ರಾಕಿಂಗ್ ಸ್ಟಾರ್ ಯಶ್ ಅವರ (ಯಶ್) ‘ಟಾಕ್ಸಿಕ್’ ಸಿನಿಮಾ ಕನ್ನಡದ ಜೊತೆಗೆ ಇಂಗ್ಲಿಷ್ ನಲ್ಲೂ ಶೂಟ್ ಆಗಿದೆ. ಈ ಸಿನಿಮಾ ಜೂನ್ 4ರಂದು ವಿಶ್ವಾದ್ಯಂತ ತೆರೆಗೆ ಬರುತ್ತಿದೆ. ಇದರ ಜೊತೆಗೆ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದಲ್ಲೂ ಯಶ್ ನಟಿಸಿದ್ದಾರೆ. ಈಗ ಯಶ್ ಅವರು ಅಮೆರಿಕದ ಲಾಸ್ ಎಂಜಲೀಸ್ ಗೆ ತೆರಳಿದ್ದಾರೆ. ಅಲ್ಲಿ ‘ಸಿನಿಮಾಕಾನ್ 2026’ರಲ್ಲಿ ನಡೆದಿದ್ದು ತಮ್ಮ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ.
ಇಂಗ್ಲಿಷ್ ರಿಪೋರ್ಟರ್ ಒಬ್ಬರು ಯಶ್ ಬಳಿ ‘ಟಾಕ್ಸಿ’ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಅವರು ‘ಟಾಕ್ಸಿಕ್’ ಟೀಸರ್ ಹೊಗಳಿದ್ದಾರೆ. ವಿಶ್ಯುವಲ್ಸ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ‘ನಮಗೆ ಇಲ್ಲಿ ಟಾಕ್ಸಿಕ್ ಸಿನಿಮಾದ ರೀತಿಯ ವಿಶ್ಯುವಲ್ಸ್ ಏಕೆ ಕಾಣಲ್ಲ’ ಎಂದು ತಮಗೆ ತಾವೇ ಪ್ರಶ್ನೆ ಮಾಡಿಕೊಂಡಿದ್ದಾಗಿ ರಿಪೋರ್ಟರ್ ಹೇಳಿದ್ದಾರೆ. ಜೊತೆಗೆ ಸಿನಿಮಾ ಮಾಡುವಾಗ, ಆ್ಯಕ್ಷನ್ ಮಾಡುವಾಗ ಸಾಕಷ್ಟು ಫನ್ ಮಾಡಿದ್ದರೆ ಅಲ್ಲವೇ ಎಂದು ಯಶ್ ಕೇಳಿದ್ದಾರೆ.
‘ಟಾಕ್ಸಿಕ್ ತುಂಬಾನೇ ಮಹತ್ವಾಕಾಂಕ್ಷೆಯ ಸಿನಿಮಾ. ಜನರು ನನಗೆ ಯಶಸ್ಸು ಕೊಟ್ಟಿದ್ದು ಸೆಲೆಬ್ರೇಟ್ ಮಾಡಲಾಗಲಿ ಅಥವಾ ಫನ್ ಮಾಡೋದಕ್ಕಾಗಲಿ ಅಲ್ಲ. ಪ್ರತಿ ಬಾರಿಯೂ ದೊಡ್ಡ ಯಶಸ್ಸು ಸಿಕ್ಕಾಗ ಈ ಪಾತ್ರ ಮಾಡುವ ಜವಾಬ್ದಾರಿ ನನ್ನ ಮೇಲೆ ಸದಾ ಕಾಣುತ್ತದೆ’ ಯಶ್.
. @musetv1 ಅತಿಥೇಯ ಮೈಕೆಲ್ ಸ್ಯಾಂಡೋವಲ್ ಇತ್ತೀಚಿನದನ್ನು ಕಂಡರು #ವಿಷಕಾರಿ ಟೀಸರ್ ಮತ್ತು ವೀಡಿಯೊದಿಂದ ದೃಶ್ಯಗಳು ಮತ್ತು ಆಕ್ಷನ್ ಪೀಸಸ್ಗಳಿಂದ ಪ್ರಭಾವಿತವಾಗಿದೆ.
ಇಂತಹ ದೃಶ್ಯಗಳನ್ನು ನಾವು ಅಮೇರಿಕಾದಲ್ಲಿ ಏಕೆ ನೋಡಬಾರದು ಎಂದೂ ಅವರು ಹೇಳಿದ್ದಾರೆ
ಮತ್ತು #YashBOSS ಟಾಕ್ಸಿಕ್ ಮೂವಿ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.#ToxicTheMovie #ಯಶ್ pic.twitter.com/KfhBL2vcsH
— ₹ớṧħᾱᾓ ᴿᵃʸᵃ ⁰⁴⁻⁰⁶⁻²⁶ 🎟️🎩 (@Roshan_Rsy) ಏಪ್ರಿಲ್ 15, 2026
ಅಮೆರಿಕದಲ್ಲೂ ಯಶ್ ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಹೇಳಿದರು. ‘ಭಾರತದಲ್ಲಿ ನನ್ನನ್ನು ಜನರು ಸಾಕಷ್ಟು ಬೆಂಬಲಿಸಿದ್ದಾರೆ. ಕಥೆ ಹಾಗೂ ಭಾರತ ಚಿತ್ರರಂಗವನ್ನು ವಿಶ್ವ ಮಟ್ಟಕ್ಕೆ ತೆಗೆದುಕೊಳ್ಳಬೇಕು ಎಂಬುದು ನನ್ನ ಉದ್ದೇಶ’ ಎಂದು ಯಶ್ ಹೇಳಿದ್ದಾರೆ. ಅವರ ಹೇಳಿಕೆಗೆ ಎಲ್ಲ ಕಡೆಯಿಂದ ಮೆಚ್ಚುಗೆ ಸಿಗುತ್ತಿದೆ.
ಇದನ್ನೂ ಓದಿ: ನೀವಂದುಕೊಂಡಂತಿಲ್ಲ ‘ಟಾಕ್ಸಿಕ್’, ಕಾಣುವುದೇ ಒಂದು, ಇರುವುದೇ ಒಂದು ಎಂದ ಯಶ್
ಯಶ್ ಅವರು ಸಾಮಾನ್ಯ ಕುಟುಂಬದಿಂದ ಬಂದವರು. ಈಗ ಭಾರತ ಚಿತ್ರರಂಗವನ್ನು ವಿಶ್ವ ಮಟ್ಟಕ್ಕೆ ಹೋಗುವ ಕನಸು ಕಂಡು, ಅದರಲ್ಲಿ ಯಶಸ್ಸು ಕಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.