ತಪ್ಪಾಗಿ ಯುಪಿಐ ಪೇಮೆಂಟ್ ಮಾಡಿಬಿಟ್ಟರೆ ಅದನ್ನು ರಿವರ್ಸ್ ಮಾಡಬಹುದಾ? ಇಲ್ಲಿದೆ ತಿಳಿದಿರಬೇಕಾದ ಮಾಹಿತಿ

ತಪ್ಪಾಗಿ ಯುಪಿಐ ಪೇಮೆಂಟ್ ಮಾಡಿಬಿಟ್ಟರೆ ಅದನ್ನು ರಿವರ್ಸ್ ಮಾಡಬಹುದಾ? ಇಲ್ಲಿದೆ ತಿಳಿದಿರಬೇಕಾದ ಮಾಹಿತಿ


ತಪ್ಪಾಗಿ ಯುಪಿಐ ಪೇಮೆಂಟ್ ಮಾಡಿಬಿಟ್ಟರೆ ಅದನ್ನು ರಿವರ್ಸ್ ಮಾಡಬಹುದಾ? ತಿಳಿದಿರಬೇಕಾದ ಮಾಹಿತಿ ಇಲ್ಲಿದೆ

ಭಾರತದಲ್ಲಿ ಕಳೆದ ಆರೇಳು ವರ್ಷಗಳಿಂದ ಯುಪಿಐ ಪೇಮೆಂಟ್ ಸಿಸ್ಟಂ (UPI) ಬಹಳ ವ್ಯಾಪಕವಾಗಿ ಬಳಕೆಯಲ್ಲಿದೆ. ಕೋಟ್ಯಂತರ ಜನರು ನಿತ್ಯವೂ ಪೇಮೆಂಟ್‌ಗೆ ಯುಪಿಐ ಬಳಸುತ್ತಾರೆ. ಅಂಗಡಿಯಲ್ಲಿ ಪೇಮೆಂಟ್ ಮಾಡಲು, ಧ್ವನಿ ಹಣ ಕಳುಹಿಸಲು, ಪರಿಚಿತರಿಗೆ ಹಣ ಕಳುಹಿಸಲು, ಥರ್ಡ್ ಪಾರ್ಟಿಗೆ ಹಣ ಕಳುಹಿಸಲು ಹೀಗೆ ಯುಪಿಐ ಬಳಕೆ ತೀರಾ ಸಾಮಾನ್ಯವಾಗಿದೆ.

ಮಾರ್ಚ್ ತಿಂಗಳಿನಲ್ಲಿ 2,264 ಕೋಟಿಗಳಷ್ಟು ಯುಪಿಐ ಟ್ರಾನ್ಸಾಕ್ಷನ್ ಆಗಿದೆ. ಇಷ್ಟು ಅಪಾರ ಪ್ರಮಾಣದಲ್ಲಿ ಟ್ರಾನ್ಸಾಕ್ಷನ್ ಆಗುವಾಗ ಕೆಲವೊಮ್ಮೆ ತಪ್ಪುಗಳಾಗಬಹುದು. ಯುಪಿಐ ಪೇಮೆಂಟ್ ಮಾಡುವಾಗ ಸಾಮಾನ್ಯವಾಗಿ ಸ್ವೀಕೃತರ ಮೊಬೈಲ್ ನಂಬರ್ ಅನ್ನು ಹಾಕಿ ಪೇಮೆಂಟ್ ಮಾಡುತ್ತಾರೆ. ಈ ವೇಳೆ ಮೊಬೈಲ್ ನಂಬರ್ ತಪ್ಪಾಗಿ ಹಾಕಿಬಿಟ್ಟರೆ ತಪ್ಪಾದ ವ್ಯಕ್ತಿಗೆ ಪೇಮೆಂಟ್ ಹೋಗಬಹುದು. ಸ್ವಲ್ಪ ಎಚ್ಚರಿಕೆ ವಹಿಸಿದರೆ ಇಂಥ ತಪ್ಪು ಆಗದಂತೆ ನೋಡಿಕೊಳ್ಳಬಹುದು.

ಇದನ್ನೂ ಓದಿ: 10,000 ರೂಗಿಂತ ಹೆಚ್ಚಿನ ಮೊತ್ತದ ಯುಪಿಐ, ಐಎಂಪಿಎಸ್ ಪೇಮೆಂಟ್ 1 ಗಂಟೆ ವಿಳಂಬ? ಆರ್ಬಿಐ ಹೊಸ ಕ್ರಮಕ್ಕೆ ಯೋಜನೆ

ತಪ್ಪಾಗಿ ಯುಪಿಐ ಪೇಮೆಂಟ್ ಮಾಡಿದರೆ ಏನು ಮಾಡಬೇಕು?

