Headlines

ತಾಯಿ ನಿಧನರಾದಾಗ ಹೇಗನಿಸುತ್ತದೆ? ಪಾಪರಾಜಿಗಳ ಪ್ರಶ್ನೆಗೆ ನಟ ಜಾಕಿ ಶ್ರಾಫ್ ಗರಂ

ತಾಯಿ ನಿಧನರಾದಾಗ ಹೇಗನಿಸುತ್ತದೆ? ಪಾಪರಾಜಿಗಳ ಪ್ರಶ್ನೆಗೆ ನಟ ಜಾಕಿ ಶ್ರಾಫ್ ಗರಂ


ತಾಯಿ ನಿಧನರಾದಾಗ ಹೇಗಿರುತ್ತದೆ? ಪಾಪರಾಜಿಗಳ ಪ್ರಶ್ನೆಗೆ ನಟ ಜಾಕಿ ಶ್ರಾಫ್ ಗರಂ

ಭಾರತೀಯ ಚಿತ್ರರಂಗದ ಲೇಜೆಂಡರಿ ಗಾಯಕಿ ಆಶಾ ಭೋಸ್ಲೆ (ಆಶಾ ಭೋಂಸ್ಲೆ) ಅವರ ಅಗಲಿಕೆಯಿಂದ ಅಭಿಮಾನಿಗಳಿಗೆ, ಆಪ್ತರಿಗೆ, ಕುಟುಂಬದವರಿಗೆ ತೀವ್ರ ನೋವಾಗಿದೆ. ಏಪ್ರಿಲ್ 12 ರಂದು ನಿಧನರಾದ ಅವರ ಅಂತಿಮ ಸಂಸ್ಕಾರ ಇಂದು (ಏ.13) ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸಕಲ ಸರ್ಕಾರಿ ಗೌರವಕ್ಕೆ ನೆರವಾಯಿತು. ಈ ಸಂದರ್ಭದಲ್ಲಿ ಅನೇಕ ಗಣ್ಯರು ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು. ಆದರೆ, ಅಲ್ಲಿ ನಡೆದ ಒಂದು ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಖ್ಯಾತ ನಟ ಜಾಕಿ ಶ್ರಾಫ್ ಅವರು ಪಾಪರಾಜಿಗಳ (ಪಾಪರಾಜಿ) ವರ್ತನೆಗೆ ಬೇಸರಗೊಂಡು ಗರಂ ಆದ ವಿಡಿಯೋ ಈಗ ವೈರಲ್ ಆಗಿದೆ.

ಅಂತಿಮ ಸಂಸ್ಕಾರದ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್, ಟಬು, ರಣವೀರ್ ಸಿಂಗ್, ಅಮೀರ್ ಖಾನ್, ವಿಕ್ಕಿ ಕೌಶಲ್ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ ಜಾಕಿ ಶ್ರಾಫ್ ಅವರನ್ನು ಕಂಡು ಪಾಪರಾಜಿಗಳು ಮುಗಿಬಿದ್ದರು. ಆಶಾ ಭೋಸ್ಲೆ ಅವರ ನಿಧನದ ಬಗ್ಗೆ ‘ನಿಮಗೆ ಹೇಗನ್ನಿಸುತ್ತಿದೆ’ ಎಂಬ ಸಾಮಾನ್ಯ ಹಾಗೂ ವಿವೇಚನಾರಹಿತ ಪ್ರಶ್ನೆಯನ್ನು ಅವರು ನಟನಿಗೆ ಕೇಳಿದರು.

ಪಾಪರಾಜಿಗಳ ಈ ಪ್ರಶ್ನೆಯಿಂದ ತೀವ್ರ ಅಸಮಾಧಾನಗೊಂಡ ಜಾಕಿ ಶ್ರಾಫ್, ಅಲ್ಲೇ ನಿಂತು ಅವರಿಗೆ ಪಾಠ ಮಾಡಿದರು. ಪಾಪರಾಜಿಗಳಿಗೆ ಅವರು ಮರುಪ್ರಶ್ನೆ ಕೇಳಿದರು. ‘ಯಾರದ್ದಾದರೂ ತಾಯಿ ತೀರಿಕೊಂಡಾಗ ಹೇಗನ್ನಿಸುತ್ತದೆ? ನಮ್ಮ ತಾಯಿ ನಿಧನರಾದರು. ಯಾರಾದರೂ ತಮ್ಮ ತಾಯಿಯನ್ನು ಕಳೆದುಕೊಂಡಾಗ ಹೇಗನ್ನಿಸುತ್ತದೆ ಎಂದು ಕೇಳುವುದರಲ್ಲಿ ಅರ್ಥವಿದೆಯೇ? ನೀವು ಈ ಪರಿಸ್ಥಿತಿಯಲ್ಲಿ ಇದ್ದಿದ್ದರೆ ಹೇಗಿರುತ್ತದೆ’ ಎಂದು ಅವರು ಕೇಳಿದರು.

