ಪುತ್ತೂರು ಮಹಾಲಿಂಗೇಶ್ವರ ಜಾತ್ರೆ: ಇಂದು, ನಾಳೆ ಮದ್ಯ ಮಾರಾಟ ನಿಷೇಧ, ಸಂಚಾರ ಬದಲಾವಣೆ | Puttur Mahalingeshwar Jatre Liquor Sale Ban Today Tomorrow Traffic Changes Parking Details Mrq

ಪುತ್ತೂರು ಮಹಾಲಿಂಗೇಶ್ವರ ಜಾತ್ರೆ: ಇಂದು, ನಾಳೆ ಮದ್ಯ ಮಾರಾಟ ನಿಷೇಧ, ಸಂಚಾರ ಬದಲಾವಣೆ | Puttur Mahalingeshwar Jatre Liquor Sale Ban Today Tomorrow Traffic Changes Parking Details Mrq



ಪುತ್ತೂರು ಮಹಾಲಿಂಗೇಶ್ವರ ಜಾತ್ರೆ: ಇಂದು, ನಾಳೆ ಮದ್ಯ ಮಾರಾಟ ನಿಷೇಧ, ಸಂಚಾರ ಬದಲಾವಣೆ | Puttur Mahalingeshwar Jatre Liquor Sale Ban Today Tomorrow Traffic Changes Parking Details Mrq

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಯ ಪ್ರಯುಕ್ತ, ಶಾಂತಿ ಸುವ್ಯವಸ್ಥೆ ಕಾಪಾಡಲು ಏ.17 ಮತ್ತು 18ರಂದು ಮದ್ಯ ಮಾರಾಟ ನಿಷೇಧಿಸಲಾಗಿದೆ. ಜಾತ್ರೆಯ ಹಿನ್ನೆಲೆಯಲ್ಲಿ ಏ.16 ಮತ್ತು 17ರಂದು ನಗರದಲ್ಲಿ ವಾಹನ ಸಂಚಾರ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ.

ಮಂಗಳೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆ ಹಿನ್ನೆಲೆಯಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಪುತ್ತೂರು ನಗರ ಠಾಣೆ ವ್ಯಾಪ್ತಿಯಲ್ಲಿನ ಬಾರ್ ಮತ್ತು ವೈನ್ ಶಾಪ್‍ಗಳನ್ನು ಏ.17ರಂದು ಬೆಳಗ್ಗೆ 6ರಿಂದ ಏ.18ರಂದು ಬೆಳಗ್ಗೆ 6 ಗಂಟೆವರೆಗೆ ಮುಚ್ಚಲು ಹಾಗೂ ಈ ಸಮಯದಲ್ಲಿ ಎಲ್ಲ ರೀತಿಯ ಅಮಲು ಪದಾರ್ಥಗಳ ಮಾರಾಟ ಮಾಡದಂತೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಆದೇಶಿಸಿದ್ದಾರೆ.

ಏ.16ರಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಭಂಡಾರದ ಆಗಮನದ ದಿನ ಮತ್ತು ಏ.17ರಂದು ಬ್ರಹ್ಮರಥೋತ್ಸವ ನಡೆಯಲಿರುವುದರಿಂದ ಪುತ್ತೂರು ನಗರ ವ್ಯಾಪ್ತಿಯಲಿ ಸಂಜೆ 4 ಗಂಟೆಯ ನಂತರ ಸಂಚಾರ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಆದೇಶಿಸಿದ್ದಾರೆ.ಏ.16ರಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳು ಮಾಮೂಲು ಪ್ರಕಾರ ಕಿರುವಾಳು ಬಪ್ಪಳಿಗೆಯಲ್ಲಿ ಬರುವಾಗ ಸಂಪ್ಯ ಕಡೆಯಿಂದ ಮಂಗಳೂರು- ಕಬಕ ಕಡೆಗೆ ಹೋಗುವ ವಾಹನಗಳು ಅಶ್ವಿನಿ ಜಂಕ್ಷನ್- ದರ್ಬೆ ಜಂಕ್ಷನ್-ಬೆದ್ರಾಳ- ಸಾಲ್ಮರ- ಪಡೀಲ್ ಮೂಲಕ ಸಂಚರಿಸಬೇಕು. ಮಂಗಳೂರು- ವಿಟ್ಲ- ಕಬಕ ಕಡೆಯಿಂದ ಬರುವ ವಾಹನಗಳು ಲಿನೆಟ್ ಜಂಕ್ಷನ್- ಬೊಳುವಾರು ಜಂಕ್ಷನ್- ಪಡೀಲ್- ಕೊಟೇಚಾ ಹಾಲ್ ಕ್ರಾಸ್- ಸಾಲ್ಮರ- ಎಪಿಎಂಸಿ- ದರ್ಬೆ- ಅಶ್ವಿನಿ ಜಂಕ್ಷನ್ ಮೂಲಕ ಸಂಚರಿಸಬೇಕು.

