Sonu Srinivas Gowda: ಬಿಗ್ ಬಾಸ್ ಕನ್ನಡ ಶೋನಲ್ಲಿ ಕಾಣಿಸಿಕೊಂಡಿದ್ದ ಸೋನು ಶ್ರೀನಿವಾಸ್ ಗೌಡ ಅವರು ಬ್ರೇಕಪ್ ಆಗಿದ್ದರ ಬಗ್ಗೆ, ಯಾರು ತೀರಿಕೊಂಡರು ಎಂಬ ಬಗ್ಗೆಯೂ ಕೂಡ ಮಾಹಿತಿ ಹಂಚಿಕೊಂಡಿದ್ದಾರೆ. ಈ ಕುರಿತು ಅವರು ವಿಶೇಷ ವಿಡಿಯೋವನ್ನು ಕೂಡ ಮಾಡಿದ್ದಾರೆ.
ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 1 ರಲ್ಲಿ ಸೋನು ಗೌಡ ಅವರಿಗೆ ಬ್ರೇಕಪ್ ಆಗಿದೆ, ಕಣ್ಣೀರು ಹಾಕಿದ್ದಾರೆ ಎನ್ನಲಾದ ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈಗ ನಿಜಕ್ಕೂ ಆಗಿದ್ದೇನು ಎಂದು ವಿಡಿಯೋ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
ನನಗೆ ಬ್ರೇಕಪ್ ಆಗಿಲ್ಲ
ನನಗೆ ಲೈಫ್‌ನಲ್ಲಿ ನನ್ನ ಮನೆಯಲ್ಲಿರುವ ನಾಯಿಗಳು ನನಗೆ ತುಂಬ ಫೇವರಿಟ್ ಇದ್ದಾರೆ. ಬ್ರೇಕಪ್ ಆಯ್ತಾ ಅಂತ ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ನನಗೆ ಯಾವುದೇ ಥರ ಬ್ರೇಕಪ್ ಆಗಿಲ್ಲ. ಅನಾರೋಗ್ಯದಿಂದ ನನ್ ಫ್ರೆಂಡ್ ತೀರಿಕೊಂಡಿದ್ದಾರೆ ಎಂದು ಸೋನು ಗೌಡ ಹೇಳಿದ್ದಾರೆ.
ನಂಗೆ ಆಗ ಮಾತಾಡೋಕೆ ಆಗಿಲ್ಲ
ನಾಲ್ಕು ವರ್ಷಗಳ ಹಿಂದೆ ನಾವು ರಿಲೇಶನ್‌ಶಿಪ್‌ನಲ್ಲಿದ್ದೆವು, ಅದೇನೋ ಆಗಿ ಬ್ರೇಕಪ್ ಆಯ್ತು. ಅದನ್ನು ಮರೆಯಬೇಕು ಎಂದುಕೊಂಡರೂ ಕೂಡ ಆಗುತ್ತಿಲ್ಲ, ಪರವಾಗಿಲ್ಲ. ನನ್ನನ್ನು ಕಾಂಟ್ಯಾಕ್ಟ್ ಮಾಡೋಕೆ ಅವರು ತುಂಬ ಟ್ರೈ ಮಾಡಿದ್ದಾರೆ. ಆದರೆ ನನಗೆ ಸಿಗೋಕೆ, ಮಾತನಾಡೋಕೆ ಆಗಿಲ್ಲ ಎಂದು ಪಶ್ಚಾತ್ತಾಪ ಆಗ್ತಿದೆ ಎಂದು ಸೋನು ಗೌಡ ಹೇಳಿದ್ದಾರೆ.
ನಂಗೆ ಫೀಲ್ ಆಗ್ತಿದೆ
ನನಗೆ ಆ ವ್ಯಕ್ತಿ ಮೇಲ್ ಮಾಡಿದ್ದರು, ಆದರೆ ನಾನು ಮೇಲ್ ಒಪನ್ ಮಾಡೋದು ಕಡಿಮೆ. ಹೀಗಾಗಿ ನನಗೆ ತುಂಬ ಬೇಸರ ಆಗ್ತಿದೆ. ಇದು ನಾಟಕ ಅಲ್ಲ, ನಿಜವಾಗಿಯೂ ನನಗೆ ಫೀಲ್ ಆಗ್ತಿದೆ. ನೀವೆಲ್ಲ ನೆಗೆಟಿವ್ ಮಾತನಾಡಿದರೂ ಕೂಡ ನಾನು ತಲೆ ಕೆಡಿಸಿಕೊಳ್ಳಲ್ಲ ಎಂದು ಸೋನು ಗೌಡ ಹೇಳಿದ್ದಾರೆ.
