Headlines

ಜಿಬಿಎ ಯಡವಟ್ಟಿನ ನಿರ್ಧಾರಕ್ಕೆ ಕಂಗಲಾದ ಬೆಂಗಳೂರು ನಿವಾಸಿಗಳು, ಟ್ಯಾಕ್ಸ್ ಕಟ್ಟಬೇಕು ಅಂದ್ರೆ ಕಸದ ಲೆಕ್ಕ ಕೊಡಬೇಕಂತೆ! | Bengaluru Apartment Residents Face Property Tax Issues Due To Mandatory Waste Data Rule Gdp

ಜಿಬಿಎ ಯಡವಟ್ಟಿನ ನಿರ್ಧಾರಕ್ಕೆ ಕಂಗಲಾದ ಬೆಂಗಳೂರು ನಿವಾಸಿಗಳು, ಟ್ಯಾಕ್ಸ್ ಕಟ್ಟಬೇಕು ಅಂದ್ರೆ ಕಸದ ಲೆಕ್ಕ ಕೊಡಬೇಕಂತೆ! | Bengaluru Apartment Residents Face Property Tax Issues Due To Mandatory Waste Data Rule Gdp



ಜಿಬಿಎ ಯಡವಟ್ಟಿನ ನಿರ್ಧಾರಕ್ಕೆ ಕಂಗಲಾದ ಬೆಂಗಳೂರು ನಿವಾಸಿಗಳು, ಟ್ಯಾಕ್ಸ್ ಕಟ್ಟಬೇಕು ಅಂದ್ರೆ ಕಸದ ಲೆಕ್ಕ ಕೊಡಬೇಕಂತೆ! | Bengaluru Apartment Residents Face Property Tax Issues Due To Mandatory Waste Data Rule Gdp

ಬೆಂಗಳೂರಿನ ಅಪಾರ್ಟ್‌ಮೆಂಟ್ ನಿವಾಸಿಗಳು ಪ್ರಾಪರ್ಟಿ ಟ್ಯಾಕ್ಸ್ ಪಾವತಿಸಲು ಕಸದ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕೆಂಬ ಹೊಸ ನಿಯಮದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆನ್‌ಲೈನ್ ಪೋರ್ಟಲ್‌ನಲ್ಲಿನ ತಾಂತ್ರಿಕ ದೋಷಗಳು ಮತ್ತು ಅವೈಜ್ಞಾನಿಕ ನಿಯಮಗಳಿಂದಾಗಿ ಸಾವಿರಾರು ಜನರು ತೆರಿಗೆ ಪಾವತಿಸಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.

ಬೆಂಗಳೂರು ನಗರದಲ್ಲಿನ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಇದೀಗ ಹೊಸ ತಲೆನೋವು ಎದುರಾಗಿದೆ. ಪ್ರಾಪರ್ಟಿ ಟ್ಯಾಕ್ಸ್ ಪಾವತಿ ಪ್ರಕ್ರಿಯೆಯಲ್ಲಿ ಜಿಬಿಎ (GBA) ಕೈಗೊಂಡಿರುವ ಹೊಸ ನಿರ್ಧಾರವು ಸಾವಿರಾರು ನಿವಾಸಿಗಳನ್ನು ಸಂಕಷ್ಟಕ್ಕೆ ತಳ್ಳಿದೆ. ಆನ್‌ಲೈನ್ ಮೂಲಕ ತೆರಿಗೆ ಪಾವತಿಸಲು ಪ್ರಯತ್ನಿಸುತ್ತಿರುವ ಜನರು ತಾಂತ್ರಿಕ ಹಾಗೂ ನಿಯಮಾತ್ಮಕ ಅಡಚಣೆಗಳಿಂದ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೊಸ ನಿಯಮದ ಪ್ರಕಾರ, ಪ್ರಾಪರ್ಟಿ ಟ್ಯಾಕ್ಸ್ ಪಾವತಿಸುವ ಮುನ್ನ ಪ್ರತಿಯೊಬ್ಬ ನಿವಾಸಿಯೂ ತಮ್ಮ ಮನೆ ಅಥವಾ ಅಪಾರ್ಟ್‌ಮೆಂಟ್‌ನಿಂದ ಉತ್ಪತ್ತಿಯಾಗುವ ಕಸದ ವಿವರವನ್ನು ಕಡ್ಡಾಯವಾಗಿ ನೀಡಬೇಕಾಗಿದೆ. ಒಣ ಕಸ (Dry Waste) ಮತ್ತು ಹಸಿ ಕಸ (Wet Waste) ಎಷ್ಟು ಪ್ರಮಾಣದಲ್ಲಿ ವಿಲೇವಾರಿಯಾಗುತ್ತದೆ ಎಂಬುದನ್ನು ಆನ್‌ಲೈನ್‌ನಲ್ಲಿ ದಾಖಲಿಸುವುದು ಅವಶ್ಯಕವಾಗಿದೆ. ಈ ಮಾಹಿತಿ ಸಲ್ಲಿಸದೆ ತೆರಿಗೆ ಪಾವತಿ ಪ್ರಕ್ರಿಯೆ ಮುಂದುವರಿಯುವುದಿಲ್ಲ ಎಂಬುದು ನಿವಾಸಿಗಳಿಗೆ ದೊಡ್ಡ ತೊಂದರೆಯಾಗಿದೆ.

