Headlines

ಕೋರ್ಟ್ ಕೇಸಲ್ಲಿ ಕೋಟಿ ಕೋಟಿ ಕಳೆದುಕೊಂಡ ಆಸ್ಟ್ರೇಲಿಯಾ ಶ್ರೀಮಂತ ಮಹಿಳೆ; ಸಂಪತ್ತನ್ನೆಲ್ಲಾ ಹಂಚುವಂತೆ ಆದೇಶ! | Australian Billionaire Gina Rinehart Ordered To Share Mining Fortune After 13 Year Legal Battle Sat

ಕೋರ್ಟ್ ಕೇಸಲ್ಲಿ ಕೋಟಿ ಕೋಟಿ ಕಳೆದುಕೊಂಡ ಆಸ್ಟ್ರೇಲಿಯಾ ಶ್ರೀಮಂತ ಮಹಿಳೆ; ಸಂಪತ್ತನ್ನೆಲ್ಲಾ ಹಂಚುವಂತೆ ಆದೇಶ! | Australian Billionaire Gina Rinehart Ordered To Share Mining Fortune After 13 Year Legal Battle Sat



ಕೋರ್ಟ್ ಕೇಸಲ್ಲಿ ಕೋಟಿ ಕೋಟಿ ಕಳೆದುಕೊಂಡ ಆಸ್ಟ್ರೇಲಿಯಾ ಶ್ರೀಮಂತ ಮಹಿಳೆ; ಸಂಪತ್ತನ್ನೆಲ್ಲಾ ಹಂಚುವಂತೆ ಆದೇಶ! | Australian Billionaire Gina Rinehart Ordered To Share Mining Fortune After 13 Year Legal Battle Sat

ಆಸ್ಟ್ರೇಲಿಯಾದ ಶ್ರೀಮಂತೆ ಗೀನಾ ರೈನ್‌ಹಾರ್ಟ್ ವಿರುದ್ಧ ಅವರ ಇಬ್ಬರು ಮಕ್ಕಳು ಹಾಗೂ ತಂದೆಯ ಬ್ಯುಸಿನೆಸ್ ಪಾರ್ಟ್ನರ್‌ಗಳ ಮಕ್ಕಳು 13 ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿದ್ದರು. ಇದೀಗ ಕೋರ್ಟ್ ತೀರ್ಪು ನೀಡಿದ್ದು, ಗೀನಾ ತಮ್ಮ ಸಂಪತ್ತಿನ ಪಾಲನ್ನು ಹಂಚಿಕೊಳ್ಳಬೇಕಾಗಿದೆ.

ದಶಕಗಳ ಕಾಲ ನಡೆದ ಕಾನೂನು ಸಮರದ ನಂತರ, ಆಸ್ಟ್ರೇಲಿಯಾದ ಅತ್ಯಂತ ಶ್ರೀಮಂತ ಮಹಿಳೆ ಗೀನಾ ರೈನ್‌ಹಾರ್ಟ್ ತಮ್ಮ ಸಂಪತ್ತಿನ ಲಾಭಾಂಶವನ್ನು ಇತರ ಕುಟುಂಬ ಸದಸ್ಯರಿಗೆ ನೀಡಬೇಕೆಂದು ಕೋರ್ಟ್ ತೀರ್ಪು ನೀಡಿದೆ. 

ಆಸ್ಟ್ರೇಲಿಯಾದ ನಂಬರ್ 1 ಶ್ರೀಮಂತೆ ಗೀನಾ, ತಮ್ಮ ಗಣಿಗಾರಿಕೆ ಸಾಮ್ರಾಜ್ಯದಿಂದ ಬರುವ ಲಾಭವನ್ನು ಬೇರೆ ಎರಡು ಕುಟುಂಬಗಳೊಂದಿಗೆ ಹಂಚಿಕೊಳ್ಳಬೇಕಾಗಿದೆ. 1992ರಲ್ಲಿ ಗೀನಾ ತಮ್ಮ ತಂದೆಯ ಗಣಿಗಳನ್ನು ವಹಿಸಿಕೊಂಡಿದ್ದರು. ಪಶ್ಚಿಮ ಆಸ್ಟ್ರೇಲಿಯಾದ ಪಿಲ್ಬಾರಾದಲ್ಲಿ ಈ ಗಣಿಗಳಿವೆ. ಗೀನಾ ಅವರ ಇಬ್ಬರು ಮಕ್ಕಳು ಮತ್ತು ಅವರ ತಂದೆಯ ಬ್ಯುಸಿನೆಸ್ ಪಾರ್ಟ್ನರ್‌ಗಳ ಮಕ್ಕಳು ಆಸ್ತಿಯಲ್ಲಿ ಪಾಲು ಕೇಳಿ 13 ವರ್ಷಗಳ ಕಾಲ ಸುದೀರ್ಘ ಕಾನೂನು ಹೋರಾಟ ನಡೆಸಿದ್ದರು. 