ಕೊನೇ ಮೆಸೇಜ್ ಏನಾಗಿತ್ತು?
ನಾಳೆ ಇರ್ತೀನೋ ಇಲ್ವೋ ನನಗೆ ಗೊತ್ತಿಲ್ಲ, ನಿನಗೆ ಮೆಸೇಜ್, ಕಾಲ್ ಮಾಡಿ ಮಾತಾಡಬೇಕು ಎಂದರೂ ಕೂಡ ಆಗಲ್ಲ ಅನಿಸುತ್ತೆ. ನನಗೆ ಏನಾದರೂ ಆದರೆ ನೋಡೋಕೆ ಬರಬೇಡ, ಫೀಲ್ ಕೂಡ ಆಗಬೇಡ, ಮುಂದೆ ಜನ್ಮ ಅಂತಿದ್ರೆ ನನಗೆ ಸಿಗು, ಮಿಸ್ ಯು ಮುದ್ದು ಎಂದು ಅವರು ಮಾರ್ಚ್ 24 ನೇ ತಾರೀಖಿಗೆ ಮೇಲ್ ಮಾಡಿದ್ದಾರೆ. ಸಾವಿರ ಮೇಲ್ ಕಳಿಸಿದ್ರೂ ಕೂಡ, ಈ ಮೇಲ್ ನನಗೆ ಕಾಡ್ತಿದೆ ಎಂದು ಸೋನು ಗೌಡ ಹೇಳಿದ್ದಾರೆ.
ನೆಗೆಟಿವ್ ಕಾಮೆಂಟ್ ಮಾಡ್ತಾರೆ
ಅವರು ಬದುಕಿದ್ದಾಗ ಮುಖ ಕೊಟ್ಟು ಮಾತಾಡೋಕೆ ಆಗಿಲ್ಲ ಎಂದು ಬೇಸರ ಆಯ್ತು. ನನಗೆ ಬೇಜಾರಾಗತ್ತೆ, ಫೀಲ್ ಆಗತ್ತೆ, ನಾಲ್ಕು ವರ್ಷ ಲವ್ ಮಾಡಿದ್ದೀವಿ, ಹಗ್ ಮಾಡಿದ್ದೀವಿ. ಈ ಬೇಸರದಲ್ಲಿ ವಿಡಿಯೋ ಮಾಡಿದ್ರೆ ಸಿಂಪಥಿ ಎಂದೆಲ್ಲ ನೆಗೆಟಿವ್ ಕಾಮೆಂಟ್ ಮಾಡುತ್ತಾರೆ. ನನಗೆ ಫೀಲ್ ಆಗಿರೋದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ರೆ ತಪ್ಪೇನು? ಎಂದು ಸೋನು ಗೌಡ ಬೇಸರ ಹೊರಹಾಕಿದ್ದಾರೆ.
ಪಾಸಿಟಿವ್ ಮಾತಾಡಿದ್ದು ಖುಷಿಯಾಗಿದೆ!
ಇಷ್ಟ ಆಗಿ ಬಟ್ಟೆ ಹಾಕಿಕೊಂಡರೆ ಮನೆಯಲ್ಲಿ ಯಾರೂ ಕೇಳೋರಿಲ್ವಾ ಅಂತಾರೆ, ನನಗೆ ಅನಿಸಿದ್ದು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದರೆ ಹೀಗೆಲ್ಲ ಮಾತಾಡ್ತಾರೆ. ಕೆಲವರು ಪಾಸಿಟಿವ್ ಆಗಿ ಮಾತನಾಡಿದ್ದು, ಖುಷಿಯಾಗ್ತಿದೆ ಎಂದು ಸೋನು ಗೌಡ ಅವರು ಹೇಳಿದ್ದಾರೆ.
