
ಬೆಂಗಳೂರಿನ ವಿಪರೀತ ಬಿಸಿಲಿನಲ್ಲಿ ಹೆಲ್ಮೆಟ್ ಧರಿಸುವ ಕಷ್ಟದ ಬಗ್ಗೆ ಯುವತಿಯೊಬ್ಬಳು ರೀಲ್ಸ್ ಮೂಲಕ ಸಿಎಂಗೆ ಮನವಿ ಮಾಡಿದ್ದಾಳೆ. ಈ ಬಿಸಿಲಿಗೆ ಕೂದಲು ಉದುರುತ್ತಿದೆ, ನಿಯಮ ಸಡಿಲಗೊಳಿಸಿ ಎಂದು ಕೇಳಿಕೊಂಡಿದ್ದು, ಈ ವಿಡಿಯೋ ವೈರಲ್ ಆಗಿದೆ.
ಬೆಂಗಳೂರಿನಲ್ಲಿ ಮಾತ್ರವಲ್ಲದೇ ಕರ್ನಾಟಕದ ಬಹುತೇಕ ಎಲ್ಲೆಡೆ ಈ ಬಾರಿ ವಿಪರೀತ ಬಿಸಿಲು ಉಂಟಾಗಿದೆ. ಬೆಂಗಳೂರಿನಲ್ಲಿಯೂ ದಾಖಲೆಯ ಪ್ರಮಾಣದಲ್ಲಿ ಸೆಖೆಯಾಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ವಾಹನ ಸವಾರರು ಪರದಾಡುವಂತಾಗಿದೆ. ಅದರಲ್ಲಿಯೂ ಟು ವ್ಹೀಲರ್ ಓಡಿಸುವವರ ಸ್ಥಿತಿ ಆ ದೇವರಿಗೇ ಪ್ರೀತಿ. ಮುಂದಿನ ಮಾತ್ರವಲ್ಲದೇ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಮಾಡಿ ದಶಕಗಳೇ ಕಳೆದಿವೆ. ಅದರಲ್ಲಿಯೂ ಐಎಸ್ಐ ಮಾರ್ಕ್ ಹೆಲ್ಮೆಟ್, ಫುಲ್ ಹೆಲ್ಮೆಟ್ ಹೀಗೆ ರೂಲ್ಸ್ ಸಿಕ್ಕಾಪಟ್ಟೆ ಇದೆ. ರೂಲ್ಸ್ ಬ್ರೇಕ್ ಮಾಡಿ ಐದಾರು ಜನ ಒಂದೇ ಬೈಕ್ನಲ್ಲಿ ಹೆಲ್ಮೆಟ್ ಇಲ್ಲದೇ, ಸಿಗ್ನಲ್ ಜಂಪ್ ಮಾಡಿ ಹೋದರೂ ಪೊಲೀಸರು ಹಿಡಿಯುವುದೇ ಇಲ್ಲ, ನಮ್ಮಂಥ ಬಡಪಾಯಿಗಳು ಸಿಕ್ಕಾಕಿಕೊಳ್ತಾರೆ ಎನ್ನುವ ಗಂಭೀರ ಆರೋಪ ಸಾಕಷ್ಟು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಲೇ ಇವೆ ಅನ್ನಿ.
ಸಕತ್ ಬಿಸಿಲು
ಅದೇನೇ ಇದ್ದರೂ ಎಲ್ಲಾ ರೂಲ್ಸ್ ಫಾಲೋ ಮಾಡುವ ಕರ್ನಾಟಕದ ಮಂದಿ ಅದರಲ್ಲಿಯೂ ಬೆಂಗಳೂರಿಗರಿಗೆ ಈ ಬಾರಿಯ ಬಿಸಿಲು ಸಕತ್ ತೊಂದರೆ ಕೊಡುತ್ತಿದೆ. ಹೆಲ್ಮೆಟ್ ಹಾಕಿಕೊಂಡು ಸವಾರಿ ಮಾಡುವುದು ಕಷ್ಟವಾಗಿದೆ. ಈ ಹಿಂದೆ ಕೆಲವು ಊರುಗಳಲ್ಲಿ ಬೇಸಿಗೆ ಕಾಲದಲ್ಲಿ ಹೆಲ್ಮೆಟ್ ಕಡ್ಡಾಯ ಮಾಡಬಾರದು ಎಂದು ಹೈಕೋರ್ಟ್ ಆದೇಶ ಹೊರಡಿಸಿತ್ತು. ಆದರೆ ಸದ್ಯ ಬೆಂಗಳೂರಿನ ಸ್ಥಿತಿ ಹಾಗಿಲ್ಲ. ಎಲ್ಲಾ ನಿಯಮ ಅನುಸರಿಸುವ ಜನರು ನಿಯಮ ಫಾಲೋ ಮಾಡಲೇಬೇಕು. ಇಲ್ಲದಿದ್ದರೆ ದಂಡ ಬೀಳುತ್ತದೆ.
