Headlines

Kichcha Sudeep ಸೋದರಳಿಯನ ಮ್ಯಾಂಗೋ ಪಚ್ಚ ಚಿತ್ರದಲ್ಲಿ ಡಾಲಿ ಧನಂಜಯ: ಯಾವ ಪಾತ್ರ? | Daali Dhananjaya Plays Cameo In Sanchith Sanjeev Mango Pachcha Gvd

Kichcha Sudeep ಸೋದರಳಿಯನ ಮ್ಯಾಂಗೋ ಪಚ್ಚ ಚಿತ್ರದಲ್ಲಿ ಡಾಲಿ ಧನಂಜಯ: ಯಾವ ಪಾತ್ರ? | Daali Dhananjaya Plays Cameo In Sanchith Sanjeev Mango Pachcha Gvd



Kichcha Sudeep ಸೋದರಳಿಯನ ಮ್ಯಾಂಗೋ ಪಚ್ಚ ಚಿತ್ರದಲ್ಲಿ ಡಾಲಿ ಧನಂಜಯ: ಯಾವ ಪಾತ್ರ? | Daali Dhananjaya Plays Cameo In Sanchith Sanjeev Mango Pachcha Gvd

ಡಾಲಿ ಧನಂಜಯ ಪಾತ್ರದ ಚಿತ್ರೀಕರಣ ಮುಗಿದಿದೆ. ‘ಮ್ಯಾಂಗೋ ಪಚ್ಚ’ ಚಿತ್ರದ ಮುಂದುವರಿದ ಭಾಗ ಬರಲಿದೆ ಎನ್ನಲಾಗಿದ್ದು, ಡಾಲಿ ಧನಂಜಯ ಪಾತ್ರವೂ ಪಾರ್ಟ್‌ 2ಗೆ ಲೀಡ್‌ ಕೊಡುವಂತೆ ಚಿತ್ರೀಕರಣ ಮಾಡಲಾಗಿದೆಯಂತೆ.

ಕಿಚ್ಚ ಸುದೀಪ್‌ ಅವರ ಅಕ್ಕನ ಮಗ ಸಂಚಿತ್ ಸಂಜೀವ್‌ ನಟನೆಯ ‘ಮ್ಯಾಂಗೋ ಪಚ್ಚ’ ಚಿತ್ರದ ವಿಶೇಷ ಪಾತ್ರದಲ್ಲಿ ಡಾಲಿ ಧನಂಜಯ ನಟಿಸಿದ್ದಾರೆ ಎನ್ನಲಾಗಿದೆ. ವಿಶೇಷ ಎಂದರೆ ಡಾಲಿ ಪಾತ್ರದ ಚಿತ್ರೀಕರಣವನ್ನು ಸುದೀಪ್‌ ಅವರು ಖುದ್ದಾಗಿ ಸೆಟ್ಟಿಗೆ ಬಂದು ನಿರ್ದೇಶನ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಡಾಲಿ ಪಾತ್ರದ ಚಿತ್ರೀಕರಣ ಮುಗಿದಿದೆ. ‘ಮ್ಯಾಂಗೋ ಪಚ್ಚ’ ಚಿತ್ರದ ಮುಂದುವರಿದ ಭಾಗ ಬರಲಿದೆ ಎನ್ನಲಾಗಿದ್ದು, ಡಾಲಿ ಧನಂಜಯ ಪಾತ್ರವೂ ಪಾರ್ಟ್‌ 2ಗೆ ಲೀಡ್‌ ಕೊಡುವಂತೆ ಚಿತ್ರೀಕರಣ ಮಾಡಲಾಗಿದೆಯಂತೆ. ವಿವೇಕ್‌ ನಿರ್ದೇಶನದ ಈ ಚಿತ್ರದಲ್ಲಿ ಕಾಜಲ್‌ ಕುಂದರ್‌ ನಾಯಕಿ.

1.2 ಕೋಟಿಗೆ ಮ್ಯಾಂಗೋ ಪಚ್ಚ ಆಡಿಯೋ ರೈಟ್ಸ್‌ ಸೇಲ್‌

ನಟ ಸುದೀಪ್‌ ಅಕ್ಕನ ಮಗ ಸಂಚಿತ್‌ ಸಂಜೀವ್‌ ಅಭಿನಯದ ‘ಮ್ಯಾಂಗೋ ಪಚ್ಚ’ ಚಿತ್ರದ ಆಡಿಯೋ ಹಕ್ಕುಗಳು ದೊಡ್ಡ ಮೊತ್ತಕ್ಕೆ ಮಾರಾಟ ಆಗಿವೆ. ಪ್ರತಿಷ್ಠಿತ ಸರೆಗಮಪ ಆಡಿಯೋ ಸಂಸ್ಥೆ 1.2 ಕೋಟಿಗೆ ಆಡಿಯೋ ರೈಟ್ಸ್‌ ಕೊಂಡಿದೆ ಎನ್ನಲಾಗಿದೆ. ಹೊಸ ನಟರ ಚಿತ್ರಗಳ ಆಡಿಯೋ ರೈಟ್ಸ್‌ ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟ ಆಗಿರುವುದು ವಿರಳ. ಚರಣ್‌ ರಾಜ್‌ ಸಂಗೀತ ಸಂಯೋಜಿಸಿದ್ದಾರೆ.

ಮೈಸೂರಿನ ಹಿನ್ನೆಲೆಯಲ್ಲಿ ನಡೆಯುವ ಕ್ರೈಮ್ ಡ್ರಾಮಾವನ್ನು ‘ಮಾಂಗೋ ಪಚ್ಚ’ ಚಿತ್ರ ಹೊಂದಿದೆ. ಈ ಕಥೆಯು 2001 ರಿಂದ 2011 ರವರೆಗಿನ ಒಂದು ದಶಕದ ಅವಧಿಯನ್ನು ಒಳಗೊಂಡಿದೆ. ಮೈಸೂರಿನ ವಿವಿಧ ಕಾಲಘಟ್ಟಗಳನ್ನು ಮತ್ತು ಅಲ್ಲಿ ನಡೆಯುವ ಸರಣಿ ಘಟನೆಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆಯಂತೆ.

ಸಂಚಿತ್‌, ಕಾಜಲ್ ಕುಂದರ್ ಜೊತೆಗೆ ಈ ಚಿತ್ರದಲ್ಲಿ ಮಯೂರ್ ಪಟೇಲ್, ಭಾವನಾ, ಹಂಸ, ಹರಿಣಿ ಶ್ರೀಕಾಂತ್, ಜೈ ಗೋಪಿನಾಥ್ ಮತ್ತು ಪ್ರಶಾಂತ್ ಹಿರೇಮಠ್ ಸೇರಿದಂತೆ ಮುಂತಾದವರು ನಟಿಸಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ ಮಾಡಿದ್ದು, ಚರಣ್ ರಾಜ್ ಸಂಗೀತ ನೀಡಿದ್ದಾರೆ.



Source link

Leave a Reply

Your email address will not be published. Required fields are marked *