Headlines

NWKRTC: ಹುಬ್ಬಳ್ಳಿ-ಗದಗ ನಡುವೆ ತಡೆ ರಹಿತ ರಾಜಹಂಸ ಬಸ್ ಸಂಚಾರ; ವೇಳಾ ಪಟ್ಟಿ ಹೀಗಿದೆ | Non Stop Rajahamsa Bus Service Between Hubballi And Gadag Nwkrtc Service Mrq

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಹುಬ್ಬಳ್ಳಿ ಮತ್ತು ಗದಗ ನಡುವೆ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ತಡೆ ರಹಿತ ರಾಜಹಂಸ ಬಸ್ ಸಂಚಾರವನ್ನು ಆರಂಭಿಸಿದೆ. ಈ ಹೊಸ ಸೇವೆಯು ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣವನ್ನು ಒದಗಿಸಲಿದೆ.

ಹುಬ್ಬಳ್ಳಿ: ವಿವಿಧ ಕೆಲಸ ಕಾರ್ಯಗಳಿಗಾಗಿ ಹುಬ್ಬಳ್ಳಿ- ಧಾರವಾಡ ಅವಳಿ ನಗರ ಹಾಗೂ ಗದಗ ನಡುವೆ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಮತ್ತಷ್ಟು ಆರಾಮದಾಯಕ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಹುಬ್ಬಳ್ಳಿ-ಗದಗ ನಡುವೆ ತಡೆ ರಹಿತ ರಾಜಹಂಸ ಬಸ್‌ ಸಂಚಾರ ಆರಂಭಿಸಲಾಗಿದೆ.

ಸಾರ್ವಜನಿಕರ ಬೇಡಿಕೆಗೆ ಸ್ಪಂದಿಸಿರುವ ಸಂಸ್ಥೆ

ವಾಣಿಜ್ಯ, ಉದ್ಯೋಗ, ವಿದ್ಯಾಭ್ಯಾಸ ಮತ್ತಿತರ ಕೆಲಸ ಕಾರ್ಯಗಳಿಗಾಗಿ ಪ್ರತಿ ದಿನ ಹುಬ್ಬಳ್ಳಿ- ಧಾರವಾಡ ಅವಳಿ ನಗರ ಹಾಗೂ ಗದಗ ನಡುವೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಯಾಣ ಮಾಡುತ್ತಾರೆ. ಅವರಿಗೆ ಅನುಕೂಲವಾಗುವಂತೆ ಸಾರ್ವಜನಿಕರ ಬೇಡಿಕೆಯ ಮೇರೆಗೆ ಹುಬ್ಬಳಿ-ಗದಗ ನಡುವೆ ಪ್ರಾಯೋಗಿಕವಾಗಿ ತಡೆ ರಹಿತ ರಾಜಹಂಸ ಬಸ್‌ಗಳ ಸಂಚಾರವನ್ನು ಆರಂಭಿಸಲಾಗಿದೆ.

ಇದನ್ನೂ ಓದಿ: ಸರ್ಕಾರಿ ಕಾಲೇಜುಗಳಲ್ಲಿ ಶುಲ್ಕ ಏರಿಕೆ ಇಲ್ಲ: ಸಚಿವ ಡಾ.ಎಂ.ಸಿ.ಸುಧಾಕರ್ ಅಧ್ಯಕ್ಷತೆ ಸಭೆಯಲ್ಲಿ ತೀರ್ಮಾನ

ವೇಳಾ ಪಟ್ಟಿ

ಹುಬ್ಬಳ್ಳಿಯಿಂದ ಗದಗಗೆ ಬೆಳಗ್ಗೆ 8, 8-30, 9 ಮಧ್ಯಾಹ್ನ 12, 12-30, 1 ಸಂಜೆ 4, 4-30 ಹಾಗೂ 5. ಗದಗದಿಂದ ಹುಬ್ಬಳ್ಳಿಗೆ ಬೆಳಗ್ಗೆ 10, 10-30, 11 ಮಧ್ಯಾಹ್ನ 2, 2-30, 3 ಸಂಜೆ 5-30, 6 ಹಾಗೂ 6-30. ಅಪಘಾತ ಪರಿಹಾರ ವಿಮೆ, ಟೋಲ್ ಫೀ ಇತ್ಯಾದಿ ಸೇರಿದಂತೆ ಒಟ್ಟು ಪ್ರಯಾಣ ದರ ₹100 ನಿಗದಿಪಡಿಸಲಾಗಿದೆ. ಈ ಬಸ್ಸುಗಳು ಹೊಸೂರು ಬಸ್ ನಿಲ್ದಾಣದಿಂದ ಹೊರಡುತ್ತವೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

ಇದನ್ನೂ ಓದಿ: ಸಂಪುಟ ಪುನಾರಚನೆ ಮಾಡೋದು ಹೈಕಮಾಂಡ್‌ಗೆ ಬಿಟ್ಟಿದ್ದು: ಸಿಎಂ ಸಿದ್ದರಾಮಯ್ಯ

Scroll to load tweet…

Source link

Leave a Reply

Your email address will not be published. Required fields are marked *