ಯವತಿ ರೀಲ್ಸ್
ಇದೀಗ ಯುವತಿಯೊಬ್ಬಳು ಇದನ್ನೇ ಮುಂದಿಟ್ಟುಕೊಂಡು ರೀಲ್ಸ್ ಮಾಡಿದ್ದಾರೆ. varshini_ambiga ಎನ್ನುವ ಇನ್ಸ್ಟಾಗ್ರಾಮ್ನಲ್ಲಿ ಇದನ್ನು ಶೇರ್ ಮಾಡಲಾಗಿದೆ. ಸಿಎಂ ಸಾಹೇಬ್ರೆ, ಸಿಎಂ ಸಾಹೇಬ್ರೆ, ನಮ್ ಸ್ಥಿತಿ ನೋಡಿ, ಹೆಲ್ಮೆಟ್ ಹಾಕಿಕೊಳ್ಳುವವರ ಸ್ಥಿತಿ ನೋಡಿ ಎಂದು ನೋವು ತೋಡಿಕೊಂಡಿದ್ದಾರೆ ಯುವತಿ. ಈ ಮೂಲಕ ಹೆಲ್ಮೆಟ್ ಕಡ್ಡಾಯ ಮಾಡದಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಕೂದಲ ಭಾಗ್ಯ
ಮಧ್ಯೆ ಒಮ್ಮೆ ಹೆಲ್ಮೆಟ್ ತೆಗೆದು ಈ ಬಿಸಿಲಿಗೆ ನಮ್ಮ ಕೂದಲೆಲ್ಲಾ ಉದುರಿ ಹೋಗ್ತಿದೆ. ದಯವಿಟ್ಟು ನೋಡಿ ಎಂದು ಹೆಲ್ಮೆಟ್ ಹಾಕಿಕೊಂಡಿದ್ದಾರೆ. ಹೆಲ್ಮೆಟ್ ಹಾಕಿಲ್ಲ ಅಂತ ಮತ್ತೆ ದಂಡ ವಿಧಿಸಬೇಡಿ ಎಂದೂ ಹೇಳೋದನ್ನು ಮರೆತಿಲ್ಲ ಯುವತಿ. ಏಕೆಂದರೆ ಅವರಿಗೂ ಗೊತ್ತು, ಸರಿಯಾಗಿ ನಿಮಯ ಪಾಲನೆ ಮಾಡುವವರಿಗೆ ಮಾತ್ರ ದಂಡ ಬೀಳುತ್ತೆ ಎನ್ನುವುದು. ಅದಕ್ಕೆ ಹಲವು ಮಂದಿ ತಮಾಷೆಗೆ ರಿಪ್ಲೈ ಮಾಡಿದ್ದಾರೆ. ಡೋಂಟ್ ವರಿ ಸಿಎಂ ಸಾಹೇಬ್ರು ಕೂದಲಭಾಗ್ಯ ಕೊಡ್ತಾರೆ, ಕೂದಲು ಉದುರಿದರೆ ಭಯ ಪಡಬೇಡಿ ಎಂದಿದ್ದರೆ, ಮತ್ತೆ ಕೆಲವರು ದಯವಿಟ್ಟು ಹೆಲ್ಮೆಟ್ ಕಡ್ಡಾಯ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.