ಕರ್ಣ ಮತ್ತು ನಿಧಿಯನ್ನು ಬೇರೆ ಮಾಡಲು ರಮೇಶ್ ಮಾಡಿದ ಪ್ಲ್ಯಾನ್ ಯಶಸ್ವಿಯಾಗಿದ್ದು, ನಿಧಿಯನ್ನು ಮದುವೆಯಾಗಲು ಬಂದ ಹ್ಯಾಂಡ್ಸಮ್ ಡಾಕ್ಟರ್ ಅರ್ಜುನ್, ನಿಧಿಯನ್ನು ಒಪ್ಪಿಕೊಂಡಿದ್ದಾನೆ. ಇದರಿಂದಾಗಿ ತಮ್ಮ ಪ್ರೀತಿಯನ್ನು ಹೇಳಿಕೊಳ್ಳಲಾಗದೆ ಕರ್ಣ ಮತ್ತು ನಿಧಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕರ್ಣ ಸೀರಿಯಲ್ (Karna Serial) ಇದೀಗ ಕುತೂಹಲದ ಹಂತ ತಲುಪಿದೆ. ಕರ್ಣ ಮತ್ತು ನಿಧಿಯನ್ನು ದೂರ ಮಾಡಲು ರಮೇಶ್ ಇನ್ನಿಲ್ಲದಂತೆ ಪ್ಲ್ಯಾನ್ ಮಾಡುತ್ತಿದ್ದಾನೆ.

ಅದರ ಭಾಗವಾಗಿ ನಿಧಿಗೆ ಬೇರೆ ಮದುವೆ ಮಾಡಲು ಹುಡುಗನನ್ನು ನೋಡಿದ್ದಾನೆ. ಹುಡುಗ ಬಂದಾಗ ಆತನನ್ನು ಹೇಗಾದರೂ ಓಡಿಸಬಹುದು ಎಂದು ಕರ್ಣ ಮತ್ತು ನಿಧಿ ಪ್ಲ್ಯಾನ್ ಮಾಡಿ ಇದಕ್ಕೆ ಒಪ್ಪಿದ್ದರು.

ಆದರೆ ಆಗಿದ್ದೇ ಬೇರೆ. ಅಲ್ಲಿ ಬಂದವ ಹ್ಯಾಂಡ್ಸಮ್ ಅರ್ಜುನ್. ಅರ್ಜುನ ಒಬ್ಬ ಡಾಕ್ಟರ್, ಹಾರ್ಟ್ ಸರ್ಜನ್. ಸಿಕ್ಕಾಪಟ್ಟೆಯ ಒಳ್ಳೆಯ ಯುವಕ. ಅವನು ಬಂದವನೇ ನಿಧಿಯನ್ನು ನೋಡಿದ್ದಾನೆ.

ಅರ್ಜುನ್ ಎಲ್ಲರಿಗೂ ಇಷ್ಟ ಆಗಿಬಿಟ್ಟಿದ್ದಾನೆ. ಅವನು ತನ್ನನ್ನು ಒಪ್ಪಿಕೊಳ್ಳಬಾರದು ಎಂದು ನಿಧಿ ಸೊಟ್ಟ ಮೂತಿ ಮಾಡಿ ಬಂದಿದ್ದಾಳೆ.

ಆದರೂ ಕರ್ಣ ನಿಧಿಯನ್ನು ಒಪ್ಪಿಕೊಂಡು ಬಿಟ್ಟಿದ್ದಾನೆ. ಎಲ್ಲರಿಗೂ ಖುಷಿಯೋ ಖುಷಿ. ನಿಧಿ ಮತ್ತು ಕರ್ಣ ಮಾತ್ರ ಇಂಗು ತಿಂದ ಮಂಗನಂತಾಗಿದ್ದರೆ, ತನ್ನ ಪ್ಲ್ಯಾನ್ ಸಕ್ಸಸ್ ಆಗಿರೋ ಖುಷಿಯಲ್ಲಿ ಇದ್ದಾನೆ ರಮೇಶ್.

ಈಗೇನಿದ್ದರೂ ನಿಧಿ ಮತ್ತು ಕರ್ಣ ತಮ್ಮ ಲವ್ಸ್ಟೋರಿಯನ್ನು ಎಲ್ಲರ ಎದುರು ಹೇಳಲೇಬೇಕಿದೆ. ಅದಕ್ಕೆ ಅವಕಾಶ ಸಿಗುತ್ತಾ ಎನ್ನುವುದು ಮುಂದಿರುವ ಪ್ರಶ್ನೆ. ಈಗ ಬಂದಿರುವ ಅರ್ಜುನ್ನನ್ನು ನೋಡಿದರೆ, ಅವರಿಬ್ಬರೂ ತಮ್ಮ ಪ್ರೀತಿಯನ್ನು ಹೇಳಿಕೊಳ್ಳಲು ಇಷ್ಟು ಬೇಗ ಅವಕಾಶ ಸಿಗುವುದಿಲ್ಲ ಎಂದೇ ಅನ್ನಿಸುತ್ತಿದೆ.

Source link
Karna Serial: ಮೂತಿ ಸೊಟ್ಟ ಮಾಡಿದ್ರೂ ಅರ್ಜುನ್ಗೆ ಇಷ್ಟವಾಗಿಬಿಟ್ಟಳು ನಿಧಿ; ಕರ್ಣನ ಲವ್ಸ್ಟೋರಿ ಭವಿಷ್ಯ ಏನು