
ಮುಂಬೈ ಇಂಡಿಯನ್ಸ್ ಸತತ ಮೂರನೇ ಸೋಲಿನ ಬಳಿಕ, ನಾಯಕ ಹಾರ್ದಿಕ್ ಪಾಂಡ್ಯ ಅವರ ಕ್ಯಾಪ್ಟನ್ಸಿ ನಿರ್ಧಾರಗಳ ವಿರುದ್ಧ ರವಿಚಂದ್ರನ್ ಅಶ್ವಿನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.<img>ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹೀನಾಯ ಸೋಲು ಕಂಡಿತ್ತು. ಇದರ ಬೆನ್ನಲ್ಲೇ, ಹಿರಿಯ ಆಟಗಾರ ರವಿಚಂದ್ರನ್ ಅಶ್ವಿನ್, ನಾಯಕ ಹಾರ್ದಿಕ್ ಪಾಂಡ್ಯ ಅವರ ನಿರ್ಧಾರಗಳನ್ನು ಕಟುವಾಗಿ ಟೀಕಿಸಿದ್ದಾರೆ.<img><p>ಸ್ಪಿನ್ನರ್ಗಳನ್ನು ಚೆನ್ನಾಗಿ ಎದುರಿಸುವ ಆರ್ಸಿಬಿ ನಾಯಕ ರಜತ್ ಪಾಟಿದಾರ್ಗೆ ಸ್ಪಿನ್ನರ್ ಮಯಾಂಕ್ ಮಾರ್ಕಂಡೆ ಅವರನ್ನು ಬೌಲಿಂಗ್ಗೆ ಇಳಿಸಿದ ಹಾರ್ದಿಕ್ ನಿರ್ಧಾರ ದೊಡ್ಡ ತಪ್ಪು. ಈ ಪಂದ್ಯದಲ್ಲಿ ಹಾರ್ದಿಕ್ ನಾಯಕತ್ವ ತೀರಾ ಸಾಧಾರಣವಾಗಿತ್ತು ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ.</p><img><p>2024ರಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಆಡುವಾಗ ಪಾಟಿದಾರ್, ಮಯಾಂಕ್ ಮಾರ್ಕಂಡೆ ಅವರನ್ನು ಎದುರಿಸಿದ ರೀತಿಯನ್ನು ಅಶ್ವಿನ್ ನೆನಪಿಸಿಕೊಂಡಿದ್ದಾರೆ. ರಜತ್ ಪಾಟಿದಾರ್ ಒಬ್ಬ ಸ್ಪಿನ್ ಹಿಟ್ಟರ್ ಎಂದು ಜಗತ್ತಿಗೆ ಸಾರಿದ್ದು ಆ ಪಂದ್ಯದಲ್ಲಿ. ಅಂದು ಹೈದರಾಬಾದ್ನಲ್ಲಿ ಮಾರ್ಕಂಡೆಗೆ ಪಾಟಿದಾರ್ ಮನಬಂದಂತೆ ಥಳಿಸಿದ್ದರು. ಆವತ್ತು ಒಂದೇ ಓವರ್ನಲ್ಲಿ ನಾಲ್ಕು ಸಿಕ್ಸರ್ ಬಾರಿಸಿದ್ದರು, ಈ ಪಂದ್ಯದಲ್ಲಿ ಮೂರು ಸಿಕ್ಸರ್ಗಳನ್ನು ಹೊಡೆದರು. ಪಾಟಿದಾರ್ ಕ್ರೀಸ್ಗೆ ಬಂದ ತಕ್ಷಣ ಮತ್ತೆ ಮಾರ್ಕಂಡೆಗೆ ಬೌಲಿಂಗ್ ನೀಡುವುದು ಬುದ್ಧಿವಂತಿಕೆಯ ನಡೆಯಾಗಿರಲಿಲ್ಲ ಎಂದು ಅಶ್ವಿನ್ ಹೇಳಿದರು.</p><img>ಈ ಪಂದ್ಯದಲ್ಲಿ ಮುಂಬೈ ಸ್ಪಿನ್ನರ್ಗಳು ನೀಡಿದ ರನ್ಗಳೇ ಸೋಲು-ಗೆಲುವಿನ ನಡುವಿನ ವ್ಯತ್ಯಾಸವನ್ನು ನಿರ್ಧರಿಸಿತು ಎಂದು ಅಶ್ವಿನ್ ಹೇಳಿದರು. ಮಯಾಂಕ್ ಮಾರ್ಕಂಡೆ 2 ಓವರ್ಗಳಲ್ಲಿ 40 ರನ್ (ಎಕಾನಮಿ: 20.00) ನೀಡಿದರೆ, ಮಿಚೆಲ್ ಸ್ಯಾಂಟ್ನರ್ 4 ಓವರ್ಗಳಲ್ಲಿ 43 ರನ್ ಬಿಟ್ಟುಕೊಟ್ಟರು.<img><p>ಸ್ಪಿನ್ನರ್ಗಳು ಇಷ್ಟೊಂದು ರನ್ ಬಿಟ್ಟುಕೊಟ್ಟಿದ್ದರಿಂದಲೇ ಆರ್ಸಿಬಿ ಸ್ಕೋರ್ 210ರ ನಿರೀಕ್ಷೆಯಿಂದ 240ಕ್ಕೆ ಏರಿತು. ಪಾಟಿದಾರ್ರಂತಹ ಆಟಗಾರನಿಗೆ ಸೆಟ್ ಆಗಲು ಬೇಕಾದ ಎಸೆತಗಳನ್ನು ಹಾರ್ದಿಕ್ ನೀಡಿದರು. ಪಾಟಿದಾರ್ 17 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.</p><img><p>ಐಪಿಎಲ್ 2026 ಪ್ರಾರಂಭವಾಗುವ ಮೊದಲೇ, ಭಾರತ ತಂಡದ ನಾಯಕನೂ ಆಗಿರುವ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಬೇಕು ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದರು. ಹಾರ್ದಿಕ್ ನಾಯಕತ್ವದಲ್ಲಿನ ಲೋಪಗಳು ತಂಡವನ್ನು ಸಂಕಷ್ಟಕ್ಕೆ ದೂಡುತ್ತಿವೆ ಎನ್ನುವುದು ಅಶ್ವಿನ್ ವಾದವಾಗಿದೆ.</p><img>ನಾಲ್ಕು ಪಂದ್ಯಗಳಲ್ಲಿ ಮೂರು ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೆ ಕುಸಿದಿರುವ ಮುಂಬೈ, ತನ್ನ ಮುಂದಿನ ಪಂದ್ಯವನ್ನು ಗುರುವಾರ ಬಲಿಷ್ಠ ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದೆ. ಈ ಪಂದ್ಯವೂ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದುವರೆಗೆ ಸೋಲರಿಯದ ಪಂಜಾಬ್, ನಾಲ್ಕು ಪಂದ್ಯಗಳಿಂದ 7 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
Source link
ಹಾರ್ದಿಕ್ ಪಾಂಡ್ಯ ನಾಯಕತ್ವದ ತಂತ್ರಗಳನ್ನು ಟ್ರೋಲ್ ಮಾಡಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ!