Modi Trump call ಪಾಕ್ ಮಧ್ಯಸ್ಥಿತಿಕೆ ಸಂಧಾನ ವಿಫಲದ ಬಳಿಕ ಇಂದು ಮೋದಿಗೆ ಟ್ರಂಪ್ ಕರೆ, 40 ನಿಮಿಷ ಚರ್ಚೆ | Pm Modi Trump Hold 40 Minute Call On West Asia Crisis After Failed Talks In Pakistan

Modi Trump call ಪಾಕ್ ಮಧ್ಯಸ್ಥಿತಿಕೆ ಸಂಧಾನ ವಿಫಲದ ಬಳಿಕ ಇಂದು ಮೋದಿಗೆ ಟ್ರಂಪ್ ಕರೆ, 40 ನಿಮಿಷ ಚರ್ಚೆ | Pm Modi Trump Hold 40 Minute Call On West Asia Crisis After Failed Talks In Pakistan



Modi Trump call ಪಾಕ್ ಮಧ್ಯಸ್ಥಿತಿಕೆ ಸಂಧಾನ ವಿಫಲದ ಬಳಿಕ ಇಂದು ಮೋದಿಗೆ ಟ್ರಂಪ್ ಕರೆ, 40 ನಿಮಿಷ ಚರ್ಚೆ | Pm Modi Trump Hold 40 Minute Call On West Asia Crisis After Failed Talks In Pakistan

ಪಾಕ್ ಮಧ್ಯಸ್ಥಿತಿಕೆ ಸಂಧಾನ ವಿಫಲದ ಬಳಿಕ ಇಂದು ಮೋದಿಗೆ ಟ್ರಂಪ್ ಕರೆ, 40 ನಿಮಿಷ ಚರ್ಚೆ ನಡೆಸಿದ್ದಾರೆ. ಯುದ್ಧ ಹಾಗೂ ಪರಿಹಾರ, ದ್ವಿಪಕ್ಷೀಯ ಮಾತುಕತೆ ಸೇರಿದಂತೆ ಪ್ರಮುಖ ವಿಚಾರಗಳನ್ನು ಚರ್ಚಿಸಿದ್ದಾರೆ.

ನವದೆಹಲಿ (ಏ.14) ಇರಾನ್ ಹಾಗೂ ಅಮೆರಿಕ ನಡುವಿನ ಯುದ್ಧ ಸಂಘರ್ಷ ಅಂತ್ಯಗೊಳಿಸಲು ನಡೆಸಿದ ಸಂಧಾನ ಮಾತುಕತೆ ವಿಫಲಗೊಂಡಿದೆ. ಪಾಕಿಸ್ತಾನ ಮಧ್ಯಸ್ಥಿತಿಕೆ ವಹಿಸಿದ್ದ ಈ ಸಂಧಾನ ಫಲಪ್ರದವಾಗಿಲ್ಲ. ಇದರ ಬೆನ್ನಲ್ಲೇ ಇದೀಗ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಪ್ರಧಾನಿ ನರೇಂದ್ರ ಮೋದಿಗೆ ಕರೆ ಮಾಡಿ ಮಾತನಾಡಿದ್ದಾರೆ. 40 ನಿಮಿಷಗಳ ಕಾಲ ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ. ಮಧ್ಯಪ್ರಾಚ್ಯಗಳ ಯುದ್ಧ, ಹೊರ್ಮುಜ್ ಜಲಸಂಧಿ, ಶಾಂತಿಮಾತುಕತೆ, ಭಾರತ ಅಮೆರಿಕ ದ್ವಿಪಕ್ಷೀಯ ವ್ಯಾಪಾರ ವಹಿವಾಟು ಸೇರಿದಂತೆ ಪ್ರಮುಖ ವಿಚಾರಗಳ ಕುರಿತು ಚರ್ಚೆ ನಡೆದಿದೆ.

