ಕಲಬುರಗಿ, ಜೂನ್ 25: ಕಲಬುರಗಿ (Kalaburagi) ಹೊರವಲಯದ ಪಟ್ನಾ ಗ್ರಾಮದ ಬಳಿ ಮಂಗಳವಾರ ತಡರಾತ್ರಿ ಮೂವರನ್ನು ಬರ್ಬರವಾಗಿ ಹತ್ಯೆ (Murder) ಮಾಡಲಾಗಿದೆ. ಕೊಲೆಯಾದವರನ್ನು ಸಿದ್ಧಾರೂಢ (32), ಜಗದೀಶ್ (25), ರಾಮಚಂದ್ರ (35) ಎಂದು ಗುರುತಿಸಲಾಗಿದೆ. ಹತ್ಯೆಯಾದವರು ಸಂಬಂಧಿಕರಾಗಿದ್ದಾರೆ. ತಡರಾತ್ರಿ 1.30 ರ ಸುಮಾರಿಗೆ ಡ್ರೈವರ್ ಡಾಬಾಗೆ ನುಗ್ಗಿದ ಹಂತಕರು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಹಳೆಯ ದ್ವೇಷದ ಕಾರಣ ದುಷ್ಕರ್ಮಿಗಳು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಲಬುರಗಿ ಸಬ್ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಹೆಚ್ಚಿನ ಮಾಹಿತಿ ಅಪ್ಡೇಟ್ ಆಗಲಿದೆ)
ಇದನ್ನೂ ಓದಿ: ಗಂಡನನ್ನು ಕೊಲ್ಲುವುದು ಹೇಗೆಂದು ಯೂಟ್ಯೂಬ್ನಲ್ಲಿ ಹುಡುಕಾಟ; ಕೊನೆಗೆ ಪತ್ನಿ ಆಯ್ಕೆ ಮಾಡಿಕೊಂಡ ವಿಧಾನವಿದು!
ಇದನ್ನೂ ಓದಿ
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