ಆಸ್ಟ್ರೇಲಿಯಾದ ಅತಿದೊಡ್ಡ ಕಬ್ಬಿಣದ ಅದಿರು ಗಣಿಗಳಿಂದ ಬರುವ ಲಾಭದ ಪಾಲನ್ನು ಗೀನಾ ಈಗ ಹಂಚಿಕೊಳ್ಳಬೇಕಾಗಿದೆ. ಪಿಲ್ಬರಾ ಪ್ರದೇಶದಲ್ಲಿರುವ ಅತ್ಯಂತ ಲಾಭದಾಯಕ ಕಬ್ಬಿಣದ ಅದಿರು ಗಣಿಗಳಿಂದ ಬರುವ ರಾಯಧನದ ಬಗ್ಗೆ ಈ ವಿವಾದವಿತ್ತು. ಆದರೆ, ಗಣಿಗಾರಿಕೆಯ ಹಕ್ಕು ರೈನ್‌ಹಾರ್ಟ್ ಅವರ ಬಳಿಯೇ ಇರುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಅಮ್ಮನ ವಿರುದ್ಧವೇ ಮಕ್ಕಳಿಂದ ಆರೋಪ

ಆಸ್ಟ್ರೇಲಿಯಾದ ಅತಿದೊಡ್ಡ ಕಬ್ಬಿಣದ ಅದಿರು ಯೋಜನೆಗಳಲ್ಲಿ ಒಂದಾದ ‘ಹೋಪ್ ಡೌನ್ಸ್’ ಅನ್ನು ಕೇಂದ್ರವಾಗಿಟ್ಟುಕೊಂಡು ಈ ಕಾನೂನು ಸಮರ ನಡೆದಿತ್ತು. ಲಾಭದಾಯಕ ಗಣಿಗಾರಿಕೆ ಹಕ್ಕುಗಳನ್ನು ತಮಗೆ ಸಿಗದಂತೆ ಮಾಡಲು, ತಮ್ಮ ತಾಯಿ ಅವುಗಳನ್ನು ಫ್ಯಾಮಿಲಿ ಟ್ರಸ್ಟ್‌ನಿಂದ ವ್ಯವಹಾರದ ಇನ್ನೊಂದು ವಿಭಾಗಕ್ಕೆ ವರ್ಗಾಯಿಸಿದ್ದಾರೆ ಎಂದು ಗೀನಾ ರೈನ್‌ಹಾರ್ಟ್ ಅವರ ಮಕ್ಕಳು ಆರೋಪಿಸಿದ್ದರು. ದಶಕಗಳ ಹಿಂದೆ ಈ ಗಣಿಗಾರಿಕೆ ಪ್ರದೇಶಗಳನ್ನು ಪತ್ತೆಹಚ್ಚುವಲ್ಲಿ ಪಾಲುದಾರರ ಕುಟುಂಬಗಳು ವಹಿಸಿದ ಪಾತ್ರವು ಈ ತೀರ್ಪಿನಲ್ಲಿ ನಿರ್ಣಾಯಕವಾಯಿತು. ರೈನ್‌ಹಾರ್ಟ್ ಅವರ ಕಂಪನಿ ‘ಹ್ಯಾನ್‌ಕಾಕ್ ಪ್ರಾಸ್ಪೆಕ್ಟಿಂಗ್’ ಈ ಆಸ್ತಿಗಳ ಸಂಪೂರ್ಣ ನಿಯಂತ್ರಣವನ್ನು ಹೊಂದಿದ್ದರೂ, ಪಾಲುದಾರರ ಹಕ್ಕನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಕಳೆದ ವರ್ಷವೊಂದರಲ್ಲೇ ರೈನ್‌ಹಾರ್ಟ್ ಕಂಪನಿಗೆ 832 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ ಲಾಭ ಬಂದಿತ್ತು.

ಈ ತೀರ್ಪು ಗೀನಾ ರೈನ್‌ಹಾರ್ಟ್ ಅವರ ಕಂಪನಿಗೆ ದೊಡ್ಡ ಆರ್ಥಿಕ ಹೊರೆಯಾಗಲಿದೆ. ಅವರು ಈಗ ಕೋಟ್ಯಂತರ ಡಾಲರ್‌ಗಳನ್ನು ರಾಯಧನದ ರೂಪದಲ್ಲಿ ಈ ಕುಟುಂಬಗಳಿಗೆ ನೀಡಬೇಕಾಗುತ್ತದೆ. ವಿಶ್ವದ ಅತ್ಯಂತ ಶ್ರೀಮಂತ ಮಹಿಳೆಯರಲ್ಲಿ ಒಬ್ಬರಾದ ಗೀನಾ ರೈನ್‌ಹಾರ್ಟ್‌ಗೆ ಇದು ದೊಡ್ಡ ಕಾನೂನು ಹಿನ್ನಡೆಯಾಗಿದೆ. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಗೀನಾ ಸಿದ್ಧತೆ ನಡೆಸಿದ್ದಾರೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.



Source link

Leave a Reply

Your email address will not be published. Required fields are marked *