ಲಿಸಿದ್ದು, ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲು ನಿರ್ಧರಿಸಿದ್ದಾರೆ. ಈ ಘಟನೆಯು ಗ್ರಾಮದಲ್ಲಿ ಸಂತಸ ಮತ್ತು ಕುತೂಹಲವನ್ನು ಮೂಡಿಸಿದೆ.

ಹಾವೇರಿ: ಹಿರೇಕೆರೂರು ತಾಲೂಕಿನ ದೂದಿಹಳ್ಳಿ ಗ್ರಾಮದ ಬಾಳೆ ಕೆರೆಯಲ್ಲಿ ಹೂಳು ತೆಗೆಯುತ್ತಿದ್ದ ವೇಳೆ ಪುರಾತನ ಕಾಲದ ನಂದಿ ಮೂರ್ತಿ ಪತ್ತೆಯಾಗಿದೆ. ಮೂರ್ತಿ 3 ಅಡಿ ಎತ್ತರವಿದೆ. ಮೂರ್ತಿ ಸಿಗುತ್ತಿದ್ದಂತೆ ಗ್ರಾಮಸ್ಥರು ಶುಚಿಗೊಳಿಸಿದ್ದಾರೆ. ನಂತರ ಮೂರ್ತಿಗೆ ಗ್ರಾಮದ ಜನರು ಪೂಜೆ ಸಲ್ಲಿಸಿದ್ದಾರೆ. ಗ್ರಾಮದ ದೇವಸ್ಥಾನದ ಬಳಿ ನಂದಿಯ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಲು ನಿರ್ಧಾರ ಮಾಡಿರುವುದಾಗಿ ಗ್ರಾಮದ ಜನರು ತಿಳಿಸಿದ್ದಾರೆ.

ಪರಮೇಶ್ವರನ ವಾಹನ ನಂದಿ ಸಿಕ್ಕಿರುವುದಕ್ಕೆ ಗ್ರಾಮಸ್ಥರು ಜಯಕಾರ ಹಾಕಿದ್ದಾರೆ. ನಮ್ಮ ಗ್ರಾಮಕ್ಕೆ ನಂದಿಯ ಮೂರ್ತಿ ಸಿಕ್ಕಿರುವುದು ಗ್ರಾಮಕ್ಕೆ ಶುಭಕರವಾಗಲಿದೆ. ಈ ಮೂರ್ತಿ ಯಾವ ಕಾಲದ್ದು? ಕೆರೆಯಲ್ಲಿ ಹೇಗೆ ಪತ್ತೆಯಾಯಿತು ಎನ್ನುವುದರ ಬಗ್ಗೆ ಇತಿಹಾಸ ಸಂಶೋಧಕರು ಶೋಧನೆ ಮಾಡಲಿ ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ಅಪರೂಪದ ಜಾತ್ರೆ ವೀರಗಲ್ಲು ಶಾಸನ ಪತ್ತೆ

ತುಮಕೂರು: ಇತಿಹಾಸದ ಪುಟಗಳಲ್ಲಿ ಅಡಗಿ ಹೋಗಿದ್ದ 14ನೇ ಶತಮಾನದ ಮಹತ್ವದ ಸಾಂಸ್ಕೃತಿಕ ಮಾಹಿತಿಯನ್ನೊಳಗೊಂಡ ಅಪರೂಪದ ವೀರಗಲ್ಲು ಶಾಸನವೊಂದು ನಗರದ ಸತ್ಯಮಂಗಲದಲ್ಲಿ ಪತ್ತೆಯಾಗಿದೆ. ತುಮಕೂರು ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಎಂ. ಕೊಟ್ರೇಶ್ ಹಾಗೂ ಡಾ. ಸುಧಾ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ತಂಡ ಈ ಅಪ್ರಕಟಿತ ಶಾಸನವನ್ನು ಗುರುತಿಸಿ ಸಂಶೋಧಿಸಿದೆ.

ಇದನ್ನೂ ಓದಿ: ನಿಧಿ ಆಸೆಗಾಗಿ ಚಾಲುಕ್ಯರ ಕಾಲದ ದೇಗುಲ ಧ್ವಂಸ; ಗಂಗಾವತಿಯಲ್ಲಿ ಕೃಷ್ಣದೇವರಾಯನ ಕಾಲದ ಶಾಸನ ಪತ್ತೆ

ಶಾಸನದಲ್ಲಿರುವ ಮಾಹಿತಿ ಏನು?

ಶಾಸನದ ಮಾಹಿತಿಯಂತೆ ಇದು ವಿಜಯನಗರ ಸಾಮ್ರಾಜ್ಯದ ಉದಯಕ್ಕೂ ಪೂರ್ವದ ಕಾಲಘಟ್ಟದ್ದಾಗಿದ್ದು, ಅಂದರೆ ವಿಕ್ರಮ ಸಂವತ್ಸರದಲ್ಲಿ ವೀರನರಸಿಂಗದೇವನ ಆಳ್ವಿಕೆಯ ಕಾಲಕ್ಕೆ ಸೇರಿದ್ದಾಗಿದೆ. ಅಂದು ಈ ಭಾಗವನ್ನು ಮುರುಗಲು ರಾಜ್ಯ ಎಂದು ಕರೆಯಲಾಗುತ್ತಿತ್ತು ಹಾಗೂ ಸಿಂಗೆಯ ದಂಡನಾಯಕರು ಇಲ್ಲಿನ ಪ್ರಧಾನಿಯಾಗಿದ್ದರು ಎಂಬ ಮಹತ್ವದ ಅಂಶಗಳು ಇಲ್ಲಿ ಉಲ್ಲೇಖವಾಗಿವೆ. ವಿಶೇಷವೆಂದರೆ ಶಾಸನದ ಐದನೇ ಸಾಲಿನಲ್ಲಿ ಸತ್ಯಮಂಗಲ ಎಂಬ ಗ್ರಾಮದ ಹೆಸರೇ ಇರುವುದು ಕುತೂಹಲಕಾರಿಯಾಗಿದೆ.

ಇದನ್ನೂ ಓದಿ: ಇಡೀ ದೇಶದ ಗಮನ ಸೆಳೆದಿದ್ದ ಲಕ್ಕುಂಡಿಯ 47 ದಿನಗಳ ಉತ್ಖನನಕ್ಕೆ ತೆರೆ; ಇಷ್ಟು ದಿನ ಸಿಕ್ಕಿದ್ದೇನು?

Scroll to load tweet…



Source link

Leave a Reply

Your email address will not be published. Required fields are marked *