ತಪ್ಪಾದ ವ್ಯಕ್ತಿಗಳಿಗೆ ಯುಪಿಐ ಪೇಮೆಂಟ್ ಮಾಡಿರುವ ಪ್ರಕರಣಗಳು ಸಾಕಷ್ಟು ನಡೆದಿವೆ. ಈ ಹಣವನ್ನು ವಾಪಸ್ ಪಡೆಯಲು ಸಾಧ್ಯವೇ? ಅಥವಾ ಪೇಮೆಂಟ್ ರಿವರ್ಸ್ ಮಾಡಲು ಸಾಧ್ಯವೇ? ಇದಕ್ಕೆ ಸಿಂಪಲ್ಲದ ಉತ್ತರ ಎಂದರೆ ಆಗೋದಿಲ್ಲ.

ಯುಪಿಐ ಮೂಲಕ ಪೇಮೆಂಟ್ ಮಾಡಿದರೆ ಅದನ್ನು ರಿವರ್ಸ್ ಮಾಡುವ ಅವಕಾಶ ಇರುವುದಿಲ್ಲ. ಇದು ರಿಯಲ್ ಟೈಮ್‌ನಲ್ಲಿ ಮಾಡಲಾಗುವ ಪೇಮೆಂಟ್. ಸರ್ಕಾರ ಈಗ ವ್ಯಕ್ತಿಯಿಂದ ವ್ಯಕ್ತಿಗೆ 10,000 ರೂಗೂ ಅಧಿಕ ಮೌಲ್ಯದ ಯುಪಿಐ ಪೇಮೆಂಟ್‌ನಲ್ಲಿ ಒಂದು ಗಂಟೆ ಕೂಲಿಂಗ್ ಅವಧಿಯ ನಿಯಮವನ್ನು ಮಾಡಲು ಆರ್ಬಿಐ ಯೋಜಿಸುತ್ತಿದೆ. ಆಗ ಪೇಮೆಂಟ್ ರಿವರ್ಸ್ ಮಾಡಲು ಅವಕಾಶ ಸಿಗಬಹುದು.

ಇದನ್ನೂ ಓದಿ: ಟೋಲ್ ಬೂಟ್‌ನಲ್ಲಿ ಇನ್ಮುಂದೆ ಕ್ಯಾಶ್ ಪೇಮೆಂಟ್‌ಗೆ ಅವಕಾಶವಿಲ್ಲ; ಫಾಸ್ಟ್ಯಾಗ್ ಕಡ್ಡಾಯ

ಯುಪಿಐ ಪೇಮೆಂಟ್ ಮೂಲಕ ಹಣವು ಬೇರೆ ವ್ಯಕ್ತಿಯ ಬ್ಯಾಂಕ್ ಅಕೌಂಟ್‌ಗೆ ಹೋಗಿಬಿಟ್ಟರೆ ಅದನ್ನು ಹಿಂಪಡೆಯಲು ಇರುವ ಏಕೈಕ ಮಾರ್ಗವೆಂದರೆ ಅದು ಸ್ವೀಕೃತರು ಮಾತ್ರ. ಹಣ ಸ್ವೀಕರಿಸಿದವರನ್ನು ನೀವು ಮನವಿ ಮಾಡಿಕೊಳ್ಳಬಹುದು ಅಷ್ಟೇ. ಅವರು ಹಾಕಿದರೆ ಆಯಿತು. ಇಲ್ಲದಿದ್ದರೆ ಕೆಲವು ದೂರುಗಳನ್ನು ಸಲ್ಲಿಸುವುದಷ್ಟೇ ಉಳಿದಿರುವ ಮಾರ್ಗೋಪಾಯಗಳು.

ಸ್ವೀಕೃತರು ಪ್ರತಿಕ್ರಿಯಿಸಿದಾಗ ಥರ್ಡ್ ಪಾರ್ಟಿ ಆಯಪ್‌ನಲ್ಲಿ ‘ರಿಪೋರ್ಟ್ ಇಷ್ಯೂ’ (ವರದಿ ಸಂಚಿಕೆ) ಆಯ್ಕೆಯನ್ನು ಬಳಸಬಹುದು. ಎನ್ ಪಿ ಸಿಸ್ಟಂ ಮೂಲಕ ದೂರು ಸಲ್ಲಿಸಬಹುದು. ಇಲ್ಲಿ ಪರಿಹಾರ ಸಿಗದಿದ್ದಾಗ ಬ್ಯಾಂಕ್ ಅನ್ನು ಸಂಪರ್ಕಿಸಬಹುದು. ಅಲ್ಲಿಯೂ ಕೆಲಸವಾಗದಿದ್ದಾಗ ಆರ್ ಬಿಐ ಓಂಬುಡ್ಸ್ ಮ್ಯಾನ್ (RBI Ombudsman) ಅವರ ಬಳಿ ದೂರು ಕೊಂಡೊಯ್ಯಬಹುದು. ಅಲ್ಲಿಯೂ ನಿಮ್ಮ ಹಣ ವಾಪಸ್ ಬರಲು ಸಾಧ್ಯವಾದರೆ ಕಷ್ಟ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *