
ಹೈನುಗಾರಿಕೆ ರೈತನ ಪ್ರಬಲ ಅಸ್ತ್ರವಾಗಿದೆ. ಕೃಷಿಯಿಂದಲೇ ಜೀವನ ಸಾಗಿಸುವ ರೈತರು ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಳ್ಳಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಆಶಯವಾಗಿದೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.
ಚಿಕ್ಕಬಳ್ಳಾಪುರ (ಏ.13): ಸಹಕಾರ ಕ್ಷೇತ್ರ ರೈತರ ಬದುಕಿನ ಜೀವನಾಡಿ. ಅಲ್ಲಿ ಭ್ರಷ್ಟಾಚಾರಿಗಳ ನುಸುಳುವಿಕೆ ಆಗಬಾರದು. ಪಾರದರ್ಶಕತೆ ಇರಬೇಕು. ಆಗಲೇ ಸಹಕಾರಿ ಕ್ಷೇತ್ರ ಉಳಿಯಲು ಸಾಧ್ಯ. ಹೈನುಗಾರಿಕೆ ರೈತನ ಪ್ರಬಲ ಅಸ್ತ್ರವಾಗಿದೆ. ಕೃಷಿಯಿಂದಲೇ ಜೀವನ ಸಾಗಿಸುವ ರೈತರು ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಳ್ಳಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಆಶಯವಾಗಿದೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.
ನಗರದ ಕೆಇಬಿ ಸಮುದಾಯ ಭವನದಲ್ಲಿ ಭಾನುವಾರ ಚಿಮುಲ್‌ನಿಂದ ಪೆರೆಸಂದ್ರ ಕ್ಷೇತ್ರದ ಹಾಲು ಉತ್ಪಾದಕ ಸಹಕಾರ ಸಂಘಗಳ ಪರಿಮಾಣ ಮತ್ತು ಗುಣಮಟ್ಟ ಹೆಚ್ಚಿಸಲು ಪ್ರಾದೇಶಿಕ ಸಭೆ ಮತ್ತು ವಿವಿಧ ಸೌಲಭ್ಯಗಳ ವಿತರಣೆ ಹಾಗೂ ನೂತನ ನಿರ್ದೆಶಕರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕೋಲಾರದಿಂದ ಚಿಕ್ಕಬಳ್ಳಾಪುರ ವಿಭಜನೆಯಾಗಿ 17 ವರ್ಷ ಕಳೆದರೂ ಹಾಲು ಒಕ್ಕೂಟ ಮತ್ತು ಡಿಸಿಸಿ ಬ್ಯಾಂಕ್ ಪ್ರತ್ಯೇಕಗೊಂಡಿಲ್ಲದರ ಬಗ್ಗೆ ಅಸಮಾಧಾನ ಇತ್ತು. ಬೇರೆ ಜಿಲ್ಲೆಯಲ್ಲಿ ಹೋಗಿ ನಮ್ಮ ವ್ಯವಸ್ಥೆ ವ್ಯವಹಾರ ನಡೆಸುವುದು ಕಷ್ಟವಾಗುತ್ತದೆ.
ಒಳ್ಳೆ ಪ್ರಾಮಾಣಿಕ ವ್ಯಕ್ತಿ
ಪ್ರತ್ಯೇಕ ಮಾಡಿಕೊಡಿ ಎಂದು ಇಂದಿನ ಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್ ಮನವಿ ಮಾಡಿದಾಗ ನಡೆದ ಪ್ರಯತ್ನವೇ ಇಂದು ಪ್ರತ್ಯೇಕ ಮೆಘಾ ಡೈರಿ. ಚಿಮುಲ್‌ಗೆ ಮೊದಲ ಚುನಾವಣೆ ನಡೆದು, ಪ್ರಥಮ ಚಿಮುಲ್ ನಿರ್ದೇಶಕರಾಗಿ ಉತ್ತಮ ಸಹಕಾರಿ ಕೆ.ವಿ.ನಾಗರಾಜ್ ಆಯ್ಕೆಯಾಗಿ, ಒಳ್ಳೆ ಪ್ರಾಮಾಣಿಕ ವ್ಯಕ್ತಿಯಾದ ಮಂಜುನಾಥರೆಡ್ಡಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಸ್ತುವಾರಿ ಸಚಿವರ ಹಸ್ತಕ್ಷೇಪ ಕಡಿಮೆಯಾಗುತ್ತದೆಂಬ ನಂಬಿಕೆ ನಮಗೆ ಉಂಟಾಗಿದೆ ಎಂದು ಹೇಳಿದರು.
ಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಾಕಷ್ಟು ರೈತರು ಹೈನುಗಾರಿಕೆಯಿಂದ ವಿಮುಖರಾಗುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಚಿಮುಲ್ ನೂತನವಾಗಿ ಆಯ್ಕೆಯಾಗಿರುವ ಕೆ.ವಿ.ನಾಗಾರಾಜ್ ಅವರಿಗೆ ಹೋಬಳಿ ಮಟ್ಟದ ಹಾಲು ಉತ್ಪಾದಕರ ಸಹಕಾರ ಸಂಘಗಳ ಅದ್ಯಕ್ಷರು ಸನ್ಮಾನಿಸಿದರು. ಇದೇ ವೇಳೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಟ್ಟಡಗಳಿಗೆ ಅನುದಾನ ಹಾಗೂ ಸಂಘಗಳ ಕಚೇರಿ ಉನ್ನತೀಕರಣಕ್ಕೆ ಕಂಪ್ಯೂಟರ್, ಯುಪಿಎಸ್ ಲ್ಯಾಬ್ ಸಲಕರಣೆಗಳ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಚಿಮುಲ್ ವ್ಯೆವಸ್ಥಾಪಕ ನಿರ್ಧೇಶಕ ಡಾ.ಎ.ಸಿ. ಶ್ರೀನಿವಾಸ ಗೌಡ, ವ್ಯವಸ್ಥಾಪಕ ಎಂ.ಶ್ರೀನಿವಾಸರೆಡ್ಡಿ, ಒಕ್ಕೂಟ ಶಿಬಿರ ವ್ಯೆವಸ್ಥಾಪಕ ಮನೋರಂಜನ್ ರೆಡ್ಡಿ, ಚಿಮುಲ್ ವಿಶೇಷ ಅಧಿಕಾರಿಗಳಾದ ಡಿ.ಮಂಜುನಾಥ, ಕೆ.ಎನ್.ಸದಾಶಿವ, ನಗರಸಭೆ ಮಾಜಿ ಅಧ್ಯಕ್ಷ ಎ.ಗಜೇಂದ್ರ, ಮುಖಂಡರಾದ ಕೆ.ಅರ್.ರೆಡ್ಡಿ, ಚಿಕ್ಕಗೆರಿಗರೆಡ್ಡಿ, ಅಣಕನಗೊಂದಿ ರಂಗಪ್ಪ, ಆವಲಗುರ್ಕಿ ರಾಜಣ್ಣ, ಪ್ರೇಮಕುಮಾರಿ, ಅವಲಕೊಂಡರಾಯಪ್ಪ, ಚೆನ್ನಕೇಶವರೆಡ್ಡಿ, ನಾರಾಯಣಸ್ವಾಮಿ, ಮತ್ತಿತರರು ಇದ್ದರು.