ಕದನ ವಿರಾಮ ಬಳಿಕ ನಡೆದ ಮೊದಲ ಮಾತುಕತೆ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ವಾತಾವರಣ ಮತ್ತು ಇರಾನ್ ಜೊತೆಗಿನ ಕದನ ವಿರಾಮದ ನಂತರದ ಬೆಳವಣಿಗೆಗಳ ಬಗ್ಗೆ ಇಬ್ಬರೂ ನಾಯಕರು ಚರ್ಚೆ ನಡೆಸಿದ್ದಾರೆ. ಇಬ್ಬರ ನಡುವೆ ಸುಮಾರು 40 ನಿಮಿಷಗಳ ಕಾಲ ಮಾತುಕತೆ ನಡೆದಿದೆ. ಇರಾನ್ ಹಾಗೂ ಅಮೆರಿಕ ನಡುವಿನ ಕದನ ವಿರಾಮದ ಬಳಿಕ ಮೋದಿ ಹಾಗೂ ಟ್ರಂಪ್ ನಡೆಸಿದ ಮೊದಲ ಮಾತುಕತೆ ಇದಾಗಿದೆ.

ಟ್ರಂಪ್ ಜೊತೆಗಿನ ಚರ್ಚೆ ಕುರಿತು ಮಾಹಿತಿ ಹಂಚಿಕೊಂಡ ಮೋದಿ

ಡೋನಾಲ್ಡ್ ಟ್ರಂಪ್ ತಮಗೆ ಕರೆ ಮಾಡಿ ಮಾತನಾಡಿರುವ ಕುರಿತು ಪ್ರಧಾನಿ ಮೋದಿ ಮಾಹಿತಿ ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪನೆ ಹಾಗೂ ಹೋರ್ಮುಜ್ ಜಲಸಂಧಿ ಮೂಲಕ ಸರಕು ಸಾಗಣೆಯ ವಿಚಾರದಲ್ಲಿ ಭಾರತದ ನಿಲುವನ್ನು ತಾವು ಸ್ಪಷ್ಟಪಡಿಸಿದ್ದಾಗಿ ಮೋದಿ ಹೇಳಿದ್ದಾರೆ. ಹೋರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ಮತ್ತು ಯಾವುದೇ ಅಡೆತಡೆಯಿಲ್ಲದೆ ಇರಿಸುವ ಮಹತ್ವವನ್ನು ಒತ್ತಿ ಹೇಳಿದ್ದಾಗಿ ಮೋದಿ ಬರೆದುಕೊಂಡಿದ್ದಾರೆ. ಈ ಭಾಗದಲ್ಲಿ ಉದ್ವಿಗ್ನತೆ ಕಡಿಮೆ ಮಾಡುವ ಪ್ರಯತ್ನಗಳಿಗೆ ಭಾರತ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ. ಶಾಂತಿ ಮತ್ತು ಸ್ಥಿರತೆ ಕಾಪಾಡಲು ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡಲು ಒಪ್ಪಿಕೊಂಡಿವೆ ಎಂದು ಮೋದಿ ತಿಳಿಸಿದ್ದಾರೆ.

ನನ್ನ ಸ್ನೇಹಿತ ಟ್ರಂಪ್ ಕರೆ

ನನ್ನ ಸ್ನೇಹಿತ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಫೋನ್ ಕರೆ ಬಂತು. ವಿವಿಧ ಕ್ಷೇತ್ರಗಳಲ್ಲಿ ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಹಕಾರದಲ್ಲಿ ಆಗಿರುವ ಮಹತ್ವದ ಪ್ರಗತಿಯನ್ನು ನಾವು ಪರಿಶೀಲಿಸಿದೆವು. ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ‘ವ್ಯಾಪಕ ಜಾಗತಿಕ ವ್ಯೂಹಾತ್ಮಕ ಪಾಲುದಾರಿಕೆ’ಯನ್ನು (Comprehensive Global Strategic Partnership) ಮತ್ತಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ. ಪಶ್ಚಿಮ ಏಷ್ಯಾದ ಪರಿಸ್ಥಿತಿಯ ಬಗ್ಗೆಯೂ ನಾವು ಚರ್ಚೆ ನಡೆಸಿದೆವು. ಹೋರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ಮತ್ತು ಯಾವುದೇ ಅಡೆತಡೆಯಿಲ್ಲದೆ ಇರಿಸುವ ಮಹತ್ವವನ್ನು ನಾವು ಒತ್ತಿ ಹೇಳಿದ್ದೇವೆ ಎಂದು ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.



Source link

Leave a Reply

Your email address will not be published. Required fields are marked *