Headlines

ಸಿಂಪಲ್ ಸೀರೆಯಲ್ಲೂ ರಾಯಲ್ ಲುಕ್… ರಾಧಿಕಾ ಪಂಡಿತ್ ಅಂದಕ್ಕೆ ಫ್ಯಾನ್ಸ್ ಫಿದಾ

ಸಿಂಪಲ್ ಸೀರೆಯಲ್ಲೂ ರಾಯಲ್ ಲುಕ್… ರಾಧಿಕಾ ಪಂಡಿತ್ ಅಂದಕ್ಕೆ ಫ್ಯಾನ್ಸ್ ಫಿದಾ

ಸಿಂಪಲ್ ಸೀರೆಯಲ್ಲೂ ರಾಯಲ್ ಲುಕ್… ರಾಧಿಕಾ ಪಂಡಿತ್ ಅಂದಕ್ಕೆ ಫ್ಯಾನ್ಸ್ ಫಿದಾ

ರಾಧಿಕಾ ಪಂಡಿತ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೊಸದಾಗಿ ಫೋಟೊಗಳನ್ನು ಶೇರ್ ಮಾಡಿದ್ದು, ನಟಿಯ ಅಂದ-ಚೆಂದಕ್ಕೆ ಅಭಿಮಾನಿಗಳು ಮನಸೋತಿದ್ದಾರೆ. ಬಿಳಿ ಸೀರೆಯಲ್ಲಿ ಸಾಕ್ಷಾತ್ ಮಹಾಲಕ್ಷ್ಮಿ ಥರ ಕಾಣಿಸ್ತಿದ್ದಾರೆ ಎಂದು ಹಾಡಿ ಹೊಗಳಿದ್ದಾರೆ ಜನ.

ನಟಿ ರಾಧಿಕಾ ಪಂಡಿತ್ ಸಿನಿಮಾದಿಂದ ದೂರ ಉಳಿದು ವರ್ಷ ಹಲವು ಆಗಿದ್ದರೂ, ಇಂದಿಗೂ ನಟಿಯ ಕ್ರೇಜ್ ಕಡಿಮೆಯಾಗಿಲ್ಲ. ನಟಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡರೆ ಸಾಕು, ಅದು ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. ಇದೀಗ ಹೊಸ ಫೋಟೊದೊಂದಿಗೆ ನಟಿ ಕಾಣಿಸಿಕೊಂಡಿದ್ದಾರೆ.

ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್, ಇದೀಗ ಬಿಳಿ ಬಣ್ಣದ ಸೀರೆಯುಟ್ಟು, ಪುಟ್ಟ ಬಿಂದಿ, ಅದರ ಮೇಲೊಂದು ಕುಂಕುಮ, ಕುತ್ತಿಗೆ ಕೈಗೆ ಚಿನ್ನದ ಜ್ಯುವೆಲ್ಲರಿ ಧರಿಸಿ, ಓಪನ್ ಹೇರ್ ಬಿಟ್ಕೊಂಡು ಪೋಸ್ ಕೊಟ್ಟಿದ್ದು, ನಟಿಯ ಫೋಟೊಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ಫೋಟೊದಲ್ಲಿ ಕಾಣುವಂತೆ ರಾಧಿಕಾ ಪಂಡಿತ್ ಏನೂ ಹೇವಿ ಮೇಕಪ್ ಮಾಡಿ, ಗ್ರಾಂಡ್ ಸೀರೆ ಉಟ್ಟಿಲ್ಲ. ಸಿಂಪಲ್ ಲುಕ್, ಸಿಂಪಲ್ ಮೇಕಪ್ ನಲ್ಲಿ ರಾದಿಕಾ ರಾಯಲ್ ಆಗಿ ಕಾಣಿಸುತ್ತಿದ್ದು, ನಟಿಯ ಅಂದಕ್ಕೆ ಅಭಿಮಾನಿಗಳು ಮನಸೋತಿದ್ದಾರೆ.

ಅಭಿಮಾನಿಗಳು ರಾಧಿಕಾ ಫೋಟೊ ನೋಡಿ ನಿಮ್ಮ ಅಂದಕ್ಕೆ ಮರುಳಾಗುತ್ತಿದ್ದೇನೆ, ಮತ್ತೆ ಮತ್ತೆ ನಿಮ್ಮ ಪ್ರೀತಿಯಲ್ಲಿ ಬೀಳುತ್ತಿದ್ದೇನೆ. ಸೀರೆ ಯುಟ್ಟ ನವಿಲು ನೀನೂ..ದೃಷ್ಟಿಯಾಗ ಬಹುದುಯೇನೊಕನ್ನಡಿನೆ ಬೇಡವೆ, ನಾನು ಕನ್ನಡಿ ಆಗುವೇ ಎನ್ನುತ್ತಾ ನಟಿಯ ಅಂದವನ್ನು ಹೊಗಳಿದ್ದಾರೆ.

ಕೆಲವು ದಿನಗಳ ಹಿಂದೆ ರಾಧಿಕಾ ಪಂಡಿತ್ ಮುಂಬೈನಲ್ಲಿರುವ ಸಮುದ್ರಕ್ಕೆ ಎದುರಾಗಿರುವ ಮನೆಯಲ್ಲಿ ನಿಂತಿರುವ ಫೋಟೊಗಳನ್ನು ಹಂಚಿಕೊಂಡಿದ್ದರು. ಈ ಫೋಟೊಗಳನ್ನು ಸ್ವತಃ ಯಶ್ ಅವರು ತೆಗೆದಿರುವುದಾಗಿ ನಟಿ ತಿಳಿಸಿದ್ದರು. ಇದರ ಜೊತೆ The way, this beholder sees me through his lens.. ಎನ್ನುವ ಕ್ಯಾಪ್ಶನ್ ಕೂಡ ಹಾಕಿದ್ದರು.

ಸದ್ಯ ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿರುವ ರಾಧಿಕಾ ಪಂಡಿತ್ ಹೆಚ್ಚಾಗಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ. ತಮ್ಮ ಫ್ಯಾಮಿಲಿ ಫೋಟೊ, ಕ್ಯಾಂಡೀಡ್ ಫೋಟೊಗಳನ್ನು ಹಾಗೂ ಯಶ್ ಜೊತೆಗಿನ ಮುದ್ದಾದ ಕ್ಷಣಗಳನ್ನು ನಟಿ ಶೇರ್ ಮಾಡುತ್ತಿರುತ್ತಾರೆ.

Source link

Leave a Reply

Your email address will not be published. Required fields are marked *