ಬಸ್ ಮಾರ್ಗ ಬದಲಾವಣೆ:

ಬಸ್ ನಿಲ್ದಾಣದಿಂದ ಹೊರಡುವ ಎಲ್ಲ ಸಾರಿಗೆ ಬಸ್‍ಗಳು ಎಂ.ಟಿ. ರಸ್ತೆಯ ಮೂಲಕ ತೆರಳಿ, ಮುಂದೆ ಎಡಕ್ಕೆ ತಿರುಗಿ, ಪರ್ಲಡ್ಕ ಬೈಪಾಸ್ ಮೂಲಕ ತೆರಳಬೇಕು. ಕಬಕ- ಮಂಗಳೂರು ಕಡೆಯಿಂದ ಬರುವ ಎಲ್ಲ ಸಾರಿಗೆ ಬಸ್‍ಗಳು ಲಿನೆಟ್- ಬೊಳುವಾರು- ಪಡೀಲ್- ಕೊಟೆಚಾ ಹಾಲ್ ಕ್ರಾಸ್- ಸಾಲ್ಮರ- ಎಪಿಎಂಸಿ ಮೂಲಕ ಬಸ್ ನಿಲ್ದಾಣಕ್ಕೆ ಸಂಚರಿಸಬೇಕು. ಉಪ್ಪಿನಂಗಡಿ ಕಡೆಯಿಂದ ಬರುವ ಎಲ್ಲ ಸಾರಿಗೆ ಬಸ್‍ಗಳು ಪಡೀಲ್- ಕೊಟೆಚಾ ಹಾಲ್ ಕ್ರಾಸ್- ಸಾಲ್ಮರ- ಎಪಿಎಂಸಿ ಮೂಲಕ ಬಸ್ ನಿಲ್ದಾಣಕ್ಕೆ ಸಂಚರಿಸಬೇಕು. ಸುಳ್ಯ- ಸಂಪ್ಯ- ಮಡಿಕೇರಿ ಕಡೆಯಿಂದ ಬರುವ ಎಲ್ಲ ಸಾರಿಗೆ ಬಸ್‍ಗಳು ಅಶ್ವಿನಿ ಜಂಕ್ಷನ್- ದರ್ಬೆ- ಅರುಣಾ ಥಿಯೇಟರ್ ಮೂಲಕ ಬಸ್ ನಿಲ್ದಾಣಕ್ಕೆ ಸಂಚರಿಸಬೇಕು.

ಆಟೋ ಸಂಚರಿಸುವ ಮಾರ್ಗ:

ನೆಹರೂ ನಗರ- ಬೊಳುವಾರು ಕಡೆಯಿಂದ ಬರುವ ಆಟೋಗಳು ಮಯೂರ ಇನ್ ಲ್ಯಾಂಡ್ ಬಳಿ ಪ್ರಯಾಣಿಕರನ್ನು ಇಳಿಸಿ, ಉರ್ಲಾಂಡಿ ಕ್ರಾಸ್ ಮೂಲಕ ವಾಪಸ್‌ ಸಂಚರಿಸಬೇಕು. ದರ್ಬೆ ಕಡೆಯಿಂದ ಬರುವ ಆಟೋರಿಕ್ಷಾಗಳು ಎಪಿಎಂಸಿ ರಸ್ತೆಯ ಮುಖಾಂತರ ನೆಲ್ಲಿಕಟ್ಟೆ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದಿಂದ ಗಾಂಧಿಕಟ್ಟೆ ಕಡೆಗೆ ಬಂದು ಪ್ರಯಾಣಿಕರನ್ನು ಇಳಿಸಿ, ವಾಪಸ್‌ ಮುಖ್ಯ ರಸ್ತೆಯಾಗಿ ದರ್ಬೆ ಕಡೆಗೆ ಸಂಚರಿಸಬೇಕು. ಪರ್ಲಡ್ಕ- ಬಪ್ಪಳಿಗೆ ಕಡೆಯಿಂದ ಬರುವ ಆಟೋರಿಕ್ಷಾಗಳು ಕಿಲ್ಲೆ ಮೈದಾನದ ಬಳಿ ಪ್ರಯಾಣಿಕರನ್ನು ಇಳಿಸಿ ವಾಪಸ್‌ ಸಂಚರಿಸಬೇಕು.