 

Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ

 

ಬಾಲಿವುಡ್ ಬಬಲ್ (@bollywoodbubble) ಹಂಚಿಕೊಂಡ ಪೋಸ್ಟ್

ಜಾಕಿ ಶ್ರಾಫ್ ಅವರ ಪ್ರಶ್ನೆಗೆ ಉತ್ತರಿಸಿದ ಪಾಪರಾಜಿಗಳು ‘ಬಹಳ ಬೇಸರವಾಗುತ್ತದೆ’ ಎಂದು ಉತ್ತರಿಸಿದರು. ತಕ್ಷಣ ಪ್ರತಿಕ್ರಿಯೆ ನೀಡಿದ ಜಾಕಿ, ‘ಅಷ್ಟೇ, ಅಲ್ಲಿಗೆ ವಿಷಯ ಮುಗಿಯಿತು. ಇಂತಹ ಸಮಯದಲ್ಲಿ ಈ ರೀತಿಯ ಮಾತುಗಳು ಸರಿಯಲ್ಲ. ಬಿಟ್ಟುಬಿಡಿ ಸಹೋದರರೇ, ಮನೆಗೆ ಹೋಗಿ’ ಎಂದು ಹೇಳಿ ಅಲ್ಲಿಂದ ಹೊರನಡೆದರು. ಜಾಕಿ ಶ್ರಾಫ್ ಅವರು ಕ್ಲಾಸ್ ತೆಗೆದುಕೊಂಡ ಈ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ಆಶಾ ಭೋಸ್ಲೆ ಬದಲಿಗೆ ಬೇರೆ ಫೋಟೋ ಹಂಚಿಕೊಂಡು ಸಂತಾಪ ಸೂಚಿಸಿದ ಅಥಿಯಾ ಶೆಟ್ಟಿ; ಸಖತ್ ಟ್ರೋಲ್

ಅಂತಿಮ ಸಂಸ್ಕಾರದಂತಹ ಗಂಭೀರ ಮತ್ತು ಜನಪ್ರಿಯವಾದ ಸೆಲೆಬ್ರಿಟಿಗಳ ಇಂತಹ ಪ್ರಶ್ನೆಗಳನ್ನು ಕೇಳುವುದು ಎಷ್ಟು ಸರಿ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಜಾಕಿ ಶ್ರಾಫ್ ಅವರ ಸಮಯೋಚಿತ ಪ್ರತಿಕ್ರಿಯೆ ಮತ್ತು ಆಶಾ ಭೋಸ್ಲೆ ಅವರ ಮೇಲೆ ಅವರಿಗಿದ್ದ ಗೌರವವನ್ನು ಅಭಿಮಾನಿಗಳು ಶ್ಲಾಘಿಸುತ್ತಿದ್ದಾರೆ. ಆಶಾ ಭೋಸ್ಲೆ ಅವರು ಭಾರತೀಯ ಸಂಗೀತಕ್ಕೆ ನೀಡಿದ ಕೊಡುಗೆ ಅಪಾರ. ಅವರ ಅಗಲಿಕೆಗೆ ಚಿತ್ರರಂಗದ ಕಂಬನಿ ಮಿಡಿಯುತ್ತಿದೆ, ಜಾಕಿ ಶ್ರಾಫ್ ಅವರ ಈ ಆಕ್ರೋಶವು ಪರೋಕ್ಷವಾಗಿ ಇಡೀ ಚಿತ್ರರಂಗದ ನೋವನ್ನು ಪ್ರತಿಬಿಂಬಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *