Headlines

ಹಾಸನ: ಪ್ರೀತಿಸಿದ ವಿವಾಹಿತೆ ಜೊತೆ ಓಡಿ ಹೋಗಿ ಕಾರಲ್ಲಿ ತಾಳಿ ಕಟ್ಟಿದ ಪ್ರಿಯಕರ! 8 ವರ್ಷದ ವಿವಾಹ ತ್ಯಜಿಸಿದ ಮಹಿಳೆ! | Hassan Shocker Married Woman Elopes With Lover Marries Him Inside Car Video Goes Viral Gdp

ಹಾಸನ: ಪ್ರೀತಿಸಿದ ವಿವಾಹಿತೆ ಜೊತೆ ಓಡಿ ಹೋಗಿ ಕಾರಲ್ಲಿ ತಾಳಿ ಕಟ್ಟಿದ ಪ್ರಿಯಕರ! 8 ವರ್ಷದ ವಿವಾಹ ತ್ಯಜಿಸಿದ ಮಹಿಳೆ! | Hassan Shocker Married Woman Elopes With Lover Marries Him Inside Car Video Goes Viral Gdp



ಹಾಸನ: ಪ್ರೀತಿಸಿದ ವಿವಾಹಿತೆ ಜೊತೆ ಓಡಿ ಹೋಗಿ ಕಾರಲ್ಲಿ ತಾಳಿ ಕಟ್ಟಿದ ಪ್ರಿಯಕರ! 8 ವರ್ಷದ ವಿವಾಹ ತ್ಯಜಿಸಿದ ಮಹಿಳೆ! | Hassan Shocker Married Woman Elopes With Lover Marries Him Inside Car Video Goes Viral Gdp

ಹಾಸನದಲ್ಲಿ ಎಂಟು ವರ್ಷಗಳ ವಿವಾಹಿತ ಮಹಿಳೆಯೊಬ್ಬಳು, ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ ಗಂಡನನ್ನು ತೊರೆದು ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಸಾಂತ್ವನ ಕೇಂದ್ರದಿಂದ ಬಂದ ಕೆಲವೇ ಸಮಯದಲ್ಲಿ ಆಕೆ ಪರಾರಿಯಾಗಿ, ಕಾರಿನಲ್ಲೇ ಪ್ರಿಯಕರನಿಂದ ತಾಳಿ ಕಟ್ಟಿಸಿಕೊಂಡಿದ್ದು, ಈ ವಿಡಿಯೋ ವೈರಲ್ ಆಗಿದೆ.

ಹಾಸನ: ಜಿಲ್ಲೆಯಲ್ಲಿ ಅಚ್ಚರಿಗೊಳಿಸುವಂತೆಯೇ ಚರ್ಚೆಗೆ ಕಾರಣವಾದ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಎಂಟು ವರ್ಷಗಳ ಹಿಂದೆ ವಿವಾಹವಾಗಿದ್ದ ಮಹಿಳೆಯೊಬ್ಬಳು ತನ್ನ ಗಂಡನನ್ನು ಬಿಟ್ಟು, ರಾತ್ರೋರಾತ್ರಿ ಪ್ರಿಯಕರನೊಂದಿಗೆ ಪರಾರಿಯಾಗಿ, ಕಾರಿನಲ್ಲೇ ಮದುವೆಯಾಗಿರುವ ಘಟನೆ ಹಾಸನದ ಗೆರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಮೂಲಗಳ ಪ್ರಕಾರ, ಈ ಮಹಿಳೆಗೆ ಸುಮಾರು ಎಂಟು ವರ್ಷಗಳ ಹಿಂದೆ ತನ್ನ ಸಂಬಂಧಿಕನೊಬ್ಬನೊಂದಿಗೆ ವಿವಾಹವಾಗಿತ್ತು. ದಾಂಪತ್ಯ ಜೀವನದಲ್ಲಿ ಹೊಂದಾಣಿಕೆಯಾಗದೆ ಗಂಡ-ಹೆಂಡತಿ ನಡುವೆ ಪದೇಪದೇ ಕಲಹಗಳು ನಡೆಯುತ್ತಿದ್ದವು. ಈ ನಡುವೆ ಮಹಿಳೆಗೆ ಮತ್ತೊಬ್ಬನೊಂದಿಗೆ ಪ್ರೇಮ ಸಂಬಂಧವೂ ಇತ್ತು.