ಭಕ್ತಾದಿಗಳ ವಾಹನಗಳ ಪಾರ್ಕಿಂಗ್:

ಉಪ್ಪಿನಂಗಡಿ, ಕೋಡಿಂಬಾಡಿ, ಬನ್ನೂರು ಮಾರ್ಗದಿಂದ ಬರುವ ವಾಹನಗಳನ್ನು ಎಪಿಎಂಸಿ ಆವರಣ, ಕೊಂಬೆಟ್ಟು ಬೋರ್ಡ್ ಹೈಸ್ಕೂಲ್ ಮೈದಾನ, ಬಂಟರ ಭವನ, ನೆಲ್ಲಿಕಟ್ಟೆ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಾರ್ಕಿಂಗ್ ಮಾಡಬೇಕು.

ಇದನ್ನೂ ಓದಿ: ರೈಲು ಪ್ರಯಾಣಿಕರ ಗಮನಕ್ಕೆ, ಬರೋಬ್ಬರಿ 35 ದಿನಗಳ ಕಾಲ ಮಂಗಳೂರು-ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು ರದ್ದು!

ಸಂಪ್ಯ, ಸುಳ್ಯ, ಬೆಟ್ಟಂಪಾಡಿ, ಪಾಣಾಜೆ, ಪರ್ಲಡ್ಡ, ಪುರುಷರಕಟ್ಟೆ ಮಾರ್ಗದಿಂದ ಬರುವ ವಾಹನಗಳನ್ನು ತೆಂಕಿಲ ಗೌಡ ಸಮುದಾಯ ಭವನ, ತೆಂಕಿಲ ವಿವೇಕಾನಂದ ಶಾಲಾ ಮೈದಾನ, ಕಿಲ್ಲೆ ಮೈದಾನ, ತೆಂಕಿಲ ಗೌಡ ಸಮುದಾಯ ಭವನದ ಎದುರುಗಡೆ ಇರುವ ಖಾಲಿ ಜಾಗದಲ್ಲಿ ಪಾರ್ಕಿಂಗ್ ಮಾಡಬೇಕು.

ವಿಟ್ಲ, ಕಬಕ, ನೆಹರೂ ನಗರ ಮಾರ್ಗದಿಂದ ಬರುವ ವಾಹನಗಳನ್ನು ಜೈನ ಭವನದ ಪಾರ್ಕಿಂಗ್ ಜಾಗ, ಅಸ್ಮಿ ಲಾಡ್ಜ್ ಬಳಿ ಇರುವ ಖಾಲಿ ಜಾಗ, ತೆಂಕಿಲ ದರ್ಶನ್ ಹಾಲ್ ಪಕ್ಕದ ಖಾಲಿ ಜಾಗದಲ್ಲಿ ಪಾರ್ಕಿಂಗ್ ಮಾಡಬೇಕು ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಆದೇಶಿಸಿದ್ದಾರೆ.

ಇದನ್ನೂ ಓದಿ: ಟೀಚಿಂಗ್ ಬಿಟ್ಟು ಮೀನು ಮಾರಾಟಕ್ಕಿಳಿದ ಪುತ್ತೂರಿನ ಎಕನಾಮಿಕ್ಸ್ ಪ್ರೊಫೆಸರ್, ದುಪ್ಪಟ್ಟು ಆದಾಯ

Scroll to load tweet…



Source link

Leave a Reply

Your email address will not be published. Required fields are marked *