ಖಾಸಗಿ ಸಂಸ್ಥೆಗಳ ಮೂಲಕವೇ ಕಸದ ವಿಲೇವಾರಿ

ವಿಶೇಷವಾಗಿ ಅಪಾರ್ಟ್‌ಮೆಂಟ್‌ಗಳಲ್ಲಿ ದಿನನಿತ್ಯ 100 ಕಿಲೋಗ್ರಾಂಗೂ ಅಧಿಕ ಕಸ ಸಂಗ್ರಹವಾಗುತ್ತಿರುವುದು ಸಾಮಾನ್ಯ ಸಂಗತಿ. ಆದರೆ ಈ ಪ್ರಮಾಣದ ಮೇಲಿನ ಕಸದ ವಿಲೇವಾರಿಯನ್ನು ಜಿಬಿಎ ಗಮನಿಸುವುದಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ. ಹೀಗಾಗಿ ಅನೇಕ ಅಪಾರ್ಟ್‌ಮೆಂಟ್‌ಗಳು ಖಾಸಗಿ ಸಂಸ್ಥೆಗಳ ಮೂಲಕವೇ ಕಸದ ವಿಲೇವಾರಿಯನ್ನು ಮಾಡಿಸುತ್ತಿವೆ. ಇದರ ನಡುವೆಯೇ, ಪ್ರತಿ ಫ್ಲ್ಯಾಟ್‌ನ ನಿವಾಸಿಗಳು ತಮ್ಮದೇ ಆದ ಕಸದ ಲೆಕ್ಕವನ್ನು ನೀಡಬೇಕು ಎಂಬ ನಿಯಮ ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ.

ಅದರಲ್ಲೂ ಆನ್‌ಲೈನ್ ಪೋರ್ಟಲ್‌ನಲ್ಲಿ ಕಸದ ಪ್ರಮಾಣವನ್ನು ನಮೂದಿಸುವಾಗ ಮತ್ತೊಂದು ತಾಂತ್ರಿಕ ಸಮಸ್ಯೆ ಎದುರಾಗುತ್ತಿದೆ. ಕೆಲವರು ಅಂದಾಜಿನ ಆಧಾರದ ಮೇಲೆ 1 ಕೆಜಿ ಅಥವಾ 4 ಕೆಜಿ ಎಂದು ದಾಖಲಿಸಿದರೂ, ಸಿಸ್ಟಮ್ ಅದನ್ನು ಅಂಗೀಕರಿಸುತ್ತಿಲ್ಲ. ಬದಲಾಗಿ 100 ಕೆಜಿ ಮೇಲ್ಪಟ್ಟ ಪ್ರಮಾಣವನ್ನು ಮಾತ್ರ ದಾಖಲಿಸಲು ಸೂಚನೆ ಬರುತ್ತಿರುವುದಾಗಿ ನಿವಾಸಿಗಳು ದೂರಿದ್ದಾರೆ. ಇದರಿಂದ ತೆರಿಗೆ ಪಾವತಿ ಪ್ರಕ್ರಿಯೆ ಸ್ಥಗಿತಗೊಂಡು, ಅನೇಕರು ಟ್ಯಾಕ್ಸ್ ಕಟ್ಟಲಾಗದೆ ಕಂಗಾಲಾಗಿದ್ದಾರೆ.

ಹೊಸ ನಿಯಮ ಏಕಾಏಕಿ ಜಾರಿಗೆ

ಇದಕ್ಕೂ ಮೊದಲು ಪ್ರಾಪರ್ಟಿ ಟ್ಯಾಕ್ಸ್ ಪಾವತಿಸುವ ವೇಳೆ ಕಸದ ವಿವರ ನೀಡುವಂತಹ ಯಾವುದೇ ಆಯ್ಕೆಯಿರಲಿಲ್ಲ. ಹೊಸ ನಿಯಮವನ್ನು ಏಕಾಏಕಿ ಜಾರಿಗೆ ತರುವ ಮೂಲಕ ಸರ್ಕಾರ ಹಾಗೂ ಸಂಬಂಧಿತ ಸಂಸ್ಥೆಗಳು ಜನರಿಗೆ ತೊಂದರೆ ಉಂಟುಮಾಡಿವೆ ಎಂಬ ಆಕ್ರೋಶವೂ ವ್ಯಕ್ತವಾಗುತ್ತಿದೆ.

ಬೆಂಗಳೂರು ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಸತೀಶ್ ಮಲ್ಯ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, “ಈ ನಿಯಮ ಪ್ರಾಯೋಗಿಕವಾಗಿಯೂ, ತಾಂತ್ರಿಕವಾಗಿಯೂ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತಿದೆ. ಪ್ರತಿ ಫ್ಲ್ಯಾಟ್‌ನಿಂದ ಉತ್ಪತ್ತಿಯಾಗುವ ಕಸದ ನಿಖರ ಲೆಕ್ಕ ನೀಡುವುದು ಕಷ್ಟ. ಜೊತೆಗೆ ಪೋರ್ಟಲ್‌ನಲ್ಲಿನ ದೋಷಗಳಿಂದ ತೆರಿಗೆ ಪಾವತಿ ಅಸಾಧ್ಯವಾಗುತ್ತಿದೆ. ತಕ್ಷಣವೇ ಸರ್ಕಾರ ಈ ಸಮಸ್ಯೆಯನ್ನು ಸರಿಪಡಿಸಿ, ನಿವಾಸಿಗಳಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.

ಒಟ್ಟಾರೆ, ಕಸದ ನಿರ್ವಹಣೆಯನ್ನು ಸುಧಾರಿಸುವ ಉದ್ದೇಶ ಒಳ್ಳೆಯದಾದರೂ, ಅದನ್ನು ಜಾರಿಗೆ ತರುವ ವಿಧಾನದಲ್ಲಿ ಇರುವ ದೋಷಗಳು ಇದೀಗ ಬೆಂಗಳೂರಿನ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿರುವುದು ಸ್ಪಷ್ಟವಾಗಿದೆ.



Source link

Leave a Reply

Your email address will not be published. Required fields are marked *