ಕುಟುಂಬ ಮಧ್ಯಸ್ಥಿಕೆ ಮಾಡಿದ್ರು ಸರಿ ಹೋಗಿಲ್ಲ

ಈ ಸಂಬಂಧ ಕುಟುಂಬಸ್ಥರು ಹಲವು ಬಾರಿ ಮಧ್ಯಸ್ಥಿಕೆ ವಹಿಸಿ ರಾಜಿ ಪಂಚಾಯಿತಿ ನಡೆಸಿ, ಮಹಿಳೆಯನ್ನು ಗಂಡನೊಂದಿಗೆ ಜೀವನ ಮುಂದುವರಿಸಲು ಮನವೊಲಿಸಲು ಪ್ರಯತ್ನಿಸಿದ್ದರು. ಇದೇ ವಿಚಾರ ಪೊಲೀಸ್ ಠಾಣೆ ಮೆಟ್ಟಲೇರಿ ಗೆರೂರು ಪೊಲೀಸ್ ಠಾಣೆಯಲ್ಲಿ ಇಬ್ಬರ ನಡುವೆ ಮಾತುಕತೆ ನಡೆಸಲಾಗಿತ್ತು. ಬಳಿಕ ಪೊಲೀಸರೇ ಮಹಿಳೆಯನ್ನು ಸಾಂತ್ವನ ಕೇಂದ್ರಕ್ಕೂ ಕಳುಹಿಸಿ, ಕುಟುಂಬ ಜೀವನ ಸರಿಪಡಿಸುವ ಪ್ರಯತ್ನ ಮಾಡಿದ್ದರು.

ರಾತ್ರೋ ರಾತ್ರಿ ಪರಾರಿ!

ಈ ಎಲ್ಲ ಸತತ ಪ್ರಯತ್ನಗಳ ಬಳಿಕವೂ ಮಹಿಳೆ “ನಾನು ಗಂಡನೊಂದಿಗೆ ಬದುಕುತ್ತೇನೆ” ಎಂದು ನಂಬಿಕೆ ಮೂಡಿಸಿದಳು. ಆದರೆ ಅದು ಕೇವಲ ನಾಟಕವಾಗಿದ್ದು, ಸಾಂತ್ವನ ಕೇಂದ್ರದಿಂದ ಗಂಡನ ಮನೆಗೆ ಮರಳಿದ ಕೆಲವೇ ಸಮಯದಲ್ಲಿ ತನ್ನ ಪ್ರಿಯಕರನನ್ನು ಸಂಪರ್ಕಿಸಿ, ರಾತ್ರೋರಾತ್ರಿ ಆತನೊಂದಿಗೆ ಪರಾರಿಯಾಗಿದ್ದಾಳೆ.

ಪರಾರಿಯಾದ ನಂತರ, ಮಹಿಳೆ ತನ್ನ ಪ್ರಿಯಕರನೊಂದಿಗೆ ಕಾರಿನಲ್ಲೇ ಮದುವೆಯಾಗಿದ್ದಾಳೆ. ಕಾರಿನೊಳಗೇ ಪ್ರಿಯಕರನು ಆಕೆಗೆ ತಾಳಿ ಕಟ್ಟಿದ್ದು, ಕಾಲಿಗೆ ಕಾಲುಂಗುರ ತೊಡಿಸಿರುವ ದೃಶ್ಯಗಳು ವಿಡಿಯೋದಲ್ಲಿ ದಾಖಲಾಗಿದ್ದು, ಅದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಘಟನೆಯಿಂದ ಮಹಿಳೆಯ ಕುಟುಂಬಸ್ಥರು ಮತ್ತು ಗಂಡ ಪ್ರಕಾಶ್ ತೀವ್ರ ಆಘಾತಕ್ಕೊಳಗಾಗಿದ್ದಾರೆ. ತನ್ನನ್ನು ಮೋಸಗೊಳಿಸಲಾಗಿದೆ ಎಂದು ಪತಿ ಆರೋಪಿಸಿದ್ದು, ಈ ಪ್ರಕರಣದ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ, ಹಾಸನದಲ್ಲಿ ನಡೆದ ಈ ಘಟನೆ ದಾಂಪತ್ಯ ಸಂಬಂಧಗಳ ವಿಶ್ವಾಸ, ಕುಟುಂಬ ವ್ಯವಸ್ಥೆ ಹಾಗೂ ಸಾಮಾಜಿಕ ಮೌಲ್ಯಗಳ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿದೆ.



Source link

Leave a Reply

Your email address will not be published. Required fields are marked *